ಮತ್ತದೇ ಹಾಡು..
ಒಂದು ಹಳೆಯ ವಿಷಯದ ಮೇಲೆ "for a wrong reason" ಬರೆಯುತ್ತಿರುವುದು ಮುಜುಗುರದ ಮತ್ತು ಅಷ್ಟೇ ಬೇಜಾರಿನ ಸಂಗತಿಯೂ ಹೌದು.ಒಂದು ಲಘು ಬರಹದ ದಾಟಿಯ ವೈಯಕ್ತಿಕ ಅಭಿಪ್ರಾಯಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ಅನಿರಿಕ್ಷೀತ ಮತ್ತು ಅನಪೇಕ್ಷಣಿಯವೂ ಹೌದು.ಈ ಬರಹದ ಮೂಲಕ ನನ್ನ ನಾ ಸಮರ್ಥಿಸಿಕೊಳ್ಳುವುದಾಗಲಿ ಅಥವಾ "ಹೀಗಾಗಬಾರದಿತ್ತು" ಅಂತಾ ಗಲ್ಲ ಗಲ್ಲ ಬಡಿದುಕೊಳ್ಳುವುದಾಗಲಿ ಮಾಡಿವುದಿಲ್ಲ. ಕೆಲ ವಿಷಯಗಳಿಗೆ ನಾನು ಸ್ಪಷ್ಟೀಕರಣ ನೀಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಿದ್ದೇನೆ..
ಘಟನೆಯೊಂದರ ಅಥವಾ ವಸ್ತುವೊಂದರ ವಸ್ತುಸ್ಥಿತಿಯನ್ನು ಗ್ರಹಿಸುವ ಮನೋಭಾವ ವ್ಯಕ್ತಿಯಿಂದ ವ್ಯಕ್ತಿಗೇ ವಿಭಿನ್ನವಾಗಿರಲೇಬೇಕು.ನನಗೆ ಮೊಸರನ್ನ ಇಷ್ಟವಾಗಿದೆ, ಎಲ್ಲರಿಗೂ ಮೊಸರನ್ನವೇ ಇಷ್ಟವಾಗಬೇಕೂ ಅಂತಲೋ, ಶಾರುಕಖಾನನ್ನು ಎಲ್ಲರೂ ಮೆಚ್ಚಲೇಬೇಕೆಂದು ಗೋಳಾಡುವುದು ದಡ್ದತನ. ತೀರಾ ನಿನ್ನ ಬೆನ್ನು ನಾನು ಚಪ್ಪರಿಸುತ್ತೇನೆ, ನನ್ನ ಬೆನ್ನು ನೀನು ಚಪ್ಪರಿಸು ಅನ್ನುವುದು ನೈಜಸ್ಥಿತಿಯ ವಿಮರ್ಶೆಯಾಗದೇ ಅದು ಬಟ್ಟಂಗಿತನವಾಗುತ್ತದೆ. ನಾನೇನು ಸಂಘಟಕರ ಆಶಯದ ಬಗ್ಗೆ,ಸಮಾವೇಶದ ಓಚಿತ್ಯದ ಬಗ್ಗೆ ಪ್ರಶ್ನಿಸಿಲ್ಲ. ಅಲ್ಲಿ ನಾನು ಗಮನಿಸಿದ ಅಥವಾ ನಾನು ಅಂದುಕೊಂಡದ್ದನ್ನು ದಾಖಲಿಸಿದ್ದೇನೆ ಮತ್ತು ನಾನು ಗಮನಿಸಿದ್ದೇ ಸರಿ ಅನ್ನುವ ಹುಂಬತನವೂ ನನ್ನಲಿಲ್ಲ. ನಿಮಗೆಲ್ಲರಿಗೂ ಅವತ್ತು ಖುಷಿಯಾಗಿದ್ದರೆ ಅದಕ್ಕಿಂತ ಸಮಾಧಾನದ ವಿಷಯ ಇನ್ನೇನಿದೆ? ಆದರೆ ನಾವು ಖುಷಿಯಾಗಿದೀವಿ ನಿನಗೇನು ಕಷ್ಟ? ಅನ್ನುವ ದಾಟಿ ಯಾಕೋ ಅಂತ ತಿಳಿತಿಲ್ಲ.
ಒಂದು ಹೊಸ ಯೋಜನೆಯ ಬೆನ್ನು ಬಿದ್ದವನಿಗೆ ಆಗಬಹುದಾದ ಸಣ್ಣ ಪ್ರಮಾದದ ಬೆಲೆಯ ಬಗ್ಗೆಯೂ ಅರಿವಿರಬೇಕಾಗುತ್ತೆ.ಹೌದು ಮೊದಲ ಸಾರಿಯ ಪ್ರಯತ್ನದಲ್ಲಿ ಕೆಲ ಅಭಾಸಗಳಿರೋದು ಸಹಜ ಮತ್ತು ನಾವದನ್ನೂ ಕಂಡೂ ಕಾಣದಂತೆ ಇದ್ದು ಬಿಡಬೇಕು ಅನ್ನುವುದು ಸಹ ಒಪ್ಪತಕ್ಕ ಮಾತೇ.ಆದರೇ ಒಂದು ಇ -ಮೇಲ್ ಗೋ ಅಥವಾ ಕಮೆಂಟಿಗೋ ಸ್ಪಂದಿಸಿ ಒಂದು ಹೊಸ ಪ್ರಯತ್ನಕ್ಕೆ ಸಾಕ್ಷೀಯಾಗುವ ಭರವಸೆಯಲ್ಲಿ ಬಂದವರಿಗೆ ಕಾರ್ಯಕ್ರಮದ ಬಗ್ಗೆ ತಮ್ಮದೇ ಆದ ನೀರಿಕ್ಷೇಗಳಿರುತ್ತವೆ ಮತ್ತು ಆ ನೀರಿಕ್ಷೆಗಳೆಲ್ಲಾ ಹುಸಿಯಾದಾಗ ನಿರಾಶೆಯಾಗುವುದು ಸಹಜ.ಯಾವುದೋ ಒಂದು ಕಡೆ ಪ್ರಕಟಣೆ ನೀಡಿ ’ಬೇಕಾದವರೂ ಬರಲಿ, ಬ್ಯಾಡದವರು ಬಿಡ್ಲಿ’ ಅನ್ನೋವ ಧೋರಣೆಯಲ್ಲಿದ್ದರೇ ನಾನು ಆ ರೀತಿ ನಿರಿಕ್ಷಿಸಿದ್ದು ತಪ್ಪಾಗುತ್ತೆ.ನೀವೆ ಬೇಕಾದರೆ ಪರಿಚಯಿಸಿಕೊಳ್ಳಿ , ಬ್ಯಾಡಾದರೆ ಸುಮ್ನಿರಿ ಅನ್ನುವದಕ್ಕೋ ಅದೇನು ರಾಮನವಮಿ ಪಾನಕದ ತರ ಅಲ್ಲಾ, ಬೇಕಾದವರು ತಗೋಂಡು ಬ್ಯಾಡಾದವರು ಬಿಡೋದಕ್ಕೆ.ಇನ್ನೋಬ್ಬರು ಯಾರೋ ರಶೀದ್ ಬಟ್ಟೆಯ ಬಗ್ಗೆ ಮಾತಾಡಿದ್ದಾರೆ, ನಾನೇನು ಯಕ್ಶಗಾನದ ವೇಷ ಹಾಕಿ ಅಂತಾ ಎಲ್ಲೂ ಹೇಳಿಲ್ಲವಲ್ಲ. ಅವರ ಸೀದಾ ಸಾದಾ ಉಡುಪು ಕಂಡು ಖುಷಿಯಾಗಿ ಅದನ್ನೂ ಪ್ರಸ್ತಾಪಿಸಿದ್ದೆ ಅಷ್ಟೆ.ಎಲ್ಲರನ್ನು ಅನವಶ್ಯಕವಾಗಿ ಎಳೆದು ತಂದು ಕೆಸರು ಎರಚುವುದು ಬ್ಯಾಡಿತ್ತೆನೋ.ಇನ್ನು ಚಡ್ಡಿ ಹಾಕಿದವರಿಗೆ ಬ್ಲಾಗು ಬರಿಯಬಾರದು, ಓದಬಾರದು ಅಂತ ಎಲ್ಲೂ ಹೇಳಿಲ್ಲವಲ್ಲ ಮತ್ತು ಕಾರ್ಯಕ್ರಮ ಮುಗಿಯುವವರೆಗೂ ನಾನಿದ್ದೆ ಮತ್ತು ಎಷ್ಟು ಜನ ಮುಗಿಯುವವರೆಗೂ ಇದ್ದರು ಅನ್ನುವುದೂ ಗೊತ್ತು.
ಇದೆಲ್ಲ ಸಾಯ್ಲಿ, ಉಳಿದ ಸಂಘಟಕರ ಬಗ್ಗೆ ನನಗೆ ಗೊತ್ತಿರಲಿಕ್ಕಿಲ್ಲ ಆದರೆ ಶ್ರೀನಿಧಿ ವೈಯಕ್ತಿಕವಾಗೆ ಗೊತ್ತು(ಯಥಾಪ್ರಕಾರ ಇ-ಮೇಲ್ ನಲ್ಲಿ). ಶ್ರೀ ಪ್ರಣತಿಯ ಪರವಾಗಿ ಆಹ್ವಾನ ಕಳಿಸಿದಾಗ, ನಾನಿದನ್ನೂ ಪ್ರಣತಿಯ ಪರವಾಗಿ ನನ್ನ ಸ್ನೇಹಿತರೀಗೂ ಕಳಿಸಬಹುದಾ ಅಂತಲೂ ಕೇಳಿದ್ದ ಮತ್ತು ನನಗೆ ವೈಯಕ್ತಿಕವಾಗಿ ಪರಚಯವಿದ್ದ ಕನ್ನಡ ಬ್ಲಾಗಿಗರನ್ನು ಅಹ್ವಾನಿಸಿಯೂ ಇದ್ದೆ. ಸಮಾವೇಶದ ಉದ್ದೇಶದ ಬಗ್ಗೆ, ಅದರ ಸಫಲತೆ ನಿಮಗಿರುವಷ್ಟೇ ಕಾಳಜಿ ನನಗೂ ಇದೆ ಮತ್ತು ನಾನೇನು ಮಾಡುತ್ತಿದ್ಡೇನೆ ಅನ್ನೋದರ ಅರಿವೂ ಇದೆ. ಅನವಶ್ಯಕವಾಗಿ ಎಲ್ಲವನ್ನೂ ಗುತ್ತಿಗೆ ತಗೋಂಡವರ ತರಹ ಪ್ರತಿಕ್ರಿಯುಸುವದನ್ನು ಬಿಟ್ಟು, ಸರಿ ತಪ್ಪುಗಳನ್ನು ವಿಮರ್ಶಿಸುವ ಮತ್ತು ಆಗಿರಬಹುದಾದ ಅಚಾತುರ್ಯಗಳು ಮುಂದೆ ಆಗದಂತೆ ಜವಾಬ್ದಾರಿ ವಹಿಸಬೇಕು. ಅದು ಬಿಟ್ಟು ನಾನು ಮಾಡಿದ್ದೆ ಸರಿ,ಫಸ್ಟ್ ಟೈಮು ಅಂತಲ್ಲ ಸಮಜಾಯಿಸಿ ನಮಗೆ ನಾವೇ ಕೊಟ್ಟುಕೊಂಡು ಸಮಾಧಾನಿಸಿಕೊಂಡರೆ ಎನೂ ಮಾಡಲೂ ಆಗುವುದಿಲ್ಲ. ಎಲ್ಲವನ್ನೂ ಮತ್ತು ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗುವುದೆ ನಿಜವಾದ ಸವಾಲು, ಬರಿ ಹೊಗಳು ಭಟ್ಟರು ಹೇಳಿದ್ದೇ ನಂಬಿದರೆ ಯಥಾಸ್ಥಿತಿಯ ಅರಿವಾಗುವಿದಿಲ್ಲ್ಲಾ.ಮುಂದಿನ ಕಾರ್ಯಕ್ರಮಗಳು ಇದಕ್ಕೂ ಯಶಸ್ವಿಯಾದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೇನಿದೆ?
ಇಷ್ಟರ ಹೊರತಾಗಿಯೂ ಸಂಘಟಕರ ಮನಸ್ಸಿಗೆ ನೋವಾಗಿದ್ದರೆ, ನಾನವರನ್ನು ಕ್ಷಮೆ ಕೇಳುತ್ತೇನೆ, ವಿಶೇಷವಾಗಿ ಶ್ರೀನಿಧಿ.. ಪ್ರತಿಕ್ರಿಯಿಸಿದ ಉಳಿದ "ಗುತ್ತಿಗೆದಾರ"ರ ಬಗ್ಗೆ ನಾನು ಏನು ಹೇಳಲಾರೆ.ಇನ್ನೂ ಚರ್ಚಿಸುವ ಇರಾದೆ ಯಾರಿಗಾದರೂ ಇದ್ದರೆ ನನ್ನ ಮೇಲ್ ಮುಖಾಂತರ ಸಂಪರ್ಕಿಸಬಹುದು,ಹೀಗೆ ಕೆಸರು ಎರಚಿಕೊಂಡು ಕಂಡೋರ ಮನರಂಜನೆಗೆ ಆಹಾರವಾಗುವ ಇಷ್ಟ ನನಗಂತೂ ಇಲ್ಲ.ಇನ್ನೂ ತವಡು ಕುಟ್ಟಲು ನನಗಿಷ್ಟವಿಲ್ಲ, ಅದಕ್ಕೆ ಇದನ್ನು ಇಲ್ಲಿಗೆ ಬಿಡುತ್ತಿದ್ದೇನೆ, ಇಲ್ಲಾ ನಂಗೆ ಇದನ್ನು ಇಲ್ಲಿಗೆ ಬಿಟ್ಟರೆ ನಂಗೆ ಅಜೀರ್ಣವಾಗುತ್ತೆ ಅನ್ನೋರ ಮೂಲವ್ಯಾಧಿ ತೊಂದರೆಗೆ ನಾನೇನು ಮಾಡಲಾಗುವುದಿಲ್ಲ..
11 comments:
ಕಾರ್ಯಕ್ರಮಕ್ಕೆ ಬಂದು ನಿಮ್ಮ ಅಭಿಪ್ರಾಯನ ತಿಳಿಸಿದ್ದಕ್ಕೆ ತುಂಬಾ thanks. ಬರೀ ಒಳ್ಳೇ feedback ಮಾತ್ರ ಬರಬೇಕು ಅಂತ ಅಪೇಕ್ಷಿಸೋದು ತಪ್ಪಾಗುತ್ತೆ ಅಲ್ವಾ? ನಿಮ್ಮ ಅನಿಸಿಕೆ ನೀವು ಹೇಳ್ಕೊಂಡಿದೀರ, ಅದ್ರಿಂದ ಮುಂದೆ ನಾವು ಏನೇನು ಮಾಡಬಹುದು, ಮಾಡಬಾರದು ಅನ್ನೋ ಒಂದು idea ಬರುತ್ತೆ. ನಿರೀಕ್ಷೆ ಗೆ ಮೀರಿದ್ response ಸಿಕ್ತು, ಪರಸ್ಪರ ಎಲ್ಲರದ್ದೂ ಪರಿಚಯ ಮಾಡ್ಕೋತಾ ಕೂತಿದ್ರೆ ಮಿಕ್ಕಿದ್ವಿಶ್ಯಗಳನ್ನೆಲ್ಲಾ ಮಾತಡೋಕ್ಕೆ ಸಮಯ ಸಿಕ್ತಿರ್ಲಿಲ್ಲ ಅಷ್ಟು ಅರ್ಥ ಆಗುತ್ತೆ ನಿಮ್ಗೆ ಅಂದ್ಕೊಂಡಿದೀನಿ. ನೀವೂ , ನಿಮ್ಮಂತಹ ಹಲವಾರು ಬ್ಲಾಗಿಗರು ಬಂದಿದ್ರಿಂದನೇ ಕಾರ್ಯಕ್ರಮ ಯಶಸ್ವಿ ಆಗಿದ್ದು.
ನಿಮ್ಮ ಅಭಿಪ್ರಾಯನ ಬ್ಲಾಗ್ ನಲ್ಲಿ ಹಾಕಿ ಎಲ್ಲರಿಗೂ ಸಿಗೊಹಾಗೆ ಮಾಡಿ, ಪ್ರತಿಕ್ರಿಯೆನ ಮಾತ್ರ email ನಲ್ಲಿ ತಿಳ್ಸಿ ಅನ್ನೋದು ಸರೀನ?
ಇದನ್ನ ಮುಂದುವರ್ಸೋದು ಬೇಡ .. ಇಲ್ಲ್ಲೇ ಬಿಡೋಣ ಅನ್ನೋ ಮಾತಿಗೆ ನಾನು ಖಂಡಿತ ಒಪ್ತೀನಿ.
ಇಲ್ಲಿ ಇಷ್ಟು ಜನ ಪ್ರಣತಿ ಪರವಾಗಿ comment ಮಾಡಿರೋದು ನೋಡಿ ಖುಷಿಯಾಯ್ತು. ಸಂತೋಷರವರೇ, ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬಾ thanks :-)
ಸಿಗೋಣ,
ತುಂಬಾ ಜವಾಬ್ದಾರಿಯುತ ಪ್ರತಿಕ್ರಿಯೆ.ನಿಮ್ಮ ಅಭಿಪ್ರಾಯ ಮತ್ತು ಸಮ ಬೆಸಗಳೆರಡನ್ನು ಸಮಾನವಾಗಿ ಕಾಣುವ ನಿಮ್ಮ ಮನೋಭಾವಗಳೆರಡನ್ನು ಗೌರವಿಸುತ್ತೇನೆ.
ಈ ತರಹದ ಪ್ರತಿಕ್ರಿಯೆಗಳೇ ನಮ್ಮನ್ನು ಇನ್ನಷ್ಟು ಜವಾಬ್ದಾರಿಯುತವಾಗಿಸುವುದು.ಇದಕ್ಕೂ ಹೆಚ್ಚು ಪ್ರತಿಕ್ರಿಯಿಸಲಾರೆ..
ಸಂತೋಷ್,
ನಿಮಗೇ ನೇರವಾಗಿ ಮೈಲ್ ಮಾಡೋಣ ಅಂದುಕೊಂಡೆ. ಆದರೆ ಎಲ್ಲರೂ ಓದಬೇಕೆಂದು ಅನಿಸುತ್ತಿರುವುದರಿಂದ ಇಲ್ಲಿ ಬರೆಯುತ್ತಿದ್ದೇನೆ. ಈ ಸಲಿಗೆಗೆ ಕ್ಷಮಿಸಿ.
ಲೋಕೋ ಭಿನ್ನ ರುಚಿಃ. ಮತ್ತು ಎಲ್ಲವೂ ರುಚಿಗಳೇ ಅನ್ನುವುದು ನನ್ನ ಅಭಿಪ್ರಾಯ. ಮೀಟ್ ಬಗ್ಗೆ ನಿಮಗನ್ನಿಸಿದ್ದನ್ನು ಬರೆದಿದ್ದೀರಿ. ಒಳ್ಳೆಯದು. ನಿಮ್ಮ ಮೊದಲ ಬರಹ ಓದಿದಾಗ ನನಗೆ ನೆನಪಾಗಿದ್ದು ನಿಮ್ಮ ಪರಿಚಯದ ಸಾಲುಗಳು.
ಲಘು ಬರಹ ಬಹಳ ಒಳ್ಳೆಯದು. ಮನಸ್ಸಿನ ಬಿಗು ಕಳೆಯುತ್ತದೆ. ಆದರೆ ನಾವು ಬೇರೆಯವರ ಬಗ್ಗೆ ಲಘುವಾಗಿ ಬರೆಯುವಾಗ ಸ್ವ್ಲಲ್ಪ (ಚೂರೇ ಚೂರು) ರಿಸ್ಟ್ರೈನ್ ಬೇಕು ಅನಿಸುತ್ತದೆ ನನಗೆ. ಅದಕ್ಕೇಂತ ಹೊಗಳಿ ಬಿಸಾಕಬೇಕಿಲ್ಲ. ಅನಿಸಿದ್ದನ್ನ ವ್ಯಂಗ್ಯವಿಲ್ಲದೆ ಹೇಳಿಬಿಟ್ಟರೆ ತುಂಬ ಒಳ್ಳೆಯದು. 'ಖಾ'ರಂತರ ಹಾಗೆ. :)
ನಿಮ್ಮ ಬರಹಗಳು ಸೊಗಸಾಗಿವೆ. ಆದರೆ ಇತ್ತೀಚಿನ ಪೋಸ್ಟಿನಲ್ಲಿರುವ ಅನವಶ್ಯಕ ಮೊನಚು ಬೇಡವೆನಿಸುತ್ತದೆ. ಜೊತೆ ಬ್ಲಾಗುದಾರರೆಂಬ ಸಲಿಗೆಯ ಸಲಹೆ ಹೇಳಿದೆ. ನಿಮ್ಮ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳಿ.
ನನ್ಗೂ ಸ್ವಲ್ಪ ತಲೆಯ ಮೇಲೇ ಹೋಯಿತು ಸಭೆ. ಆದರೆ 'ಪ್ರಣತಿ'ಯ ಪ್ರಯತ್ನ ಅಭಿನಂದನಾರ್ಹ.
(ಅಜೀರ್ಣ ಮತ್ತು ಮೂಲವ್ಯಾಧಿ ಎರಡೂ ಬೇರೆ ಬೇರೆ ತೊಂದರೆಗಳು. :)
ದಯವಿಟ್ಟು ನಿಮ್ಮ ಬರಹದ ತೂಕವನ್ನೇ ಕಳೆಯುವ ಇಂತಹ ಸಾಲುಗಳು ಬೇಡ. ಈ ತರಹದ ಸಾಲುಗಳು ಓದುಗರನ್ನ ನೀವು ಅಭಿವ್ಯಕ್ತಿಸಿರುವ ವಿಷಯದಿಂದ ಡಿಸ್ಟ್ರಾಕ್ಟ್ ಮಾಡುತ್ತದೆ)
ಪ್ರೀತಿಯಿರಲಿ,
ಸಿಂಧು
ಸಂತೋಷ,
ನಿಮಗನ್ನಿಸಿದ್ದನ್ನ ಮುಚ್ಚಿಡದೆ ನೇರವಾಗಿ ಹೇಳಿದೀರಿ.ಎಲ್ರಿಂದ ಅದು ಸಾಧ್ಯ ಆಗಲ್ಲ. ವಿಜಯ ಹಾಗೂ ಸಿಂಧು ನಿಮ್ಮ ಮಾತುಗಳಿಗೆ ರೇಗಿಕೊಳ್ಳದೆ ಶಾಂತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ನಿಮ್ಗೆ ಅವರು ಹೇಳುವುದು, ಅವರಿಗೆ ನೀವು ಹೇಳುವುದು ಈಗ ಅರ್ಥ ಆಗಿದೆ ಅಂದುಕೋತೀನಿ.
ಒಂಥರ ದೊಂಬಿ ಅನ್ನಿಸ್ತು ನಂಗೆ ಒಟ್ಟಾರೆ.ಆದರೆ ಇದರಿಂದ ನಮ್ಮ ಬ್ಲಾಗಿಗರು 'goody-two-shoes' ಅಂತೂ ಅಲ್ವೇ ಅಲ್ಲ ಅಂತ ತಿಳೀತು. ಜತೆಗೆ ನಂಗೆ ನನ್ನ ಬ್ಲಾಗಿನ ಬಗ್ಗೆ ಕೆಲವು ಪರ್ಸ್ನಲ್ ಮಾಹಿತಿಯೂ ದೊರಕಿತು. ನನಗೆ, ಚೇತೂಗೆ, ಜೋಗಿಗೆ ಬಿಟ್ಟಿ ಸೆಲೆಬ್ರಿಟಿ ಪಟ್ಟವೂ ದೊರಕಿತು. ನಗಾಡಿಕೊಂಡು ಸುಮ್ನಾಗೋಣ.ನಮ್ಮನಮ್ಮಲ್ಲಿ ಯಾವ ಗಲಾಟೇನೂ ಬೇಡ. ಸಂತೋಷ ನೀವೂ ಕೆಲವೆಡೆ ದುಡುಕಿದೀರ ಅಂತ ನಿಮ್ಮ ಸ್ನೇಹಿತೆಯಾಗಿ ನಂಗನಿಸ್ತು. ಆದರೆ ಇಲ್ಲಿ ಕ್ಷಮೆ ಕೇಳಿ ಒಳ್ಳೆ ಕೆಲಸ ಮಾಡಿದೀರ. ಎಲ್ಲ ಸಮಯದಲ್ಲು ನಮ್ಮ ಕೋಪವನ್ನ ಹೊರಗೆ ತೂರಿಬಿಡೋದು ಸರಿಯಲ್ಲ. ಬೇಸರಿಸಬೇಡಿ. ತಣ್ಣಗೆ ಕೂತು ಯೋಚಿಸಿ.ಇನ್ನು ಮುಂದೂ ನಾವು ಸಿಗಬೇಕು. ನಗಬೇಕು. ಅಲ್ಲವೆ?
ಸಿಂಧೂ ಮತ್ತು ಟೀನಾ..
ನಿಮ್ಮಿಬ್ಬರ ಸಲಹೆಯನ್ನು ಗಂಬೀರವಾಗಿ ಪರಿಗಣಿಸುತ್ತೇನೆ.
Dear Santosh,
Please understand one thing. It is your way of thinking which makes us read your blogs/articles. You "Baravanige" is too good really and i am not saying this because i am a "HOGALUBHATTA".
In the context of your comments about the Bloggers meet and the organizers point of view all i can say is........ both you guys have different prespectives that can not be same (and should never be also).
If i were you, i would never give a damn about these so called organizers who are like frogs in the well. Your creativity is not limited (thankfully) to any one meet or place or nation. There are no boundaries really.
The very fact that one can read your blogs through internet around the globe vouch for this great reach you have. Please keep your sanity and do not worry about these insignificant people who try to say otherwise.
PEACE
SP
ವಿಜಯರವರೆ,
ಅವರವರ ಅನಿಸಿಕೆ ಅವರದು ಅಂತ ಹೇಳಿ ಸುಮ್ಮನಾಗೋದಕ್ಕಿಂತ ಆ ಅನಿಸಿಕೆ ಬರುವ ಹಿನ್ನೆಲೆಯ ಮನಸ್ಸಿನ ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ನಾನು ಮಾಡಿದ್ದೇ ಸರಿ ಆನ್ನೋ ಅಭಿಪ್ರಾಯ ಬೇಡ.
ಅದು ಪ್ರಣತಿಯವರ ಎರಡನೇ ಕಾರ್ಯಕ್ರಮ ಮತ್ತು ಕಾರ್ಯಕ್ರಮ ಸಂಘಟಿಸಿದ ನೀವು ತೀರ ಅನನುಭವಿಗಳೇನಲ್ಲ ಅನ್ನೋದು ಬಹಳ ಮುಖ್ಯ. ನೀವೇ ಹೇಳಿದಂತೆ "ಪರಸ್ಪರ ಎಲ್ಲರದ್ದೂ ಪರಿಚಯ ಮಾಡ್ಕೋತಾ ಕೂತಿದ್ರೆ ಮಿಕ್ಕಿದ್ವಿಶ್ಯಗಳನ್ನೆಲ್ಲಾ ಮಾತಡೋಕ್ಕೆ ಸಮಯ ಸಿಕ್ತಿರ್ಲಿಲ್ಲ" ಅನ್ನೋದು ಸರಿಯಲ್ಲ.
ನಿಮ್ಮ ಕರೆಯೋಲೆಯನ್ನೇ ಪ್ರಸ್ತಾಪಿಸಿದರೆ ನಿಮ್ಮ ಹೇಳಿಕೆ contradictory ಅನ್ನಿಸುತ್ತೆ. ಬ್ಲಾಗೀಗಳು ಬಂದಿದ್ದೇ ತಮ್ಮೊಳಗಿನ ಕುತೂಹಲ-ನಿರೀಕ್ಷೆಗಳನ್ನು ಪರಿಚಯಗಳ ಮೂಲಕ
ಸಾಧಿಸಿಕೊಳ್ಳೋಕೆ. ಹಾಗೆ ಬಂದು ಕೂತವರನ್ನು ನೀವು ಮಿಕ್ಕಿದ್ವಿಶ್ಯ ಮಾತಾಡೋಣ ಸುಮ್ನಿ ಕೂರಿ ಅಂದರೆ ಹೇಗೆ...?
ಹಾಗೆ ಮಾಡಿದರೆ ಜೆ ಸಿ ರೋಡಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೂ, ಇದಕ್ಕೂ ವ್ಯತ್ಯಾಸವಿರುತ್ತದಾ...?
ಅದು ಪ್ರಣತಿ ಕಾರ್ಯಕ್ರಮ ಮತ್ತು ಪ್ರಣತಿಗೆ ಜನರನ್ನು ಕಲೆಹಾಕುವ ಅಗತ್ಯವಿತ್ತು ಅಂತ ಕೆಲವರು ಅಂದುಕೊಂಡಿದ್ದೇ ಇದಕ್ಕೆ. ಅಲ್ವೆ...?
ಆದರೆ ಅಭಿಪ್ರಾಯಗಳು ಕಟುವಾಗದಿರಲಿ. ಅದು ಯಾರದ್ದಾಗಿದ್ದರೂ. ಯಾಕೆಂದರೆ ಪ್ರಣತಿ ಎಂಬ ಹೆಸರೇ ಸೌಮ್ಯ.
ಅದೆಲ್ಲಾ ಬದಿಗಿಟ್ಟು ನೋಡಿದರೆ ಅಷ್ಟರಮಟ್ಟಿಗೆ ಅಪೂರ್ಣವಾದ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
ಸಂತೋಷ್ ಪಾಟೀಲರೆ,
ದಯಮಾಡಿ ಯಾವ ಕಮೆಂಟನ್ನೂ ಅಳಿಸಬೇಡಿ. ಅವುಗಳಲ್ಲಿ ಬಹಳಷ್ಟು ಬಲೇ ತಮಾಷಿಯಾಗಿವೆ.
ನಿಮ್ಮಲ್ಲಿ ಹಾಸ್ಯಪ್ರಜ್ಞೆ ಇರುವುದೇ ಹೌದಾದರೆ ಖಂಡಿತ ಅವುಗಳನ್ನು enjoy ಮಾಡಿರ್ತೀರಾ.
ಪಾಪ ಬೋಡುತಲೆಯವರು, ಕನ್ನಡಕ ಮುಡಿಗೇರಿಸಿದವರೇ ನಿಮ್ಮನ್ನು ಝಾಡಿಸುತ್ತಿದ್ದಾಗ ಒಂದಂತೂ ಸ್ಪಷ್ಟವಾಯಿತು-ಬ್ಲಾಗಿಗಳು ನಿಮ್ಮ ಬರಹದ ಮೂಲಕ ಒಬ್ಬರನ್ನು ಒಬ್ಬರು ಗುರ್ತಿಸಿಕೊಳ್ಲುತ್ತಿದ್ದಾರೆ. ಅಲ್ಲಾಗದ ಕೆಲಸ ಇಲ್ಲಾಗುತ್ತಿದೆ.
ನಿಮ್ಮ ಮೊದಲ ಬರಹದಲ್ಲಿ ಕೆಲವು ಅನಾಮಿಕ ಕಮೆಂಟುಗಳನ್ನು ಓದುತ್ತಾ ಬಿದ್ದು ಬಿದ್ದು ನಗುವಂತಾಯಿತು.
ಹಾಗೇ ನನ್ನ ಗುರುತು ಸಿಕ್ಕಿತಾ ಪಾಟೀಲರೆ, ನಾನು ಕನ್ನಡಕವನ್ನು ಮೂಗಿನ ಮೇಲೇರಿಸಿದ್ದೆ!
ಹೀಗೇ ಬರೀತಿರಿ...ನಿರಾಳವಾಗಿ.
ಹಾಗೆ ಪ್ರೀತಿಯ ಕಮೆಂಟಿಗರೆ,
ಕಮೆಂಟ್ ಮಾಡುವಾಗ ಹೆದರಿ ’ಅನಾಮಿಕ’ರಾಗಬೇಡಿ. ಯಾಕೆಂದರೆ ಇಲ್ಲಿ ನಿಮ್ಮ ಮೇಲೆ ಯಾರೂ ಕೇಸ್ ಹಾಕೋಲ್ಲ.
ಯಾರಿಗೂ ಇಲ್ಲಿ ಸಮಯವಿಲ್ಲ. ನಿಮ್ಮ ಹೆಸರು, ಬ್ಲಾಗ್ ಇತ್ಯಾದಿ ಸೇರಿಸಿ.
ಹಾಗೆಯೇ ಬ್ಲಾಗೀ ಸಮಾವೇಶದ ಬಗ್ಗೆ ಬಂದ ಕಮೆಂಟುಗಳನ್ನೆಲ್ಲಾ ಸೇರಿಸಿ, ಮೂರು ಸಂಪುಟದ ಪುಸ್ತಕವನ್ನು ಪ್ರಕಟಿಸುವ ದುರಾಲೋಚನೆ ಬಂದಿದೆ. ಮುಖ್ಯವಾಗಿ ಅನಾಮಿಕರು, ನಿಮ್ಮ ಹೆಸರು ಹೇಳಿ ಅನುಮತಿಸಿದರೆ...
ಮಿಲನದ ನಂತರದ ಮೆಲುಕುಗಳು ಸಕತ್ತಾಗಿವೆ
ರವೀ...
ಕ್ಲಿಕ್:ಕಟು ಟೀಕೆಗೆಳೇ ದಾರಿ ದೀಪಗಳು.
ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಕಾರ್ಯಕ್ರಮಗಳು, ಹೊಸ ಜಾಗಕ್ಕೆ ಹೋಗುವುದು ಎಂದರೆ ಸಂಕೋಚದ ಮುದ್ದೆಯಾಗುವ ನನಗೆ ತಿಂಗಳಿಗೊಮ್ಮೆ ಇರುವ ಡೆಂಟಿಸ್ಟ್ ಅಪಾಯ್ಟ್ ಮೆಂಟನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆ ಹತ್ತಿರುತ್ತದೆ. ಇದೋಂದೇ ಕಾರಣದಿಂದಾಗಿ ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ.
ಬ್ಲಾಗಿನಲ್ಲಿ ಸಿಕ್ಕ ಅರೆ ಬರೆ ವರದಿ, ಅಭಿಪ್ರಾಯಗಳ ಆಧಾರದಲ್ಲಿ ನಾನು ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡೆ. ಈಗ ನಾನೂ ಹೋಗಬೇಕಿತ್ತು ಎನ್ನಿಸುತ್ತಿದೆ!(ಪ್ರತಿ ಅಪಾಯಿಂಟ್ ಮೆಂಟ್ ಮಿಸ್ ಮಾಡಿಕೊಂಡಾಗಲೂ ನನಗೆ ಹೀಗೇ ಅನ್ನಿಸುತ್ತದೆ!)
ಬ್ಲಾಗ್ ಎಂದರೇನೇ ಸಾರ್ವಜನಿಕ ಪರ್ಸನಲ್ ಡೈರಿ... ನಮಗೆ ಬೇಕಾದ್ದನ್ನು ಬರೆಯಬಹುದು ನಾವಿಲ್ಲಿ, ಡೈರಿಯಲ್ಲಿ ಬರೆದುಕೊಂಡಂತೆ. ಆದರೆ ಅದೊಂದೇ ಉದ್ದೇಶವಾಗಿದ್ದರೆ ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಹಂಬಲವೇಕೆ? ಸುಮ್ಮನೆ ಡೈರಿಯಲ್ಲಿ ಗೀಚಿಟ್ಟುಕೊಳ್ಳಬಹುದಲ್ಲವಾ, ಇಲ್ಲವೇ ಟೈಪಿಸಿ ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳಬಹುದಲ್ಲವಾ? ಇದೆಲ್ಲವನ್ನೂ ಬಿಟ್ಟು ಯಾಕೆ ನಾವುಗಳು ಡೈರಿಯ ಪುಟಗಳಿಗೆ ಅರ್ಹವಾದ ವೈಯಕ್ತಿಕ ಅಭಿಪ್ರಾಯಗಳನ್ನು ಬ್ಲಾಗಿನ ಕಟ್ಟೆಯ ಮೇಲೆ ತಂದಿಡುತ್ತೇವೆ? ನಮ್ಮ ಪ್ರತಿ ವೈಯಕ್ತಿಕ ಅಭಿಪ್ರಾಯಕ್ಕೂ ಸಾಮಾಜಿಕ ಆಯಾಮ ಇದೆ ಎಂಬ ಕಾರಣಕ್ಕಾಗಿ ಅಲ್ಲವೇ? ಹೀಗೆ ಸಾಮಾಜಿಕ ಆಯಾಮವನ್ನು ಒಪ್ಪಿಕೊಂಡ ಮೇಲೆ ನಮ್ಮ ವೈಯಕ್ತಿಕ ಅಭಿಪ್ರಾಯಕ್ಕೆ ಒಂದು ಸಭ್ಯತೆ, ಒಂದು ನಿಯಂತ್ರಣ ಲಭ್ಯವಾಗಬೇಕು ಅಲ್ಲವೇ? ಇವೆಲ್ಲಾ ಒತ್ತಾಯದ ರೂಲುಗಳಲ್ಲ, ‘ನಿನ್ನ ಬಾಯಲ್ಲಿರುವ ಎಲೆ ಅಡಿಕೆಯ ರಸವನ್ನು ಅಲ್ಲಿ, ಡಸ್ಟ್ ಬಿನ್ನಿನಲ್ಲಿ ಉಗುಳಪ್ಪಾ...’ ಎಂಬ ಮೆಲುದನಿಯ ಪಿಸುಮಾತು. ‘ಇಲ್ಲ, ಇದು ನನ್ನ ಬಾಯಿ ನನ್ನ ಎಲೆ ಅಡಿಕೆ, ರಸ್ತೆ ಸಾರ್ವಜನಿಕವಾದದ್ದು. ನಾನು ಉಗುಳುವುದು ನಿಮ್ಮ ಪಂಚೆ, ಶರ್ಟಿನ ಮೇಲೆ ಸಿಡಿದರೆ, ಅದರಿಂದ ನಿಮಗೆ ಕೋಪ ಬಂದರೆ ನೀವು ಅನಾಗರೀಕರು’ ಎಂದು ತಾವಂದರೆ ಅದಕ್ಕೆ ಪಿಸುಮಾತಿನ ಪ್ರತಿಕ್ರಿಯೆ ಸಿಕ್ಕುವುದಿಲ್ಲ.
ನೀವು ಅದೆಷ್ಟು ಹಾಸ್ಯ ಪೂರಿತವಾಗಿ, ರಸವತ್ತಾಗಿ ‘ಯಾವ ವೈಯಕ್ತಿಕ ನಂಜೂ’ ಇಲ್ಲದೆ ಬೋಳುತಲೆಯವರ ಬಗ್ಗೆ, ಮೊಬೈಲಿನಲ್ಲಿ ಗಾಳ ಹಾಕುತ್ತಿರುವವರ ಬಗ್ಗೆ ಬರೆದಿದ್ದೀರೋ ಅದೇ ಸಲುಗೆಯಲ್ಲಿ, ಅದೇ ಹಾಸ್ಯದ ನೆಲೆಯಲ್ಲಿ ನಿಮಗೆ ಪ್ರತಿಕ್ರಿಯೆಗಳು ಬಂದಿವೆ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಂಜಾಯ್ ಮಾಡಬಯಸುವ ತಾವು ಅನೇಕ ಪ್ರತಿಕ್ರಿಯೆಗಳನ್ನು ಡಿಲೀಟ್ ಮಾಡಿರುವುದು ಏಕೋ ಕಾಣೆ!
ಸಾಧ್ಯವಾದರೆ ಈ ವಿಷಯದ ಬಗ್ಗೆ ಇನ್ನಷ್ಟು ನನ್ನ ಬ್ಲಾಗಿನಲ್ಲಿ ಬರೆಯುವೆ.
ಸಮಯವಾದಾಗ ನನ್ನ ಬ್ಲಾಗುಗಳಿಗೆ ಭೇಟಿ ಕೊಡಿ...
ನನ್ನ ಬ್ಲಾಗುಗಳು:
ಒಂಟಿ ಹಕ್ಕಿ ಹಾಡು http://uniquesupri.wordpress.com/
ಈ ಕ್ಷಣದ ಸತ್ಯ
http://ekshanadasatya.wordpress.com/
ಕಲರವ
http://kalaravapatrike.wordpress.com/
ಮಾನಸ
http://maanasapatrike.blogspot.com/
ಸೂರ್ಯನ ಶಿಕಾರಿ
http://uniquesupri.blogspot.com/
ಓದಿನ ಕೋಣೆ
http://nannaodu.blogspot.com/
ಓಶೋ ಎಂಬ ಹಕ್ಕಿ
http://hakkihadu.blogspot.com/
ನನ್ನ ಪರಿಚಯ ನನ್ನ ಬ್ಲಾಗುಗಳಲ್ಲಿ ದೊರೆಯಬಹುದು. ಬನ್ನಿ ಒಟ್ಟಾಗಿ ಬ್ಲಾಗಿಸೋಣ...
ಎಸ್.ಪಿ .
ತುಂಬಾ ಥ್ಯಾಂಕ್ಸ
ಅರೇಹಳ್ಳಿ ರವಿ..
"ಹಾಗೆಯೇ ಬ್ಲಾಗೀ ಸಮಾವೇಶದ ಬಗ್ಗೆ ಬಂದ ಕಮೆಂಟುಗಳನ್ನೆಲ್ಲಾ ಸೇರಿಸಿ, ಮೂರು ಸಂಪುಟದ ಪುಸ್ತಕವನ್ನು ಪ್ರಕಟಿಸುವ ದುರಾಲೋಚನೆ ಬಂದಿದೆ. ಮುಖ್ಯವಾಗಿ ಅನಾಮಿಕರು, ನಿಮ್ಮ ಹೆಸರು ಹೇಳಿ ಅನುಮತಿಸಿದರೆ..."
ಒಳ್ಳೆಯ ವಿಚಾರ :-)ಅದರ ಎಲ್ಲಾ ಹಕ್ಕುಗಳು ಮಾತ್ರ ನನಗೆ ಕಾದಿರಸತಕ್ಕದ್ದು :-), ಸಂಪಾದಕ ಮಾತ್ರ ನೀವಾಗಿ. ಡೀಲ್ ಓಕೆ ನಾ? :-)
ಸುಪ್ರೀತ್.
ಆಯಾ ಕಂಮೆಂಟ್ಅಗಳನ್ನು ಆಯಾ ಡಿಲಿಟ್ ಮಾಡಿದ್ದು, ಬ್ಲಾಗ್ ಅಡ್ಮಿನ್ ಅಲ್ಲಾ! ಗಮನಿಸಿ ನೋಡಿ.. ತೀರಾ ಹಾಗೂ ಮಾಡಬೇಕೆನಿಸಿದ್ದರೆ ಕಮೆಂಟುಗಳನ್ನು ’ಮಾಡರೇಟ್’ ಮಾಡ್ತಿದ್ದೆ. ಬೇಕಾದವರು ತಮಗೆ ತೋಚಿದ್ದು ಹೇಳಿ ಹೋಗಲಿ ಅಂತಾನೇ ಅನಾಮಿಕರನ್ನು ಸಮ್ಮತಿಸಿದ್ದು. ಅಲ್ಲದೇ ತೀರಾ ಇಡಿ ಬ್ಲಾಗಿಗೆ "ವಿಷ ಸಿಂಚನ" ಹಾಲಾಹಲ ಇತ್ಯಾದಿ ಕರೆದು ಧನ್ಯರಾದವರ ಕಮೆಂಟುಗಳನ್ನೂ ಹಾಗೇಯೇ ಬಿಟ್ಟಿದ್ದೇನೆ. ಅದು ಅವರವರ ಖುಷಿಗೆ ಬಿಟ್ಟಿದ್ದು.
ನಿಮ್ಮ ಉಳಿದ ಸಲಹೆಗೆ ನಾನು ಪ್ರತಿಕ್ರಯಿಸಲಾರೆ. ಅನಿಸಿದ್ದನ್ನು ಮನಸ್ಸಿನಲ್ಲಿ ಮಂಡಿಗೆ ತಿನ್ನದೆ ಹೇಳಿಬಿಟ್ಟಿದ್ದೇನೆ.ಸ್ವಲ್ಪ ಖಾಸಗಿಯಾಯ್ತು ಅಂತಾ ನಾನು ಒಪ್ತೀನಿ. ಆದ್ರೆ ಒಟ್ಟಾರೆ ಅಭಿಪ್ರಾಯದ ಬಗ್ಗೆ ಏನೂ ಬೇಜಾರಿಲ್ಲಾ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಸ್ನೇಹಿತರೆ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳು...ಜೊತೆಗೆ
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !
Post a Comment