ನಿರಾಶೆ ಮೂಡಿಸಿದ ಕೂಟ
ಯಾಕೆ ಅಂತ ತಿಳಿತಿಲ್ಲಾ, ನಂಗೆ ಮಾತ್ರ ಬಹು ನಿರೀಕ್ಷಿತ ಭಾನುವಾರದ ಆನಲೈನ ಕನ್ನಡಿಗರ ಸಮಾವೇಶ ತುಂಬಾ ತುಂಬಾ ನಿರಾಶೆ ಮೂಡಿಸಿತು.. ವಾರದ ಮೂಂಚೆಯೇ ಎಲ್ಲಾ ಬ್ಲಾಗುಗಳಲ್ಲಿ ಓಡಾಡುತ್ತಿದ್ದ ಆಹ್ವಾನ ಕಂಡು ಎನೋ ಹೊಸ ಕ್ರಾಂತಿಯೇ ಆಗಿ ಬಿಡುತ್ತೆ ಅನ್ಕೋಂಡಿದ್ದೆ.ಆದರೆ ನನಗಂತೂ ಆಲ್ಲಿ ಆದ ಸಾಧನೆ ಮಾತ್ರ ದೊಡ್ದ ಶೂನ್ಯ.
ಭಾನುವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಿ, ಪುಣ್ಯಾತ್ಮ ಮನೋಜನನ್ನು ಇನ್ನಿಲ್ಲದ ಆಮಿಷ ತೋರಿಸಿ ಕರೆದುಕೊಂಡು ಹೋಗುತ್ತಲೆ ಸುಶ್ರುತನ ಆಶಯ ಭಾಷಣ ಮುಗಿದಿತ್ತಂತೆ. ಇಲ್ಲಿಗೆ ಬಂದರೂ ನಮಗೆ ಕೊನೆಯ ಕುರ್ಚಿಯೇ ಮೀಸಲಾಗಿರುವುದು ಕಂಡು ಭಲೆ ಪ್ರೀತಿ ಉಕ್ಕಿ ಬಂತು. ಆಗ್ಲೆ ’ಪವನಜ’ ವೇದಿಕೆ ಏರಿ ಚಚ್ಚತೋಡಗಿದ್ದರು. ಎಲ್ಲಿ ರಶೀದು ಅಂತಾ ಅತ್ತಿತ್ತ ಹುಡುಕುವಷ್ಟರಲ್ಲಿ ತೀರಾ ಸೀದಾ ಸಾದಾ ಇದ್ದ ಅವರು ಕಣ್ಣಿಗೆ ಬಿದ್ದರು.ಆಗ್ಲೆ ನಾನು ಬ್ಲಾಗಿಗರನ್ನು ಹುಡುಕುವ ಯತ್ನದಲ್ಲಿ ತೊಡಗಿದ್ದೆ, ಎಲ್ಲಾ ತಮ್ಮ ಪಾಡಿಗೆ ತಾವೂ ತಮ್ಮ ಲೋಕದಲ್ಲಿ ಮಗ್ನರಾಗಿದ್ದರು,ಒಬ್ಬ ಚಡ್ಡಿ ಹಾಕ್ಕೋಂಡು ಬಂದಿದ್ದ, ಭಲೇ ಆನಲೈನ ಕನ್ನಡಿಗ ಎಂದುಕೊಂಡೆ.ಮತ್ತೋಬ್ಬ ತನ್ನ ಬೋಡು ತಲೆಗೆ ಚಸ್ಮಾ ಏರಿಸಿ ಕೂತಿದ್ದು ಕಂಡು ನಗು ಬಂತು . ನಾನು ಬೇಜಾರಾಗಿ ಮನೋಜನ ಜೊತೆ ಪಿಸುಮಾತಿನಲ್ಲಿ ಹರಟೆಗಿಳಿಯಬೇಕು ಅನ್ನುವಾಗ, ಮದ್ಯವಯಸ್ಕ ಬ್ಲಾಗಿಗರೋಬ್ಬರು ಗುರಾಯಿಸಿ ರಸಭಂಗ ಮಾಡಿದರು. ಇವರೆಲ್ಲಾ ಹಾಳಾಗ್ಲಿ ಸಂಘಟಕರು ಎಲ್ಲಿ ಹಾಳಾಗಿ ಹೋದರು ಎಂದು ನೋಡಿದ್ರೆ, ಅವರಲ್ಲೊಬ್ಬ ಮೌನವಾಗಿ ಮೊಬೈಲಿನಲ್ಲಿ ಗಾಳ ಹಾಕುತ್ತಿದ್ದ, ಮೀನಾದರೂ ಯಾವುದು ಅಂತಾ ಗಮನಿಸಿ ನೋಡಿದಾಗ ಅಲ್ಲೆ ಪ್ರೇಕ್ಷಕರ ಗುಂಪಿನಲ್ಲಿ ಕುಳಿತು ತಿರುಗಿ ತಿರುಗಿ ನೋಡುತ್ತಿತ್ತು ಒಂದು ಹೆಣ್ಣು ಮೀನು. ನಮ್ಮ ಮನೋಜ್ "ಭಾರೀ ಮೀನಿಗೆ ಗಾಳ ಹಾಕ್ಯಾನಲ್ರೀ" ಅಂತಾ ಭಲೇ ನೋವಿನಿಂದ ಗೋಳಾಡಿದ. ಹರಿಪ್ರಸಾದ ಚೀಟಿಯಲ್ಲಿ ಬರೆದದ್ದನ್ನು ಚೆನ್ನಾಗಿ ಹೇಳಿ ಹೋದರು. ರಶೀದು ಬಂದರು ಹೋದರು.ಅಷ್ಟರಲ್ಲಿ ನಿರೂಪಕ ’ಸಂಜೆ,ಚಾ’ ಅಂತೆಲ್ಲಾ ನಾಟಕೀಯವಾಗಿ ಹೇಳಿ ಹೋದ.ಇಲ್ಲಿವರೆಗೂ ಬಂದಿದ್ದಕ್ಕೆ ಚಹಾಕ್ಕಾದರೂ ದಾರಿಯಾಯ್ತು ಎಂದು ಎರಡೆರಡು ಭಾರಿ ಚಾ ಬಗ್ಗಿಸಿ ಕುಡಿದೆವೆ. ಇಷ್ಟೋತಾದರೂ ಯಾರಾದರೂ ಸಂಘಟಕರೂ ಎನು ಎತ್ತ ವಿಚಾರಿಸಿಯೇ ಇರಲ್ಲಿಲ್ಲ. ನಮಗಂತೂ ನಾವೂ ಸಂಬಂದವೇ ಇಲ್ಲದ ಜಗತ್ತಿಗೆ ಬಂದಿದ್ದೇವೇನೋ ಎಂಬ ಅನಾಥ ಭಾವ ಕಾಡತೊಡಗಿತು. ವಾಪಸು ಹೋದ ಮೇಲಾದರೂ ಎನಾದ್ರು ಭಯಂಕರ ಮಿರಾಕಲ್ ನಡೆಯುತ್ತೆ ಎಂಬ ಹುಸಿ ಆಸೆಯಿಂದ ಅದೇ ಕೊನೆ ಜಾಗಕ್ಕೆ ಬಂದು ಕುಳಿತೆವು. ಶ್ರೀನಿಧಿ ಬಂದು ಇನ್ನು ಮೇಲೆ ಸಂವಾದ ಇದೆಯಂತೂ , ಎನಾದ್ರೂ ಕೇಳುವುದಿದ್ದರೆ ಕೇಳಿ ಎಂದಾಗ, ನಮ್ಮ ಹಿಂದಿದ್ದ ಸಂಘಟಕನೊಬ್ಬ " ಯಾರದೋ ಗೋತ್ರ ಅಂತ್ದಿದ್ಯಲ್ಲ ಕೇಳು" ಅಂತಾ ಯಾರಿಗೋ ಚುಡಾಯಿಸುತ್ತಿದ್ದ. ಎಲಾ ಇವರ! ಕಂಡೋರ ಗೊತ್ರ ಕೇಳಲು ನಮ್ಮನ್ನು ಇಲ್ಲಿ ಕೂಡಿ ಹಾಕಿದ್ದಾರಾ? ಅಂತ ಸಂಶಯ ಬಂತು.
ಚೇತನಾ ತೀರ್ಥಹಳ್ಳಿ ನೋಡ್ತಿನಿ, ಜೋಗಿ ನೋಡ್ತಿನಿ, ಟೀನಾರನ್ನು ನೋಡ್ತಿನಿ ಅಂತೆಲ್ಲಾ ಬಂದಿದ್ದ ನನಗೆ ಯಾರು ಬಂದಿದ್ರು, ಯಾರು ಬಂದಿದಿಲ್ಲ ಎಂಬುದೇ ಕೊನೆವರೆಗೂ ತಿಳಿಲಿಲ್ಲಾ. ಕಡೆ ಪಕ್ಷ ಬಂದವರನ್ನು ಉಳಿದವರಿಗೆ ಪರಿಚಯಸುವ ಪ್ರಯತ್ನವೂ ನಡೆಯಲಿಲ್ಲ. ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು. ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು.ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು, ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು.
ಎನೋ ಮೊದಲ ಬಾರಿ ನಡೆದ ಕಾರ್ಯಕ್ರಮವೆಂದು ನಿರೀಕ್ಷೆ ಜಾಸ್ತಿ ಇದ್ದುದಕ್ಕೆ ಹೀಗನಿಸಿತಾ? ಅಥವಾ ನನಗೋಬ್ಬನಿಗೆ ಮಾತ್ರ ಹೀಗೆ ಅನಿಸಿತಾ? ಅಂತಲೂ ಗೊತ್ತಿಲ್ಲ್ಲಾ. ನನಗಂತೂ ನಂದ ಲವ್ಸ್ ನಂದಿತ ಬಿಟ್ಟು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ನಿರಾಶೆ ಅಯ್ತು. ಉಳಿದವರ ವಿಚಾರ ಅವರವರ ಭಾವಕ್ಕೆ , ಅವರವರ ಭಕುತಿಗೆ ಬಿಟ್ಟಿದ್ದು..
38 comments:
ಹ್ಹಾ ಹ್ಹಾ ಹ್ಹಾ ಹ್ಹಾ... ಲೋ ನಾನು ಬರೋಣ ಅಂತ ಇದ್ದೆ.. ಆದ್ರೆ ಹೋದ ವಾರ ಮದುವೆಗೆ ಹೋಗಿ ಮೂರು ರಾತ್ರಿ ನಿದ್ದೆ ಇರಲಿಲ್ಲ ಅಂತ ಮಲಗಿಬಿಟ್ಟಿದ್ದೆ.. ನಿದ್ದೆ ಕೆಟ್ಟು ಬಂದಿದ್ದಿದ್ರೆ ತುಂಬಾ ನಷ್ಟ ಆಗಿರೋದು ನೋಡ್ಲ..
ಅಮೃತ ಸಿಂಚನ ಎಂಬ ಸುಂದರ ಹೆಸರಿಟ್ಟುಕೊಂಡು, ಬರೀ ಹಾಲಾಹಲವನ್ನು ಸ್ಫುರಿಸುತ್ತಿರುವಿರೇಕೆ?
ಸಂತೋಷ್,
ನಿಮ ಅನಿಸಿಕೆಗಳನ್ನು ನಾನು ಗೌರವಿಸುತ್ತೇನೆ. ಅವು ನಿಮ್ಮ ದೃಷ್ಟಿಕೋನದಿಂದ ವೀಕ್ಷಿಸಿದಾಗ ಸರಿಯೂ ಇದ್ದಿರಬಹುದು.
ಆದರೆ ಮೊದಲ ಬಾರಿ ಈ ಪ್ರಯತ್ನಕ್ಕೆ ಕೈ ಹಾಕಿದವರನ್ನು ಪ್ರಶಂಶಿಸದೇ ಇರಲು ಹೇಗೆ ಸಾಧ್ಯ? ನಿಮ್ಮಿಂದ ಈ ಕಾರ್ಯಕ್ರಮ ನಡೆಸಲು ಸಾಧ್ಯವಿತ್ತೇ? ಆಯೋಜಕರು ಬಂದು, 'ಸಾರ್, ನೀವು ಯಾರು? ಯಾವ ಬ್ಲಾಗ್ ಬರಿಯುತ್ತೀರಿ...' ಎಂದು ನಿಮ್ಮನ್ನು ಕೇಳಬೇಕಿತ್ತೆಂದು ನೀವು ಬಯಸಿದ್ದೀರಿ. ಆದರೆ ಅದರ ಬದಲಾಗಿ ಯಾರದರೊಬ್ಬ ಆಯೋಜಕರ ಬಳಿ ತೆರಳಿ ನೀವೆ ನಿಮ್ಮ ಪರಿಚಯವನ್ನು ಮಾಡಿಕೊಂಡಿದ್ದರೆ ನಿಮ್ಮ ಘನತೆ ಹೆಚ್ಚುತ್ತಿತ್ತಲ್ಲವೇ?
ಇದು ಮೊದಲ ಪ್ರಯತ್ನ. ಅಲ್ಲಲ್ಲಿ ಸಣ್ಣ ಪುಟ್ಟ ಎಡವಟ್ಟುಗಳನ್ನು ಗಮನಿಸಿಯೂ ಗಮನಿಸದಂತೇ ಇರಬೇಕು. ನಾವು ಗಮನಿಸಿದ್ದಕ್ಕಿಂತ ಹೆಚ್ಚಿನದನ್ನು ಆಯೋಜಕರು ಗಮನಿಸಿರುತ್ತಾರೆ. ಆ ಲೋಪಗಳನ್ನು ಮುಂದಿನ ಸಲ ಅವರು ಸರಿಪಡಿಸಿಕೊಳ್ಳುತ್ತಾರೆ. ನಿಮ್ಮನ್ನು ಆಯೋಜಕರ ಸ್ಥಾನದಲ್ಲಿರಿಸಿ ಕಲ್ಪಿಸಿಕೊಳ್ಳಿರಿ. ಪರಿಸ್ಥಿತಿ, ಪಾಡು ಅರ್ಥವಾಗಬಹುದು. ಎಂಥವರಿಗೂ ದ್ವಿತೀಯ ಅವಕಾಶ ಸಿಗುತ್ತೆ. ಅಲ್ಲಿವರೆಗೆ ನಮ್ಮಂಥವರು ಹೆಚ್ಚು ಮಾತನಾಡಬಾರದು. ಆದರೆ ಆ ಅವಕಾಶ ನೀಡದೆಯೇ ತುಂಬಾ ಖಾರವಾಗಿ ಮತ್ತು ಅನಾವಶ್ಯಕವಾಗಿ 'ವಿಷ ಸಿಂಚನ' ಮಾಡಿಬಿಟ್ಟಿದ್ದೀರಾ..
ಸರ,
ನೀವ ಏನ ಬರೀರಿ. ಬಹಳ ಚಂದ ಬರಿತಿರಿ ಬಿಡ್ರಿ. ಅದೂ ನಮ್ಮ ಧಾರವಾಢ ಭಾಷದಾಗ ಇಷ್ಟ ಚಂದ ಬರಿಯವರು ಕಮ್ಮಿ. ಬರೀರಿ ಬರೀರಿ. ಅವನಾಪ್ನ.
ಇಂತಿ ನಿಮ್ಮವ,
ಮಠ
ಇಷ್ಟೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲಾ ಅನಿಸುತ್ತೆ.ನಿಮಗೆ ತುಂಬಾ ಖುಷಿಯಾಗಿದ್ದರೆ ಅದು ನಿಮ್ಮಿಷ್ಟ. ಇನ್ನೊಬ್ಬನಿಗೆ ನಿರಾಶೆಯಾಗಿದ್ದರೆ ಅಬು ಅವನ ವೈಯಕ್ತಿಕ ಪ್ರತಿಕ್ರಿಯೆ.ಎಲ್ಲರಿಗೂ ಒಂದೇ ಭಾವ ಹುಟ್ಟಬೇಕೆನ್ನುವುದು ದಡ್ಡತನ.ಎಲ್ಲರೂ ಹೊಗಳುಭಟ್ಟರೇ ಆದರೆ,ಆದ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಸುವರು ಯಾರು? ನಮ್ಮ ಬೆನ್ನು ನಮಗೆ ಕಾಣಿಸದು ಅಂತಾರೆ, ತಪ್ಪಾಗಿದ್ದರೆ ಒಪ್ಪಿಕೊಂಡು ಅದನ್ನು ಸರಿಪಡಿಸುವ ಪ್ರಯತ್ನ ನಡೆಯಬೇಕೆ ವಿನಃ ’ ಮೊದಲ ಸಾರಿ ಮಾಡಿದ್ದೀನಿ ಅದ್ಕೆ ಅಡ್ಜಸ್ಟ್ ಮಾಡಿಕೊಳ್ಳಿ ಅನ್ನೊದು ಜವಾಬ್ದಾರಿಯಿಂದ ನುಣುಚಿಕೊಂಡ ಹಾಗಾಗುತ್ತೆ. ಸರಿ ಇದ್ದರೆ ಸರಿ ಅನ್ನೋಣ, ತಪ್ಪಾಗಿದ್ದರೆ ಒಪ್ಪಿಕೊಳ್ಳುವ ಔದಾರ್ಯವೂ ಇರಬೇಕಾಗುತ್ತದೆ.
ನನ್ನ ಸ್ನೇಹಿತನೂ ಕಾರ್ಯಕ್ರಮಕ್ಕೆ ಹೋಗಿ ಬಂದು ಇದೆ ಅಭಿಪ್ರಾಯ ವ್ಯಕ್ತಪಡಿಸಿದ.ವ್ಯತ್ಯಾಸ ಇಷ್ಟೇ ಅವನು ಮನಸ್ಸಲ್ಲೆ ಮಂಡಿಗೆ ತಿಂದ, ಇವನು ಅನಿಸಿದ್ದನ್ನ ಬರೆದು ಬಿಸಾಕಿದ. ಎಲ್ಲರನ್ನು ಖುಷಿಯಾಗಿಡುವದು ತುಂಬಾ ಕಷ್ಟ ಅನ್ಕೋತೀನಿ..
ನಿಮ್ಮ
ಪಲ್ಲವಿ,
ನೀವ್ ಹೇಳಿದ್ ಒಂದು ಮಾತು ಮಾತ್ರ ಪೂರ್ತಿ ಸತ್ಯ: ಅವರವರ ಭಾವಕ್ಕೆ, ಅವರವರ ಭಕುತಿಗೆ!
ಪ್ರಣತಿಯ ಆಹ್ವಾನನೇ ಸಾಕಷ್ಟು low key ಆಗಿಯೇ ಇತ್ತು, ಎಲ್ಲರನ್ನೂ ಒಂದುಕಡೆ ಸೇರಿಸೋದಕ್ಕಿಂತ ಹೆಚ್ಚಿನ ಮಹಾತ್ವಾಕಾಂಕ್ಷೆಯನ್ನೇನೂ ಹೇಳಿಕೊಂಡಿರಲಿಲ್ಲ ಅದು ಅಲ್ಲ್ವಾ
’ಜವಾಬ್ದಾರಿ ಹಾಳುಮೂಳು’ ಅನ್ನೋ ಕೊರೆತ ಅಂತ ಬಯ್ತಾನೇ ಹೊಸ ಕ್ರಾಂತಿ, ದೊಡ್ಡ ಸಾಧನೆ ಆಗ್ಲಿಲ್ಲ ಅಂತ ಅಳ್ತಿದ್ದೀರ, ನಿಮ್ಮ ಕಲ್ಪನೆಯ ಕ್ರಾಂತಿಯ ಬಗ್ಗೆನೂ ಬರೆದಿದ್ದ್ರೆ ಚೆನ್ನಾಗಿರ್ತಿತ್ತೇನೋ. ಪೆದ್ದು ಪೆದ್ದಾಗಿ ಮೊನ್ನೆ ಸಮಾರಂಭ ಚೆನ್ನಾಗಾಯ್ತು ಅಂತ ಖುಷಿಯಾಗಿ ಕುಟ್ಟಿಟ್ಟ ನಮ್ಮಂಥವರಿಗೆ ಸ್ವಲ್ಪ ಉಪಯೋಗಕ್ಕೆ ಬಂದಿರ್ತಿತ್ತು;)
ಯಾರು ಏನ್ ಹಾಕ್ಕೊಂಡ್ ಬಂದಿದ್ರು, ಹೆಂಗೆ ಕೂತಿದ್ರು, ಯಾರಿಗೆ ಮೆಸೇಜ್ ಮಾಡ್ತಿದ್ರು ಅನ್ನೋದರ ಜೊತೆಗ ಅಕ್ಕ-ಪಕ್ಕದಲ್ಲಿದ್ದವ್ರು ನಾಕು ಜನರನ್ನ ಮಾತಾಡ್ಸಿದ್ದಿದ್ದ್ರೆ ಸಿಗ್ತಿದ್ರೇನೋ, ನಿಮ್ಮ ಬ್ಲಾಗ್ ಓದೋ, ನಿಮ್ಮಿಂದ ಓದಿಸಿಕೊಳ್ಳೋ ಒಂದಿಬ್ಬರಾದ್ರೂ, ಜೊತೆಗೆ ಒಂದಷ್ಟು ಹೊಸ ಬ್ಲಾಗು-ಬ್ಲಾಗಿಗರು...(ನನಗಂತೂ ಸಿಕ್ಕರು) ಅಥ್ವಾ ಜೋಗಿ, ಟೀನಾ, ಚೇತನಾರಂಥ ಸೆಲೆಬ್ರಿಟಿಗಳಿಗೆ ಕಾದಿದ್ದ ನಿಮಗೆ ಸಣ್ಣ ಮೀನುಗಳ ಗೊಡವೆ ಬೇಕಿರಲಿಲ್ಲವೋ - ಗೊತ್ತಿಲ್ಲ!
ಯಾರದೋ ಮನೆಯ ಸಮಾರಂಭಕ್ಕೆ ಹೋದಹಾಗೆ ಅವ್ರು ಬಂದು ಮಾತಾಡಿಸ್ಲಿಲ್ಲ ಅಂತೀರಾ...ನನಗೇನೋ ಬ್ಲಾಗರ್ಸ್ ಮೀಟ್ ನಮ್ಮೆಲ್ಲರ ಕಾರ್ಯಕ್ರಮ ಅನ್ನಿಸ್ತಪ್ಪಾ...ನಮ್ಮ-ನಮ್ಮ ಮಧ್ಯದ ಮಾತಿಗೆ ಇಂಥದ್ದೊಂದು ಅವಕಾಶ ಬೇಕಿತ್ತೇ ಹೊರತು ಸಂಘಟಕರು ಬಂದು ಒಬ್ಬಬ್ಬರನ್ನೂ ವಿಚಾರಿಸಿಕೊಂಡು ’ನೀವು ನಮ್ಮವರಲ್ಲ, ನಮ್ಮ ಅತಿಥಿ’ ಅಂತ ಹೇಳೋ ಅವಶ್ಯಕತೆ ನನಗಂತೂ ಕಾಣ್ಲಿಲ್ಲ. ಇಷ್ಟರ ಮೇಲೆ ಪಾಪ ಆ ಹುಡುಗ್ರು ಕಾರ್ಯಕ್ರಮ ಷುರು ಆಗೋ ವರೆಗೆ ಹೊರಗೆ ಬಿಸಿಲಲ್ಲಿ ನಿಂತು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸ್ತಿದ್ದ್ರು. ಕಾರ್ಯಕ್ರಮ ಷುರು ಆದಮೇಲೆ ಅಲ್ಲಿ ನಡಿತಿರೋದನ್ನ ಬಿಟ್ಟು latecomersಗೆ ಉಪಚಾರ ಮಾಡೋಕೆ ಹೋಗದಿರಬಹುದು-ಪಾಪ ಚಿಕ್ಕ ಹುಡುಗ್ರು, ಕಷ್ಟಪಟ್ಟು ಎಲ್ಲಾ ಆರ್ಗನೈಸ್ ಮಾಡಿದವ್ರು - ಅಷ್ಟು ಮಾರ್ಜಿನ್ ಕೊಡಿ ಮಾರಾಯ್ರೆ!:))
ಆಗಬೇಕಿರೋ ಕೆಲಸಗಳು ನೂರಾರು. ಹಂಗಂತ ಎಲ್ಲಾ ಒಂದೇ ಸಲಕ್ಕೆ ಆಗಬೇಕಿತ್ತ್ತು ಅನ್ನೋದು ಎಷ್ಟು ಸರಿ ಯೋಚಿಸಬೇಕು. ಮೊದಲ ಹೆಜ್ಜೆ ಇಟ್ಟವರ ಜೊತೆ ಹೆಜ್ಜೆಗೂಡಿಸಿ ಬೆನ್ನು ತಟ್ಟಬೇಕು. ಮುಂದಿನ ಹೆಜ್ಜೆಗೆ ಹುರುಪು ಬರುತ್ತೆ. ಅದು ಬಿಟ್ಟು ಒಂದು ಹೆಜ್ಜೆಗೆ ಇಷ್ಟೇ ದೂರನಾ ಬಂದಿದ್ದು, ಪ್ರಯೋಜನವೇ ಇಲ್ಲ ಅಂದ್ರೆ ಹೆಂಗೆ ಸಾರ್! ಎಲ್ಲರೊಳಗೊಂದಾಗಿ ನಮ್ಮ ಜವಾಬ್ದಾರಿ ಗುರುತಿಸಿಕೊಂಡು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿ, ಆಗ ಅದಕ್ಕೆ ಅರ್ಥ. ಹೊರಗೆ ನಿಂತು ಹಾಕಿದ ಬಟ್ಟೆ, ಕನ್ನಡಕಗಳ ಬಗ್ಗೆ ಕಾಮೆಂಟ್ ಮಾಡ್ತಾ ಕ್ರಾಂತಿ ಆಗಲಿಲ್ಲ ಅನ್ನೋ ಮಾತನ್ನಾಡೋದಕ್ಕೆ ’ಅವರವರ ಭಾವಕ್ಕೆ...’ಅನ್ನೋ ಸಾಲು ಕೂಡಾ ನೈತಿಕ ಹಕ್ಕು ಕೊಡಲ್ಲ.
"ಒಬ್ಬ ಚಡ್ಡಿ ಹಾಕ್ಕೋಂಡು ಬಂದಿದ್ದ, ಭಲೇ ಆನಲೈನ ಕನ್ನಡಿಗ ಎಂದುಕೊಂಡೆ.ಮತ್ತೋಬ್ಬ ತನ್ನ ಬೋಡು ತಲೆಗೆ ಚಸ್ಮಾ ಏರಿಸಿ ಕೂತಿದ್ದು ಕಂಡು ನಗು ಬಂತು."
Too good. LMAO......
ಅಲ್ಲಪ್ಪಾ, ಬೋಳುತಲೆಯವರ ಮೇಲೆ ಯಾಕಪ್ಪಾ ಅಷ್ಟು ದ್ವೇಷಾ? ಅಲ್ಲಿ ಇದ್ದ ಇಬ್ಬರು ಬೋಳು ತಲೆಯವರಲ್ಲಿ ನಾನೂ ಒಬ್ಬನಾಗಿದ್ದೆ. ಇಬ್ರೂ ಕನ್ನಡಕ ಹಾಕ್ಕೊಂಡಿದ್ವಿ. ಆದ್ರೆ ನಾನು ದಪ್ಪಗಿದ್ದೆ ಇನ್ನೊಬ್ರು ಸಣ್ಣಗಿದ್ರು. ಯಾರ ಬಗ್ಗೆ ನೀವು ಹೇಳಿದ್ದು ಅಂತ ಗೊತ್ತಾಗಲಿಲ್ಲ. ಹೋಗ್ಲಿ ಬಿಡಿ, ಇನ್ನೊಂದು ಇಪ್ಪತ್ತೈದು ಮೂವತ್ತು ವರ್ಷ ಆದಮೇಲೆ ನಿಮ್ಮ ತಲೆ ಮೇಲೆ ಅದೆಷ್ಟು ತಾನೆ ಕೂದಲು ಇರುತ್ತೆ ನೋಡೇ ಬಿಡೋಣ ;-)
ಏನೇ ಇರಲಿ, ಗಾಳ ಹಾಕಿ ಮೀನು ಹಿಡಿಯೋಕೆ ಬಂದೋರಿಗೆ, ನಿರಾಶೆ ಆಗಿದ್ರಲ್ಲಿ ಆಶ್ಚರ್ಯ ಏನಿದೆ? ನನಗಂತೂ ಪವನಜ,ಅಬ್ದುಲ್ ರಶೀದ್,ಶ್ಯಾಮ್, ಹರಿಪ್ರಸಾದ್ ನಾಡಿಗ್, ಹ್ರೀ ಕಿ.ರಂ ನಾಗರಾಜ, ಸಂಪದ ಸಮುದಾಯದ ಸುನಿಲ್ ಜಯಪ್ರಕಾಶ್, ಒಂ ಶಿವಪ್ರಕಾಶ್, ಬೇಲೂರು ಸುದರ್ಶನ, ಬಾಗಲ್ಕೋಟೆಯ ಎಮ್‍ಡಿ, ಕುಂಚ ಪ್ರಪಂಚದ ಪ್ರಮೋದ್ ಇವರೆಲ್ಲರನ್ನೂ ಭೇತಿಯಾದದ್ದೇ ಒಂದು ಸಾಧನೆ ಅನಿಸಿತು. ಇದಕ್ಕೇ ಪ್ರಣತಿಯವರಿಗೆ ಧನ್ಯವಾದ ಅರ್ಪಿಸಬೇಕು ಅನ್ನಿಸುತ್ತೆ ನನಗೆ.
-ನವರತ್ನ ಸುಧೀರ್
From your writing I can easily make out that you are an absolute shit!.
That was an informal meeting organized formally. It was your duty as well to get aquainted with the bloggers. Do you think you had gone for your friend/relative's marriage?.
dr.Sagar
"ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ"
ಯಾರ್ರೀ ಕೊರ್ದಿದಾರೆ ಬ್ಲಾಗುಗಳಲ್ಲಿ ಜವಾಬ್ದಾರಿಗಳ ಬಗ್ಗೆ? ಒಂದು ಉದಾಹರಣೆ ಕೊಡಿ ನೋಡೋಣ.
ರಶೀದ್ ಸೀಧಾ ಸಾದಾ ಇದ್ರೆ ಒಪ್ಕೊಳ್ಳಕ್ಕಾಗಿಲ್ಲ ನಿಮ್ಗೆ, ಇನ್ನೇನು ಯಕ್ಷಗಾನದ್ ವೇಷದ್ ಥರ ಬರ್ಬೇಕಿತ್ತ ಅವ್ರು? ಅಸಲು ನೀವೇನು ನಿರೀಕ್ಷೆ ಇಟ್ಕೊಂಡಿದ್ರಿ ಅನ್ನೋದಾದ್ರು ಸರಿಯಾಗಿ ತಿಳಿಸಿ. ಆದೇನಾದ್ರು ಎಲ್ರೂ ಒಪ್ಕೊಳೋ ಥರ ಇದ್ರೆ ಮತ್ತೊಂದು ಸಲ ಮೀಟ್ ಮಾಡುವವ್ರು ಅದ್ನ ತಲೆಲಿಟ್ಕೊಂಡಿರ್ತಾರೆ.
ತಡವಾಗಿ ಬಂದಿದ್ದೂ ಅಲ್ದೆ ಮುಗ್ಯೋ ಮುಂಚೆನೆ ಜಾಗ ಖಾಲಿ ಮಾಡಿದೀರ ಅನ್ಸತ್ತೆ,ಸಂಘಟಕರಲ್ಲೊಬ್ರು ಹೇಳಿದ್ರು, ಇದು ಮುಗಿದಿರೋದು ಅಲ್ಲ, ಇನ್ನೇನೋ ಆಗೋದಿದ್ರೆ ಅದ್ಕೆ ಮುನ್ನುಡಿ ಇದ್ದ ಹಾಗೆ ಅಂತ. ಬ್ಲಾಗರ್ಸ್ ಮೀಟು ಮುಗಿದಿಲ್ಲ, ಇನ್ನು ಶುರು. ಏನ್ರೀ ನೀವು, ಏನೇನೋ ಬರೀತೀರ? ಇಷ್ಟ ಇಲ್ದೆ ಕಷ್ಟ ಪಟ್ಕೊಂಡು ಬರೋ ಬದ್ಲು ನೀವು ನಂದ ಲವ್ಸ್ ನಂದಿತ ನೋಡಕ್ ಹೋಗಿದ್ರೆನೇ ಚೆನ್ನಾಗಿರೋದು. ಹೆಸ್ರಿಗೆ ತಕ್ಕ ಹಾಗೆ ಸ್ವಲ್ಪನಾದ್ರು ಇರೋಕೆ ಪ್ರಾಕ್ಟೀಸ್ ಮಾಡಿ ಸಾರ್.
ಪಾಟೀಲರ ಬರಹದಲ್ಲಿ ಯಾವಾಗಲೂ ವಾಸ್ತವ ಸ್ತಿತಿಯನ್ನ್ನುಮೊನಾಚಾದ ಹಾಸ್ಯದಲ್ಲಿ ನಿರೂಪಿಸುತ್ತಾ ಬಂದದ್ದು ನಾವು ಕಾಣಬಹುದು , ಹಾಗೆಯೇ ಅಪಾರ ನಿರೀಕ್ಷೆ ಯನ್ನಿಟ್ಟುಕೊಂಡುಹೋಗಿದ್ದು ಮತ್ತು ಅಲ್ಲಿ ಕಂಡುಬಂದ ಅಪಸವ್ಯ ಗಳನ್ನು , ಅವ್ಯಾವಸ್ಥೆಯನ್ನು ಹಾಸ್ಯ ಲೇಪನದಲ್ಲಿ ಬರೆದದ್ದು ಅಂತಹ ಅಪರಾಧವೇನಲ್ಲ ಅಲ್ಲವೇ ? ಅವರ ಬರಹದ ಹಿಂದಿನ ಉದ್ದೇಶ ಕೇವಲ ತಪ್ಪುಗಳನ್ನ ಎತ್ತಿ ತೋರಿಸುವದಕ್ಕೆ ಮಾತ್ರ ಸೀಮಿತವಾಗಿರದೇ , ಮುಂದೆ ನಡೆಯವ ಸಮ್ಮೇಳನಗಳು ಇನ್ನೂ ಅರ್ಥಪೂರ್ಣವಾಗಿ ನಡೆಯಲಿ ಎಂಬ ಸದಾಶಯದಿಂದ ಕೂಡಿವೆ ಎಂಬುದನ್ನು ಯಾಕೆ ವಿಮರ್ಶಕರುಗಳು ಅರ್ಥ ಮಾಡಿಕೊಳ್ಳತ್ತಿಲ್ಲ ? ಬೋಳುತಲೆಯವರರ ಬಗ್ಗೆ , ರಶೀದ್ ಸೀದಾ ಸಾದಾ ಇದ್ದದ್ದರಬಗ್ಗೆ ಬರೆದದ್ದು ಅನಾವಶ್ಯಕ ಅಂತ ನನಗೂ ಅನ್ನಿಸ್ತು ಆದರೆ ಚಡ್ಡಿ ಹಾಕಿಕೊಂಡು ಬಂದವರಬಗ್ಗೆ ಬರೆದದ್ದು ಪ್ರಸ್ತುತ . ಆಯೋಜಕರಾದ ' ಪ್ರಣತಿ 'ಯಬಳಗಕ್ಕೆ ಧನ್ಯವಾದಗಳನ್ನಾರ್ಪಿಸಲು ಪಾಟೀಲರು ಮರೆಯಾಬಾರಿದಿತ್ತು.ಪಾಟೀಲರ ಬರಹದಲ್ಲಿನ ಒಂದೆರಡು ಅನಾವಶ್ಯಕ ಪ್ರಸ್ತಾಪಗಳನ್ನು ಮರೆತು , ಅವರಬರಹದಲ್ಲಿ ವ್ಯಕ್ತವಾಗಿರುವ ಆಕ್ಷೇಪಗಳ ಬಗ್ಗೆ ಆರೋಗ್ಯಕರ ಚರ್ಚೆಯಾಗಲಿ. ಏನಂತೀರಾ ?
ಪಯಣಿಗರೇ,
ಪಾಟೀಲರು ಹೇಳಿರೋ ಯಾವ ವಿಷಯದ ಬಗ್ಗೆ ಆರೋಗ್ಯಪೂರ್ಣ ಚರ್ಚೆ ಆಗಬೇಕು ತಿಳೀಸ್ತೀರಾ? ಮೊನಚಾದ ಹಾಸ್ಯದ ಬಗ್ಗೆ ಯಾರದ್ದೂ ಅಭ್ಯಂತರ ಇರ್ತಿರ್ಲಿಲ್ಲ, ಅವರು valid ಆಕ್ಷೇಪಗಳನ್ನ ಎತ್ತಿದ್ದಿದ್ರೆ. ಅನಗತ್ಯವಾದ ವೈಯುಕ್ತಿಕ ವ್ಯಂಗ್ಯಗಳನ್ನ ಬಿಟ್ಟರೆ ಅವರ ಈ ಪೋಸ್ಟ್‌ನಲ್ಲಿರೋದು ಯಾರೂ ಮಾತಾಡ್ಸ್ಲಿಲ್ಲ ಅನ್ನೋದು - ಅದರ ವಿಶ್ಲೇಷಣೆ ಈಗಾಗಲೇ ಇಲ್ಲಿ ಬಂದಿರೋ ಹಲವು ಕಾಮೆಂಟ್‌ಗಳಲ್ಲಿದೆ. ಇನ್ಯಾವ ಆರೋಗ್ಯಪೂರ್ಣ ಚರ್ಚೆ ಇಲ್ಲಿ ಸಾಧ್ಯ ಹೇಳಿ, ಅಷ್ಟಕ್ಕೂ ಸ್ವತಃ ಪಾಟೀಲರು ಈ ಯಾವ ಕಾಮೆಂಟುಗಳಿಗೂ ಉತ್ತರಿಸೋ ಗೊಡವೆಗೆ ಹೋಗದೆ ಕೂತಿರುವಾಗ?
ಮುಂದೆ ಚೆನ್ನಾಗಿ ಆಗ್ಲಿ ಅನ್ನೋ ಸದಾಶಯದಿಂದ ಬರೆದಿದ್ದಾದ್ರೆ constructive criticism ಇರಬೇಕಿತ್ತು, ಇನ್ನೇನು ಇರಬೇಕು ಅನ್ನೋದು ಬರೀಬೇಕಿತ್ತು. ಅದೆಲ್ಲಾ ಬಿಟ್ಟು childish ಆಗಿ ನನ್ನನ್ನ ಯಾರೂ ಮಾತಾಡಿಸಲಿಲ್ಲ ಅಂತ ಊರವರ ಮೇಲೆ ಕೊಚ್ಚೆ ಹಾರಿಸಿದರೆ ಅದನ್ನ ವಾಸ್ತವದ ಚಿತ್ರಣ ಅಂತ ಹೇಗೆ ಅಂದುಕೊಳ್ಳೋದು, ಒಳ್ಳೇ ಉದ್ದೇಶ ಹೇಗೆ ನೋಡೋದು? ಯಾಕೆ ಇಂಥ ಕೆಳಮಟ್ಟದ ಆಲೋಚನೆಯ ಬರಹವನ್ನ defend ಮಾಡೋ ಪ್ರಯತ್ನ?
p.s.,: ಚಡ್ಡಿ ಹಾಕಿಕೊಳ್ಳೋವ್ರು ಕನ್ನಡ ಬ್ಲಾಗ್ ಬರೀಬಾರದು-ಓದಬಾರದು ಅಂತ ಏನಾದ್ರೂ ಇದೆಯಾ? ಆ ಚರ್ಚೆ ಹೇಗೆ ತಮಗೆ ಪ್ರಸ್ತುತ ಅನ್ನಿಸ್ತೋ!
Hey Patil.... give ur reply na?
ಸಕಾರಾತ್ಮಕವಾಗಿ ಮತ್ತು ನಕಾರತ್ಮವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಸುಧೀರ್,
ನಿಮ್ಮ ಕನ್ನಡಕ ತೆಗಿದಿಡಿ, ಮೂವತ್ತು ವರ್ಷಗಳಾದ ಮೇಲೆ ನನಗೂ ಬೇಕಾಗುತ್ತದೆ :). ನಿಮ್ಮ ಮೇಲೆ ನಂಗ್ಯಾವ ದ್ವೇಷ ಮಾರಾಯ್ರೆ..
ಶ್ರೀ..
ಅಭಿಪ್ರಾಯ ಮಂಡನೆಗೂ, ನೈತಿಕತೆಗೂ ಎಲ್ಲಿಯ ಲಿಂಕು?
***********************************
ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಉತ್ತರ ಈ ಕೆಳಗಿನ ಬರಹದಲ್ಲಿದೆ.
http://scpatil.blogspot.com/2008/03/blog-post_18.html
ಅಲ್ಲೀಯೂ ಮತ್ತೆ ಹಾಡಿದ್ದೇ ಹಾಡುವುದು ಬೇಡ..
ಅಭಿಪ್ರಾಯಕ್ಕೂ ನೈತಿಕ ಹಕ್ಕಿಗೂ ಇರುವ ಲಿಂಕ್ ಇದು- ಮೊನ್ನೆ ನಡೆದದ್ದು ಬ್ಲಾಗರ್ಸ್ ಮೀಟ್. ಅದನ್ನ ಯಶಸ್ವಿಯಾಗಿಸೋದ್ರಲ್ಲಿ ಎಲ್ಲ ಬ್ಲಾಗಿಗರ ಪಾತ್ರವೂ ಇರಬೇಕಿತ್ತು. ಕೇವಲ ಸಂಘಟಕರದ್ದಲ್ಲ. ಹಾಗೆ ನಿಮ್ಗೆ ನಾನ್ಯಾರೋ ಹೊರಗಿನವನು ಅನ್ನ್ಸಿದ್ದಕ್ಕೆ ಅಲ್ಲಿನ ಪರಿಸ್ಥಿತಿಗಿಂತ ನಿಮ್ಮ outlook ಕಾರಣ ಅನ್ನೋದನ್ನ ಇಲ್ಲಿ ಬೇಕಾದಷ್ಟು ಜನ ಆಗ್ಲೇ ಹೇಳಿಯಾಗಿದೆ. ಅದನ್ನೆಲ್ಲ ’ಗುತ್ತಿಗೆದಾರರ’ ಒಪಿನಿಯನ್ ಅಂತ ಪಕ್ಕಕ್ಕೆ ನೀವು ತಳ್ಳೋ ಪ್ರಯತ್ನ ಮಾಡಿದ್ರೆ ಅದು ನಿಮ್ಮ ಹಣೆಬರಹ. ಎಲ್ಲೆ ಮೀರಿದ ಸಿನಿಕತನದಲ್ಲಿ ಒಳ್ಳೇದು ಕಾಣೋಲ್ಲ. ಅದಕ್ಕೆ ನಾವ್ಯಾರು ಇಲ್ಲಿ ಎಷ್ಟು ಬಂದು ಕುಟ್ಟಿದ್ರೂ ಪ್ರಯೋಜನ ಇಲ್ಲ.anyway, coming back to the point, ನಮ್ಮೆಲ್ಲರ ಮೀಟ್ ಬಗ್ಗೆ ಹುಳುಕು ಹುಡುಕುವಾಗ ಅದರಲ್ಲಿ ನಿಮ್ಮ ಪಾತ್ರ ಏನು ಅಂತ ಯೋಚಿಸದೇ, ಇನ್ನೂ ಚೆನ್ನಾಗಿ ಆಗೋಕೆ ಮುಂದೆ ಏನು ಮಾಡಬಹುದು ಅಂತ ಹೇಳದೇ ಕುಹಕಕ್ಕೇ ಗಮನ ಕೊಟ್ಟು ಅದು ಅಭಿಪ್ರಾಯ ಮಂಡನೆ ಅಂತ ಸಮರ್ಥಿಸಿಕೊಳ್ಳೋದಿಕ್ಕೆ ನೀವೂ ಒಬ್ಬ ಕನ್ನಡ ಬ್ಲಾಗರ್ ಆಗಿ - ಅದೂ ಕಳಕಳಿಯುಳ್ಳವರಾಗಿ(going by your claims) ನೈತಿಕ ಹಕ್ಕು ಇಲ್ಲ.
ನಿಮ್ಮ ಹೊಸ ಪೋಸ್ಟ್‌ನಲ್ಲಿ ಮತ್ತೆ ಭಂಡತನದ ಮಾತುಗಳನ್ನಾಡಿ ಮುಗಿಸಿದ್ದೀರ.ಏನಿರಬೇಕಿತ್ತು ಅನ್ನೋದರ ಬಗ್ಗೆ ಚಕಾರವೆತ್ತದೇ, ಮಿಕ್ಕವರೆಲ್ಲ ಹೊಗಳುಭಟರು ಅನ್ನೋ ಭ್ರಮೆಯಲ್ಲಿ ಇದಕ್ಕೆ ಮತ್ತೆ ಕಾಮೆಂಟಿಸಬೇಡಿ ಅಂತ ತುಂಬಾ ನೀಟಾಗಿ ಹೇಳಿದ್ದೀರ. ಶ್ಯಾಮ್ ಸರಿ ಹೇಳಿದ ಜವಾಬ್ದಾರಿಯ ಬಗೆಗಿನ ಮಾತುಗಳು ಇದಕ್ಕೇ ಪ್ರಸ್ತುತವಾಗೋದು. ಇರಲಿ, ಇನ್ನು ಮುಂದೆ ಈ ಬ್ಲಾಗ್ ಓದಬೇಕೋ ಬೇಡವೋ, ಓದಿದರೆ ಪ್ರತಿಕ್ರಯಿಸಬೇಕೋ ಬೇಡವೋ ಅಂತ ನಿರ್ಧರಿಸೋಕೆ ನಮ್ಮೆಲ್ಲರಿಗೂ ಸಹಾಯವಾಗುತ್ತೆ ಅಲ್ಲಿ ವ್ಯಕ್ತವಾಗಿರೋ ಧೋರಣೆಯಿಂದ. ಇದೆಲ್ಲಾ ಮೂಲವ್ಯಾಧಿಯ ಕುರುಹು ಅನ್ನಿಸಿದವರಿಗೆ psychiatric ನೆರವು ಬೇಕಾ ಅಂತ ನನ್ನ ಡೌಟು ಅಷ್ಟೆ!
ನಿಮ್ಮ ಬಗ್ಗೆ ನೀವೇ ಚೆನ್ನಾಗಿ ಬರ್ಕೊಂಡಿದ್ದೀರ. ಈ ಚರ್ಚೆಗೆ ಮುನ್ನ ಎಲ್ಲರೂ ಅದನ್ನೊಮ್ಮೆ ನೋಡಿದ್ದರೆ ಚೆನ್ನಿರುತ್ತಿತ್ತೇನೋ..
"
-:ನನ್ನ ಸ್ವಗತ:-
ಸಂತೋಷಕುಮಾರ ಪಾಟೀಲ
ಸದ್ಯಕ್ಕೆ ಬೆಂಗಳೂರುವಾಸಿ( ಮೂಲತಃ ಗದಗ ಜಿಲ್ಲೆಯ ಅಬ್ಬಿಗೇರಿ), ಕರ್ನಾಟಕ, India
ಹುಟ್ಟಾ ಹುಂಬತನ,ಮೇರೆ ಮೀರಿದ ಭಾವುಕತೆ,ಚೂರೆ ಚೂರು ತಿಕ್ಕಲುತನ,ಬದುಕಿನ ಬಗ್ಗೆ ಉಡಾಫೆ ತುಂಬಿದ ಪ್ರೀತಿ. ಸ್ನೇಹ,ಪ್ರೀತಿಯ ವಿಷಯದಲ್ಲಿ ಎಂದಿಗೂ ತಣಿಯದ ದುರಾಶೆ.ಇಷ್ಟು ಸಾಕು ಅನಿಸುತ್ತೆ."
:-)
ಇದೇ ವಿಷಯದ ಮೇಲೆ ಚರ್ಚಿಸಿದ ಮತ್ತೋಂದು ಬ್ಲಾಗಿನ ಲಿಂಕು.
ಶ್ರೀಯವರಿಗೆ ಈಗ ಸಮಾಧಾನವಾಗಬಹುದು.. :)
http://manasu-hakki.blogspot.com/2008/03/blog-post_18.html
ಬಹುಶಃ ನೇರವಾಗಿ ಮಾತಾಡಿದ್ದು ನನ್ನ ತಪ್ಪಾಗಿರಬಹುದು.
ಸಂತೋಷ್
ನಿಮ್ಮ ಅಭಿಪ್ರಾಯಕ್ಕೆ ನನ್ನ ಗೌರವವಿದೆ. ಕೆಲವು ಜನ ಕಾರ್ಯಕ್ರಮದಿಂದ ಹೊರಗೆ ಹೋಗುವಾಗ ತಮ್ಮತಮ್ಮಲ್ಲೇ ಮಾತಾಡಿದ್ದನ್ನು ನೀವು ಬ್ಲಾಗಿಸಿದ್ದೀರ.
ಅಂದ್ರೆ ನಿಮಗನಿಸಿದ್ದೇ ಇನ್ನೂ ಕೆಲವರಿಗೆ ಅನಿಸಿದೆ. ನೀವು ಬ್ಲಾಗಿಸಿದ್ದೀರ ಬಹುಶ: ಅದೇ ನೀವು ಮಾಡಿರುವ ತಪ್ಪು.
ನಮ್ಮಂತೆ ಬ್ಲಾಗಿಸುವವರೇ ಇಂತಹ ಒಂದು ಕಾರ್ಯಕ್ರಮ ರೂಪಿಸಿ ನಡೆಸಿದ್ದನ್ನು ನೀವು ಮರೆತಿದ್ದು ದೊಡ್ಡ ತಪ್ಪು.
ನಾವು ನೀವು ಮತ್ತು ಇತರರೆಲ್ಲರೂ ಇಲ್ಲಿ ಕಮೆಂಟು ಕುಟ್ಟುತ್ತ ಜಗಳವಾಡುತ್ತಿರುವಾಗ, ನಮ್ಮ ಹಾಗೆಯೇ ಬ್ಲಾಗ್ ಗಳನ್ನು ಬರೆಯುತ್ತಿರುವ ಆ ಸಮೂಹ ಇಂತಹ ಕಾರ್ಯಕ್ರಮ ರೂಪಿಸಿ ನಡೆಸಿತಲ್ಲ ಅದು ಅವರ ಯಶಸ್ಸು.
ಹೌದು, ಬ್ಲಾಗ್ ಕೂಟದ ಆಮಂತ್ರಣದಲ್ಲಿ ಬರೆದಂತೆ ಅಲ್ಲಿ ಬ್ಲಾಗಿಗರನ್ನು ಪರಿಚಯಿಸುವ (ನಾನು ಹೇಳುತ್ತಿರುವುದು ಒಬ್ಬರನ್ನೊಬ್ಬರಿಗಲ್ಲ, ಅವರವರಿಗೆ ಇಷ್ಟವಾದವರಿಗೂ ಅಲ್ಲ, ಅಲ್ಲಿ ನೆರೆದ ಬ್ಲಾಗಿಗರ ಸಮೂಹಕ್ಕೆ ) ನಡೆ ಇರಲಿಲ್ಲ. ಅದು ಬ್ಲಾಗಿಗರಿಗೇ ಬಿಟ್ಟುಕೊಟ್ಟಿದ್ದರು.
ಆದರೆ ಇಲ್ಲಿ ಸಂಘಟಕರು ಗಮನಿಸುವ ಮಾತೊಂದು ಇದೆ. ನಾವು ಭಾರತೀಯರು ಅದರಲ್ಲೂ ಕನ್ನಡಿಗರು. ತಾವಾಗೆ ತೆರೆದುಕೊಳ್ಳುವ ರೀತಿ ಬಹಳ ಜನಕ್ಕೆ ಬರೋಲ್ಲ.
ಆ ಕಲೆ ಬಂದವರಿಗೆ 'ನಿನಗೇನೂ ಕೈ ಹಿಡಿದು ಎಲ್ಲರಿಗೂ ಪರಿಚಯ ಮಾಡಿಸಬೇಕಾಗಿತ್ತಾ?' ಅಂತ ಹೇಳುವುದರಲ್ಲೂ ತಪ್ಪೂ ಇಲ್ಲ.
ಅಲ್ಲಿ ಬಂದ ಬ್ಲಾಗಿಗರು ಯಾರಿಗೆ ಅಂತ 'ಹೈ' ಹೇಳಿ ಪರಿಚಯ ಮಾಡ್ಕೋಬೇಕು? ಈ ರೀತಿ ಶುಷ್ಕ 'ಹೈ' ಗಳಿಂದ ಎಷ್ಟು ಜನರೊಂದಿಗೆ ಪರಿಚಯ ಸಾಧ್ಯವಾದೀತು?
ಭೇಟಿಯಾದವರ ಬಗ್ಗೆ ಮನಸ್ಸಿಲ್ಲದಿದ್ದರೂ (ಪರಿಚಯ ಮಾಡಿಕೊಳ್ಳುವವನಿಗೆ ಮನಸ್ಸಿದ್ದಿರಬಹುದು ಆದರೆ ಮಾಡಿಕೊಳ್ಳುವವರಿಗೂ ಇರಬೇಕಲ್ಲ !) ಸುಮ್ಮನೆ ಅವರ ಬ್ಲಾಗ್ ಕೇಳಿ ಬರೆದುಕೊಳ್ಳುವಂತಹ ಅಸಹಜ ಭಾವವನ್ನು ಈ 'ಪರಿಚಯ' ದ ನಡೆ ನಿವಾರಿಸಬಹುದಿತ್ತು.
ಹೇಗೂ ಅಲ್ಲಿ ಎಲ್ಲ ಬ್ಲಾಗಿಗರ ಪಟ್ಟಿ ಸಿದ್ಧವಾಗಿವಾಗಿತ್ತು. ಒಂದೊಂದೆ ಹೆಸರು ಕೂಗಿ ಎಲ್ಲ ಬ್ಲಾಗಿಗರನ್ನು ಅನಾವರಣಗೊಳಿಸಿದ್ದರೆ ಈ ಕಾರ್ಯಕ್ರಮಕ್ಕೆ ವಿಶೇಷ ಕಳೆಯೇ ಬರುತ್ತಿತ್ತು.
ತಮ್ಮ ಮೆಚ್ಚು ಬ್ಲಾಗಿಗರನ್ನೇ ಆಗಲಿ ಓದುಗರನ್ನೇ ಆಗಲಿ ನೇರವಾಗಿ ಪರಿಚಯಿಸಿಕೊಂಡು ಧನ್ಯವಾದ ಹೇಳಲೊಂದು ಸೂಕ್ತ ದಾರಿಯಾಗುತ್ತಿತ್ತು.
ಸಂತೋಷ, ಸುನಾಥ, ಬೊಗಳೆ, ಮನಸ್ವಿನಿ, ವಿಕಾಸ, ಪಬ್ಬಿಗ ಎಷ್ಟೊಂದು ಜನರನ್ನು ನಾನೇ ಹುಡುಕಿಕೊಂಡು ಬಂದಿದ್ದೆ. ಆದ್ರೆ ಯಾರನ್ನೂ ಭೇಟಿಯಾಗಲು ಆಗಲಿಲ್ಲ. ಹಾಗೆಂದ ಮಾತ್ರಕ್ಕೆ ಹೊಸಬರು ಯಾರೂ ಪರಿಚಯವಾಗಲೇ ಇಲ್ಲ ಎನ್ನುವ ಹಾಗೂ ಇಲ್ಲ. ನವರತ್ನ್ಮ ಸುಧೀರ, ಭಾವ ದರ್ಪಣದ ಮಂಜುಳಾ, ಸಿಂಧು ಇನ್ನೂ ಹಲವರು ಪರಿಚಯವೂ ಆದರು.
ಇಲ್ಲಿ ಬಂದಿರುವ ಕಮೆಂಟುಗಳನ್ನು ಓದುತ್ತಿದ್ದರೆ ಸುಧಾನ್ವೆಯವರ ಮಾತನ್ನು ಬ್ಲಾಗಿಗಗರು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆನಿಸುತ್ತೆ. ಬರೀ 'ಚೆನ್ನಾಗಿದೆ' 'ಚೆನ್ನಾಗಿಲ್ಲ' ಅನ್ನುವುದಕ್ಕಿಂತ ವಿಮರ್ಶೆಯಾಗಲ್ಲಿ ಅಂತ ಹೇಳಿದ್ದು , 'ಅಮೃತಸಿಂಚನ' ಬ್ಲಾಗಿನ ಮೇಲೆ ಪೂರ್ಣ ಪ್ರಮಾಣದಲ್ಲಿಯೇ ಆಗಿದೆ ಅನಿಸುತ್ತೆ.
ಅನಿಸಿಕೆಯ ಬರಹಕ್ಕೆ ಇಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ನನಗೆ ಚಹಾ ಇಷ್ಟ ಇನ್ನೊಬ್ಬರಿಗೆ ಕಾಫಿ ಇಷ್ಟ, ಅಷ್ಟೇ. ಕಾಫಿ ಕುಡಿಯುವವರೂ ಮೂರ್ಖರೂ ಅಲ್ಲ, ಚಹಾ ಕುಡಿಯುವವರು ಪೆದ್ದರೂ ಅಲ್ಲ.
ಆ ವಿಚಾರ ಅವರವರ ಭಾವಕ್ಕೆ , ಅವರವರ ಭಕುತಿಗೆ ಬಿಟ್ಟಿದ್ದು.
ಹೊಸತಲೆಮಾರಿನ ಈ ನೀರು ಆ ಹಳೆಯ ನೀರಿನಂತೆ ಕೊಚ್ಚೆ ಮಾಡಿಕೊಳ್ಳದೇ ಅದೇ ಸಾಹಿತ್ಯ ಪರಿಷತ್ತು ರಗಳೆಗಳಂತೆ ಸಾಗದೇ ಹೊಸ ರೀತಿಯ ವಿಚಾರಗಳೊಂದಿಗೆ, ವಿಮರ್ಶೆಗಳಿಗೆ ಪ್ರತಿಕ್ರಿಯಿಸುವುದೊಂದಿಗೆ ಸಾಗುತ್ತೇವೆ ಅಂದುಕೊಂಡಿದ್ದೆ.
ಕಿವಿ ಹಿಂಡುವ ರೀತಿಯೂ ಇರಲಿ, ತಪ್ಪುಗಳನ್ನು ನಮ್ಮವರವೇ ಅಂತ ಒಪ್ಪಿಕೊಂಡು ಬೆನ್ನು ತಟ್ಟುವ ನೀತಿಯೂ ಇರಲಿ.
ಗೆಳೆಯನಾಗಿ ಹೇಳಬಯಸುತ್ತಿದ್ದೇನೆ ಮುಂದಿನ ಸಾರಿ ಹುಂಬುತನ ಇರಲಿ, ಕಡಿಮೆ ಇರಲಿ ; ಬರೆಯುವವರಿಗೂ ನನ್ನಂತೆ ಕಮೆಂಟುಗಳಿಗೆ ಕಮೆಂಟಿಸುವವರಿಗೂ :-)
ಸಂತೋಶ್,
ನೀವು ಕಮೆಂಟಿಸಿರುವ ಪರಿಗೆ ನಾನೆನೂ ಹೇಳಲಾರೆ. ನಾನು ಕಾರ್ಯಕ್ರಮಕ್ಕೆ ಬರಲಿಲ್ಲ, ಹೀಗಾಗಿ ಮಾತಾಡುವ ಹಕ್ಕು ನನಗಿಲ್ಲ.
ಆದರೆ ಶ್ರೀ ಅವರು ನಮಗೆ ‘ಸೆಲೆಬ್ರಿಟಿ’ ಪಟ್ಟ ಕಟ್ಟುವ ಹಾಗೆ ಆಗಿದ್ದು ನಿಮ್ಮಿಂದಲೇ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳಲೇ? ಅಥವಾ ನೇರಾನೇರ ಶ್ರೀ ಅವರಿಗೇ ತಲುಪಿಸಿಬಿಡಲೇ ತಿಳಿಯುತ್ತಿಲ್ಲ.
ಖಂಡಿತ ನಾವು ಮತ್ತೊಮ್ಮೆ ಸೇರೋಣ. ಜಗಳ ಯಾಕೆ? ಈಗ ತಾನೆ ಕಣ್ ಬಿಡ್ತಿರುವ ಬ್ಲಾಗ್ ಲೋಕದಲ್ಲಿ ಗ್ರೂಪಿಸಂ ಮೂಡಬಾರದಲ್ವೇ?- ಚೇತನಾ ತೀರ್ಥಹಳ್ಳಿ
ಕಾರ್ಯಕ್ರಮದ ಬಗ್ಗೆ (ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಮಾತ್ರ) ನಿಮ್ಮ ಅಭಿಪ್ರಾಯಗಳನ್ನು ಗೌರವಿಸುವೆ. ಇದು ಮೊದಲನೆಯ ಬಾರಿ ನಡೆಸಿದ ಅಂತರ್ಜಾಲದ ಕನ್ನಡಿಗರ ಸಮಾವೇಶ. ನನಗನ್ನಿಸುವಂತೆ ಸಂಘಟನೆ ಚೆನ್ನಾಗಿಯೇ ಇದ್ದರೂ ಖಂಡಿತವಾಗಿ ಕಲಿಯುವುದು ಸಹಸ್ರ ವಿಚಾರಗಳಿರುತ್ತವೆ.
ನಕಾರಾತ್ಮಕ ಪ್ರತಿಕ್ರಿಯೆಗಳು ಬೇಕು. ಆದರೆ ನಕಾರಾತ್ಮಕ ಪ್ರತಿಕ್ರಿಯೆ ಬರೆಯುವ ಬರಹಗಾರನಿಗಿರುವ ಸ್ವಾತಂತ್ರ್ಯವನ್ನು ಮೀರಿ ಬರೆದಿದ್ದೀರ. ಬರೀ ಕಾರ್ಯಕ್ರಮದ ಬಗ್ಗೆ ಮಾತ್ರ ಬರೆದಿದ್ದರೆ ಯಾರೂ ಉಸಿರೆತ್ತುತ್ತಿರಲಿಲ್ಲವೇನೋ. ವೈಯ್ಯುಕ್ತಿಕವಾಗಿ ಒಬ್ಬರನ್ನು ರೇಗಿಸುವುದು ತಲೆಹರಟೆಯ ಪರಮಾವಧಿ!
ನೀವು ಕಾರ್ಯಕ್ರಮಕ್ಕೆ ಬಂದು ಏನು ಮಾಡಿದಿರಿ ಎಂದು ನನಗೆ ಅರ್ಥವಾಗುತ್ತಿಲ್ಲ. ಎಷ್ಟು ಜನ ಚಡ್ಡಿ ಹಾಕಿಕೊಂಡು ಬಂದಿದ್ದರೆಂದು ಎಣಿಸಿದಿರೋ, ಯಾವ ಹುಡುಗ ಯಾವ ಹುಡುಗಿಗೆ ಗಾಳ ಹಾಕುತ್ತಿದ್ದಾನೆಂದು ನೋಡಿದಿರೋ, ಅಥವಾ ಯಾರದ್ದೋ ಬೋಳು ತಲೆ ನೋಡುತ್ತಿದ್ದಿರೋ, ಅಥವಾ ಯಾರೋ ರಸಭಂಗ ಮಾಡಿದ್ದು ನೋಡುತ್ತಿದ್ದಿರೋ??? ನಿರಾಶೆ ಮೂಡಿಸಿದ ಕೂಟ ಎಂದು ಬರೆದುಬಿಟ್ಟಿರಿ. ಕಾರ್ಯಕ್ರಮಕ್ಕಿಂತ ಬೇಡದ ವಿಷಯಗಳ ಮೇಲೇ ಗಮನ ಹರಿಸಿ ಹೀಗೆ ಬರೆಯುವುದು ಸರಿಯಲ್ಲ.
ಬ್ಲಾಗಿಗರ ಪರಿಚಯ ಸರಿಯಾಗಿ ಆಗಲಿಲ್ಲ ಎಂದು ಬರೆದಿದ್ದೀರ. ಚಹಾ ವಿರಾಮದ ಸಮಯದಲ್ಲಿ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಳ್ಳುವಲ್ಲಿ ನಿರತರಾಗಿದ್ದನ್ನು ನೋಡಿದೆ. ನೀವ ಆಗ ಮತ್ತೊಂದು ಕಪ್ ಚಹಾ ಗಿಟ್ಟಿಸುವಲ್ಲಿ ನಿರತರಾಗಿದ್ದಿರೇನೋ! ಅಷ್ಟಕ್ಕೂ "ನಿಮಗೆ ಎಲ್ಲಾ ಬ್ಲಾಗಿಗರನ್ನೂ ಪರಿಚಯವನ್ನು ನಾವೇ ಸ್ವತಃ ಮಾಡಿಕೊಡುತ್ತೇವೆ" ಎಂದು ಪ್ರಣತಿ ನಿಮ್ಮನ್ನು ಅರಶಿನ ಕುಂಕುಮ ಕೊಟ್ಟು ಕರೆದಿರಲಿಲ್ಲವಲ್ಲ! ಆಂಗ್ಲದಲ್ಲಿ ಒಂದು ಮಾತಿದೆ - "You can take a horse to water, but you cannot make it drink"
ಪಾಟೀಲರೆ,
ನೀವುಕಾಯ೯ಕ್ರಮಕ್ಕೆ ಹೇಗೆಬ೦ದ್ರಿ ಏನುಕಾಕೊ೦ಡುಬ೦ದ್ರಿ ಮುಖ ನೋಡಿದ್ರೆ ಕನ್ನಡ ಬ್ಲಾಗ್ ಬರಿಯೋವ್ರಥರಾ ಇತ್ತಾ ಆನೋದನ್ನೆಲ್ಲ ಬರೀದೆ ನಾನು ಹೇಳಬೇಕಾದನ್ನ ಹೇಳಿಬಿಡತೀನಿ.
ಯಾವಕಾರ್ಯಕ್ರಮವನ್ನೂ ಅಥವ ಯಾವೊಬ್ಬವ್ಯಕ್ತಿಯನ್ನುಅವನ ಧರಿಸಿನಿ೦ದ ಅಳೆಯುವ ನಿಮ್ಮ ಬಗ್ಗೆ ಖೇದವಿದೆ.
ಮೂರುಘ೦ಟೆಯ ಕಾರ್ಯಕ್ರಮದಲ್ಲಿ ಬ೦ದ ನೂರಿಪ್ಪತ್ತಕ್ಕೂಮಿಕ್ಕ ಬ್ಲಾಗಿಗರನ್ನು ಸ೦ಘಟಕರು ಪರಿಚಯಿಸಿ ಆಮೇಲೆ ಸ೦ಪನ್ಮೂಲವ್ಯಕ್ತಿಗಳು ಮಾತನಾಡಿ ಆನ೦ತರ ಚಚೆ೯ಯಾಗಬೇಕೆನ್ನುವ ನಿಮ್ಮ ಆ ವಾದಕ್ಕೆ ಅದ್ಯಾವ ಲೆಕ್ಕಾಚಾರವಿದೆಯೋ ಗೊತ್ತಿಲ್ಲ.
ಅ೦ದಹಾಗೆ ನಿಮಗೊ೦ದು ಪ್ರಶ್ನೆ ಇದೆ...... ನೀವ್ಯಾವಾಗಾದ್ರೂ ಒ೦ದು ಹತ್ತಿಪ್ಪತ್ತು ಜನ ಸೇರುವ ಕಾಯ೯ಕ್ರಮ ಸ೦ಘಟಿಸಿದ್ದೀರಾ? ನನಗ೦ತೂ ಹೌದೆನ್ನಿಸುವದಿಲ್ಲ ನಿಮ್ಮ ಈ ಮೊ೦ಡುವಾದದ ಬರಹ ಓದಿ.
ರವಿಯವರ ಪೋಸ್ಟ್‌ಗೂ ನಿಮ್ಮ ಪೋಸ್ಟಿಗೂ ಇರೋ ವ್ಯತ್ಯಾಸ ಏನು ಅಂತ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ, ’ನೇರ’ ಮಾತು ಅಂತ ಹೇಳಿಕೊಳ್ಳೋದನ್ನ ಒಂದು ನಿಮಿಷ ಪಕ್ಕಕ್ಕಿಡಿ, ಇದು ನಿಮ್ಮ ಮುಂದಿನ ಬರವಣಿಗೆಗೆ ಸಹಾಯಕವಾಗುತ್ತೆ. ನಿಮ್ಮ ಪೋಸ್ಟಿಗೆ ಬಂದ ಹಾಗೆ ನೆಗೆಟಿವ್ ಪ್ರತಿಕ್ರಿಯೆಗಳು ಅವರಿಗೆ ಯಾಕೆ ಬರಲಿಲ್ಲ, ಅವರ ಬ್ಲಾಗ್ ನಲ್ಲಿ ಯಾಕೆ ಆರೋಗ್ಯಪೂರ್ಣ ಚರ್ಚೆ ಷುರುವಾಗಿದೆ - ಯೋಚಿಸಿ. ಯಾವ ವೈಯುಕ್ತಿಕ ದ್ವೇಷವೂ ಇಲ್ಲದೇ ನಾವ್ಯಾಕೆ ಇಷ್ಟು ಬರೀತಿದ್ದೀವಿ ಇಲ್ಲಿ - ಎಲ್ಲರಿಗೂ ಟೈಮ್ ಹೆಚ್ಚಾಗಿದ್ಯಾ ಯೋಚಿಸಿ. ನಿಮ್ಮ ಪೂರ್ವಾಗ್ರಹಗಳನ್ನ ಒಂದೇ ಒಂದು ನಿಮಿಷ ಪಕ್ಕಕ್ಕಿಟ್ಟರೆ ನಿಮಗೇ ಪ್ರಯೋಜನ ಆಗುತ್ತೆ ಅಂತ ನನಗನ್ನಿಸುತ್ತೆ.
ಶ್ರೀ
"ನಿಮ್ಗೆ ನಾನ್ಯಾರೋ ಹೊರಗಿನವನು ಅನ್ನ್ಸಿದ್ದಕ್ಕೆ ಅಲ್ಲಿನ ಪರಿಸ್ಥಿತಿಗಿಂತ ನಿಮ್ಮ outlook ಕಾರಣ "
ನಿಜವಾಗ್ಲೂ ಹಿಂತದೂ ಒಂದು ಕಾರಣ ಇರುತ್ತೆ ಅಂತ ತಿಳಿದಿರಲಿಲ್ಲ,ಮುಂದೆ ಹಿಂತಹ ಕಾರ್ಯಕ್ರಮಗಳಿಗೆ ಹೋಗುವಾಗ ಔಟ್ ಲುಕ್ ಬಗ್ಗೆ ಖಂಡಿತ ಗಮನ ನೀಡುತ್ತದೆ. ಹೇಗಿದ್ದರೆ ಚೆನ್ನಾಗಿರುತ್ತೆ ಅಂತ ಹೇಳಿದರೆ ಇನ್ನೂ ಉಪಕಾರವಾಗುತ್ತದೆ..
ಎಂ ಡಿ.
"ಕೆಲವು ಜನ ಕಾರ್ಯಕ್ರಮದಿಂದ ಹೊರಗೆ ಹೋಗುವಾಗ ತಮ್ಮತಮ್ಮಲ್ಲೇ ಮಾತಾಡಿದ್ದನ್ನು ನೀವು ಬ್ಲಾಗಿಸಿದ್ದೀರ.
ಅಂದ್ರೆ ನಿಮಗನಿಸಿದ್ದೇ ಇನ್ನೂ ಕೆಲವರಿಗೆ ಅನಿಸಿದೆ. ನೀವು ಬ್ಲಾಗಿಸಿದ್ದೀರ ಬಹುಶ: ಅದೇ ನೀವು ಮಾಡಿರುವ ತಪ್ಪು"
ಇರಬಹುದು ಸಾರ್..
ಹರ್ಷ
"ನೀವ್ಯಾವಾಗಾದ್ರೂ ಒ೦ದು ಹತ್ತಿಪ್ಪತ್ತು ಜನ ಸೇರುವ ಕಾಯ೯ಕ್ರಮ ಸ೦ಘಟಿಸಿದ್ದೀರಾ? "
ಇದನ್ನೆ ನಾನು ಬೆನ್ನು ಚಪ್ಪರಿಸಿಕೊಳ್ಳುದು ಅಂದಿದ್ದು ಮತ್ತು ಈ ಪ್ರಶ್ನೆ ಕೇಳುವ ಮುನ್ನ ಇನ್ನೊಮ್ಮೆ ಯೋಚಿಸಿ ಕೇಳಬೇಕಿತ್ತು.ಉತ್ತರಿಸುವುದು ಅಪ್ರಸ್ತುತ ಅನಿಸುತ್ತೆ.
ಔಟ್‌ಲುಕ್ ಹೆಂಗಿರಬೇಕಿತ್ತು ಅಥ್ವಾ ಹೆಂಗಿದ್ರೆ ನಿಮಗೆ ಇಷ್ಟು ಅಸಮಾಧಾನ ಆಗ್ತಿರಲಿಲ್ಲ ಅನ್ನೋದರ ಬಗ್ಗೆ ಇದಕ್ಕೆ ಮುಂಚೆ ಬರೆದ ಹಲವು ಕಾಮೆಂಟ್‌ಗಳಲ್ಲಿ(ನನ್ನದೂ ಸೇರಿ) ಹೇಳಿದೆ. ಅದು ನಿಮಗೆ ಕಾಣಿಸ್ತಿಲ್ಲ ಅಂದ್ರೆ ಇನ್ನು ಇಲ್ಲಿ ಮಾತಾಡಿ ಪ್ರಯೋಜನ ಇಲ್ಲ. ನಿಮ್ಮ ಹೊಸ ಪೋಸ್ಟಿನಲ್ಲಿ ನಿಮ್ಮ ಧೋರಣೆ ಸ್ಪಷ್ಟವಾಗಿ ಹೇಳಿದಮೇಲೂ ಇಲ್ಲಿ ಬಂದು ಮಾತಾಡ್ತಾ ನೀವೆಲ್ಲಿ ತಪ್ಪಿದಿರಿ ಅಂತ ಅರ್ಥ ಮಾಡ್ಸೋ ವ್ಯರ್ಥ ಪ್ರಯತ್ನಕ್ಕೆ ಬಿದ್ದಿದ್ದು ನಮ್ಮ ಹುಂಬತನ. ಬಿಡಿ, ಇನ್ನು ಇಲ್ಲಿ ಸಮಯ ಕಳೆಯೋದಿಲ್ಲ-ನಾನಂತೂ.
ಲೇ ಅಡ್ನ್ಯಾಡಿ ಹುಚ್ಚಗೌಡಾ, ಸುಮ್ನ ಬಸ್ಟಾಂಡು, ಕಷ್ಟದಂಗಡಿ, ಥಂಡಿ, ಹುಡುಗ್ಯಾರು, ಲವ್ವು ಅಂತ ಬರ್ಕೋತ ಇದ್ದಿಪಾ, ಅದನ್ನು ಬಿಟ್ಟು ಹಾದ್ಯಾಗ ಹೊಂಟಿದ್ದ ಹಾವು ತೊಗೊಂಡು ಎದ್ರಾಗ ಬಿಟ್ಕೋಂಡಗ ಮಾಡಿಯಲ್ಲೋ ತಮ್ಮಾ.. ಎಲ್ಲಾರೂ ಛಲೋ ಅಂದ್ರಲ್ಲೊ ನೀನೂ ಜೈ ಅನ್ನಬೇಕಪಾ.. ಬದುಕುದ ಕಲಿಯೋ ಮಳ್ಳಾ.. ಒಮ್ಮೆ ಬಿಟ್ಟು ಎರಡ ಸಲಾ ಚಾ ಕುಡಿದಿ ಅಂತಿಪಾ, ಮತ್ತೇನ ಬೇಕ ನಿಂಗ?. ಅಲ್ಲಲೇ ತಮ್ಮಾ ಆ ಹೆಣಮಗಳು ನಿನ್ನ ಔಟ್ ಲುಕ್ ಚಲೋ ಇರಲಿಲ್ಲಾ ಅಂತಾಳಲ್ಲ, ಮಗನ ಚಡ್ಡಿಯರ ಹಾಕ್ಕೋಂಡ್ ಹೊಗಿದ್ಯೋ ಇಲ್ಲೋ :)
ಸುಮ್ನ ಚಾಸ್ಟಿ ಮಾಡಿನಪಾ ಮಾರಯಾ, ಮತ್ತ ಯಾವುದರ ಜಡ್ಡ ಹೆಸರು ಹೇಳಿ ಹೆದರಿಸಬ್ಯಾಡ. ತಪ್ಪ ಅನಿಸಿದರ ಹೊಟ್ಯಾಗ ಹಾಕ್ಕೋ.. :)
ವಿನಾಯಕ.ಗುಳೇದಗುಡ್ಡ
ಲೇ ಪಾಟೀಲಾ
ನಿನಗ 'ಜೈ' ಅನ್ನಾಕ ಬರೂದಿಲ್ಲೇನು?
ಪಾಪಾ ಆ ಎಲ್ಲಾ ಹುಡುಗಿಯರಿಗೆ ಅವರವರ ಹುಡುಗರು ಸಿಕ್ಕ್ಯಾರ. ಆ ಹುಡುಗರಿಗೆ ಅವರವರ ಹುಡುಗ್ಯಾರ ಸಿಕ್ಕಾರ.
ನಿನಗ ಯಾವ್ದೂ ಹುಡುಗಿ ಸಿಕ್ಕಿಲ್ಲಾ ಅಂತ ಸಿಟ್ಟಿಗೆದ್ದು ಬರ್ದಬಿಟ್ರ !
ಮಂಗ್ಯಾ ಅಲ್ಲಿ ಬಂದವರೆಲ್ಲಾರು ಭಾಳ ಶಾಣೆ ಇದ್ದವ್ರು. ನೀನೊಬ್ಬ ಮಳ್ಳರಂಗ ಹೋಗಿದ್ದೀ ಅನ್ಸುತ್ತ.
ನೀನು ಚಡ್ಡಿ ಹಾಕೊಂಡು ಹೋಗಬೇಕಾಗಿತ್ತಪ್ಪ. ನಿನಗೂ ನಾಕ್ ಮಂದಿ ಪರಿಚಯ ಆಗ್ತಿದ್ರು.
ಬಂದವ್ರಿಗೇನು ಗೊತಾಗುತ್ತ... ಪುಸ್ತಕ ಮಾರಾ ಜಾತ್ರಿ ಹಚ್ಚಿ ಬರೀ ತಮಗ ಪರಿಚಯ ಇದ್ದವರನ್ನ ಕರಿಸಿ ಮಾತಾಡಿಸಿಬಿಟ್ಟ್ರ ಮುಗೀತು ಅಂದುಕೊಂಡಾರ.
ತಮ್ಮ ತಮ್ಮದು ನೋಡ್ಕೋಬೇಕಲೇ ಮಬ್ಬಾ.
ನೀನೊಬ್ಬವ ಭಾರಿ ಸತ್ಯ ಹರಿಶ್ಚಂದ್ರನಂಗ ಇದ್ದುದ್ದು ಇದ್ದಂಗ ಬರೆದು ಮಚ್ಚಿ ಮೂರುಪಾಲು ಆಗುವಂಗ ಹೊಡಿಸಿಕೊಂಡಿ ನೋಡಪಾ, ಸುಮ್ಮನಿರಾದುಬಿಟ್ಟು
ಅವ್ರ ಪಾಲಿಗೆ ಅದು ಮತ್ತ ಸಕ್ಸಸ್ಸಫುಲ್ಲ್...
'ಜೈ ಪ್ರಣತಿ'
ಈಗ ನೋಡು ನನಗ ಹೆಂಗ ಲವ್ ಲೆಟರ್ ಬರೀತಾರ ನಿನ್ನ ಬ್ಲಾಗಿನ್ಯಾಗ
--ಬ್ಲಾಗ ಕೂಟದ ನಿರಾಶಾ ಸಂಘದ ಅಧ್ಯಕ್ಷ
ನಿನ್ನ ಔಟ್‍ಲುಕ್ಕ್ ಚಡ್ಡಿಯೊಳಗೈತೆ ಅಂತ ಆ ವಿನಾಯಕ ಹೇಳಿಬಿಟ್ನಲ್ಲೋ ತಮ್ಮಾ! ಆ ಹುಡುಗೀಗಿಂತ ಇವ್ನಿಗೇ ನಿನ್ನ ಔಟ್‍ಲುಕ್ ಬಗ್ಗೆ ಚೆನ್ನಾಗಿ ಗೊತ್ತನ್ನಿಸ್ತೈತೆ! ಬ್ಲಾಗರ್‍ನಾಗೆ ನೀ ತಪ್ಪಿ ನಿನ್ನ ಹೆಸರಲ್ಲಿ ಹಾಕಿ, ಆಮೇಲೆ ಅನಾನಿಮಸ್ ಪೋಸ್ಟ್ ಹಾಕೋದು ಕಮೆಂಟ್ ಹೊಡ್ದವರಿಗೆಲ್ಲ ಗೊತ್ತಾಗತೈತಿ, ಜೋಪಾನ!
Dear Santosh,
Please understand one thing. It is your way of thinking which makes us read your blogs/articles. You "Baravanige" is too good really and i am not saying this because i am a "HOGALUBHATTA".
In the context of your comments about the Bloggers meet and the organizers point of view all i can say is........ both you guys have different prespectives that can not be same (and should never be also).
If i were you, i would never give a damn about these so called organizers who are like frogs in the well. Your creativity is not limited (thankfully) to any one meet or place or nation. There are no boundaries really.
The very fact that one can read your blogs through internet around the globe vouch for this great reach you have. Please keep your sanity and do not worry about these insignificant people who try to say otherwise.
PEACE
SP
ಪಾಟೀಲರಿಗೆ ಕೆಲವರು ಬರೆದಿರುವ ಸಂದೇಶದ ಮಧ್ಯೆ ಮೂರನೆಯ ವ್ಯಕ್ತಿಯಾದ ನಾನು ಮೂಗುತೂರಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಅನೇಕ ಆನ್ಲೈನ್ ಕನ್ನಡಿಗರು ಪ್ರತಿದಿನ ಏನು ನಡಿಯುತ್ತಿದೆ ಎಂದು ಕುತೂಹಲದಿಂದ ಈ ಬ್ಲಾಗನ್ನು ನೋಡುತ್ತಿದ್ದಾರೆ, ಕಮೆಂಟುಗಳನ್ನೂ ಬಿಡದೇ. ಇಂಥಾ ಸಂದರ್ಭದಲ್ಲಿ ಕೆಲವರು ಮನಬಂದಂತೆ ಕಮೆಂಟಿಸಿ ಕಾರಣವಿಲ್ಲದೇ ಕೂಟವನ್ನು ಏರ್ಪಡಿಸಿದವರ ತೇಜೋವಧೆ ಮಾಡುತ್ತಿದ್ದಾರೆ.
ಬ್ಲಾಗ ಕೂಟದ ನಿರಾಶಾ ಸಂಘದ ಅಧ್ಯಕ್ಷರೇ,
"ಪುಸ್ತಕ ಮಾರಾ ಜಾತ್ರಿ ಹಚ್ಚಿ ಬರೀ ತಮಗ ಪರಿಚಯ ಇದ್ದವರನ್ನ ಕರಿಸಿ ಮಾತಾಡಿಸಿಬಿಟ್ಟ್ರ ಮುಗೀತು ಅಂದುಕೊಂಡಾರ" ಎಂದು ಬರೆದುಬಿಟ್ರಿ.
ನಾನೂ ಕೂಟಕ್ಕೆ ಬಂದಿದ್ದೆ. ಪ್ರಣತಿ ತಂಡದವರೊಬ್ಬರು "ಇಂಥಾ ಪುಸ್ತಕ ಬಿಡುಗಡೆಗೊಳಿಸಿದ್ದೇವೆ... ಇಲ್ಲಿ ಲಭ್ಯವಿದೆ, ಆಸಕ್ತಿ ಇದ್ದೋರು ತೊಗೋಬೋದು" ಎಂದು ಹೇಳಿದರೇ ಹೊರತು ಮತ್ತೇನೂ ಇಲ್ಲ. ಆಸಕ್ತಿ ಇದ್ದ ಹಲವರು ಚಹಾ ಸಮಯದಲ್ಲಿ ಪುಸ್ತಕ ಕೊಂಡರು. ಅಂಥವರಿಗಾಗಿ ಆ ಘೋಷಣೆ. ಇಷ್ಟಕ್ಕೇ ಬ್ಲಾಗಿಗರ ಕೂಟವನ್ನ ಪುಸ್ತಕದ ಜಾತ್ರೆ ಮಾಡಿಬಿಟ್ರಲ್ಲ ಮಾರಾಯ್ರೇ! ಆಸಕ್ತಿಯಿಲ್ಲದವ್ರು ಬಿಡಲಿ. ಪುಸ್ತಕ ತೊಗೊಳ್ಳೇಬೇಕು ಅಂತ ಯಾರೂ ಯಾರ ಕುತ್ತಿಗೆಯನ್ನೂ ಹಿಡೀಲಿಲ್ಲ.
"ಜೈ ಪ್ರಣತಿ" ಎಂದು ಕೂಗಿ ಎಂದು ಪ್ರಣತಿ ಯಾವಾಗಲೂ ಬಯಸಲಿಲ್ಲ, ನಾನು ಕಂಡಂತೆ. ಬೇಕಾದಷ್ಟು ಜನ ಬ್ಲಾಗಿಗರೇ ಕೂಟ ಚೆನ್ನಾಗಿತ್ತು ಅಂತ ಬರ್ದಿರೋವಾಗ ಇಲ್ಲಸಲ್ಲದ್ದನ್ನು ಹೇಳಿ ಯಾಕ್ರೀ ಪ್ರಣತಿ ತಂಡದೋರ ಮೇಲೆ ಗೂಬೆ ಕೂರ್ಸ್ತೀರಾ? ನನ್ನ ಮಾತಿಂದ ಸಿಟ್ಟು ಬಂತಾ? ಹೋಗ್ಲಿ ಬಿಡಿ. "ಜೈ ಪ್ರಣತಿ" ಅಂತ ಜಪ ಮಾಡ್ತಾ ಕಾಯ್ಕೊಂಡು ಕೂತಿರಿ. ಲವ್ ಲೆಟರ್ ಬಂದ್ರೆ ನಮ್ಗೂ ತಿಳ್ಸಿ. ನಾವೂ ಜಪ ಮಾಡ್ತೀವಿ!
ಗೊತ್ತಿರೋರ್ನ ಕರ್ಸಿ ಮಾತಾಡ್ಸಿದ್ದೇ ತಪ್ಪಾಗೋಯ್ತಲ್ಲ ನಿಮಗೆ! ನನಗೆ ಗೊತ್ತಿದ್ದೋರ್ನ ನಾನಾಗಲೀ ನಿಮಗೆ ಗೊತ್ತಿದ್ದೋರ್ನ ನೀವಾಗ್ಲೀ ಕರೆದು ಕಾರ್ಯಕ್ರಮ ಮಾಡುವ ಉತ್ಸಾಹ ಎಂದೂ ತೋರಲಿಲ್ಲ. ಅವರಿಗೆ ಗೊತ್ತಿದ್ದ ಆನ್ಲೈನ್ ಕನ್ನಡಿಗರನ್ನು ಕರ್ದು ಕಾರ್ಯಕ್ರಮ ಮಾಡಿದ್ರಲ್ಲಿ ಏನ್ ತಪ್ಪು? ಅಥವಾ ಗೊತ್ತಿದ್ದೋರ್ನ ಕರಿಯೋದೇ ತಪ್ಪಾ? ಯಾರೋ ಅಪರಿಚಿತ ಬೀದಿಹೋಕರನ್ನು. ಅವ್ರಿಗೆ ಕನ್ನಡವೇ ಗೊತ್ತಿಲ್ದಿದ್ರೂ, ಕರೆದು ಮಾತಾಡಿಸ್ಬೇಕಿತ್ತಾ ಹೇಗೆ?
- ಬ್ಲಾಗ್ ಕೂಟ ಚೆನ್ನಾಗಿತ್ತೆಂದು ಹೇಳುವ ಗುಂಪಿನ ಸದಸ್ಯ
ಓಹ್! ಒಂದು ಬ್ಲಾಗಿಗರ ಮೀಟಿನ ಬಗ್ಗೆ ಇಷ್ಟೊಂದು ರಾದ್ಧಾಂತ ಆಗ್ತಿದೆ ಅಂತ ನನಗೆ ಗೊತ್ತಿರಲೇ ಇಲ್ಲ
ಒಂದು ನಾಣ್ಯಕ್ಕೆ ಎರಡು ಮುಖವಿದ್ದಂತೆ, ಎಲ್ಲ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಸಕಾರಾತ್ಮಕ ನಕಾರಾತ್ಮಕ ಅಂಶಗಳು ಕಂಡುಬರುತ್ತವೆ.
ಆದರೆ ನಾವುಗಳೂ ಆ ಕಾರ್ಯಕ್ರಮದಲ್ಲಿ ಒಬ್ಬರಾದರೆ, ನಕಾರಾತ್ಮಕ ಅಂಶವನ್ನು ಹೊಟ್ಟೆಯಲ್ಲಿಟ್ಟುಕೊಂಡು, ಸಕಾರಾತ್ಮಕ ಅಂಶವನ್ನು ಹೊರಗೆಡವಬೇಕಿದೆ. ಅದೇ ಮದುವೆ ಮನೆ ಆಗಿದ್ದಿದ್ದರೆ ...
ಹೋಗ್ಲಿ ಬಿಡಿ, ಪಾಟೀಲರೇ, ಇಂತಹ ಸನ್ನಿವೇಶಗಳನ್ನು ನಾಲ್ಕು ವರ್ಷಗಳಿಂದ ನಾನು ಆನೂಚಾನವಾಗಿ ಅನುಭವಿಸುತ್ತಾ ಬಂದಿರುವೆ, ಮುಖ ಮುದುಡಿಸಿಕೊಂಡಿರುವೆ, ಬರಹವನ್ನು ಬದಿಗಿಟ್ಟ ಸಂದರ್ಭವೂ ಇದೆ. ಪ್ರತಿವಾದಿಗಳೇನೂ ಸಾಮಾನ್ಯ ವ್ಯಕ್ತಿಗಳಲ್ಲ. ಅಂತಹವರೊಂದಿಗೂ ಬಹಿರಂಗ ಗುದ್ದಾಡಿ, ಮುಸುಕಿನೊಳಗೆ ಗುದ್ದಾಡಿ, ಮುಖ ಊದಿಸಿಕೊಂಡದ್ದೂ ಇದೆ. ಇವೆಲ್ಲಾ ಜೀವನದ ಆಯಾಮಗಳು.
ಆದರೇನು, ನಾವು ಮಾಡಬೇಕಿರುವುದು ಕನ್ನಡದ ಏಳಿಗೆ, ಹಾಗಾಗಿ ಎಲ್ಲವನ್ನೂ ಮರೆಯೋಣ
ದಯವಿಟ್ಟು ನಿಮ್ಮ ಹೆಸರಿನಲ್ಲಿ ಪ್ರತಿಕ್ರಯಿಸಿ.ಬ್ಲಾಗರ್ ಅಕೌಂಟ್ ಇರದೇ ಇದ್ದವರು ಕಮೆಂಟೆನ ಕೊನೆಗಾದರೂ ನಿಮ್ಮ ಹೆಸರು ಹಾಕಿ.
ಎಸ್ ಪಿ.
ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ.ನಿಮ್ಮ ಮಾತು ಖಂಡಿತ ತಲೆಯಲ್ಲಿಟ್ಟುಕೊಳ್ಳುತ್ತೇನೆ..
ಶ್ರೀನಿವಾಸ್.
ನಿಮ್ಮ ಮಾತನ್ನು ನಾನೂ ಒಪ್ಪುತ್ತೇನೆ, ಇನ್ನೂ ಯಾರಿಗೂ ಪ್ರತಿಕ್ರಯಿಸುವದೂ ಬೇಡ ಅಂದುಕೊಂಡರೂ ಕೆಲವೊಮ್ಮೆ ಅನಿವಾರ್ಯವಾಗಿಬಿಡುತ್ತೆ. ನಿಮ್ಮ ಮಾತು ಪ್ರತಿಶತ ಸತ್ಯ.
"ಹೋಗ್ಲಿ ಬಿಡಿ, ಪಾಟೀಲರೇ, ಇಂತಹ ಸನ್ನಿವೇಶಗಳನ್ನು ನಾಲ್ಕು ವರ್ಷಗಳಿಂದ ನಾನು ಆನೂಚಾನವಾಗಿ ಅನುಭವಿಸುತ್ತಾ ಬಂದಿರುವೆ, ಮುಖ ಮುದುಡಿಸಿಕೊಂಡಿರುವೆ, ಬರಹವನ್ನು ಬದಿಗಿಟ್ಟ ಸಂದರ್ಭವೂ ಇದೆ. ಪ್ರತಿವಾದಿಗಳೇನೂ ಸಾಮಾನ್ಯ ವ್ಯಕ್ತಿಗಳಲ್ಲ. ಅಂತಹವರೊಂದಿಗೂ ಬಹಿರಂಗ ಗುದ್ದಾಡಿ, ಮುಸುಕಿನೊಳಗೆ ಗುದ್ದಾಡಿ, ಮುಖ ಊದಿಸಿಕೊಂಡದ್ದೂ ಇದೆ. ಇವೆಲ್ಲಾ ಜೀವನದ ಆಯಾಮಗಳು"
ಬಿಟ್ ಹಾಕಿ ಆಯ್ತು.ನಾನೋಬ್ಬನೆ ಈ ತರ ಜೇನೂಗೂಡಿಗೆ ಕೈ ಹಾಕಿದ್ದು ಅನ್ಕೋಂಡಿದ್ದೆ :-). ಪ್ರತಿಕ್ರಯಿಸಿದ್ದಕ್ಕೆ ಥ್ಯಾಂಕ್ಸ ಸಾರ್.
@ ಬ್ಲಾಗ್ ಕೂಟ ಚೆನ್ನಾಗಿತ್ತೆಂದು ಹೇಳುವ ಗುಂಪಿನ ಸದಸ್ಯರಿಗೆ
ಎನಪಾ ದೋಸ್ತಾ ನಿನಗ ಎರಡು ಕಪ್ ಚಾ ಕುಡಿಸಿದ್ದಾರಾ ಏನು?
ಅಲಾ ಇವ್ನ 'ಇದ್ದದ್ದು ಇದ್ದಂಗೆ ಹೇಳಿದರೆ ಎದಿಗೆ ಬಂದು ಒದ್ದರಂತೆ' ಅಂಥಾ ಪ್ರಸಂಗಾ ಆತಪಾ ಇದು.
ಹಂಗಂದ್ರ ಏನು ನೀವೇನಾದ್ರೂ ಕಾರ್ಯಕ್ರಮ ಮಾಡಿದ್ರ ಕುತ್ತಿಗಿಗೆ ಕೈ ಹಾಕಿ ಪುಸ್ತಕ ಖರೀದಿಸಾಕ ಹೇಳ್ತೀರೋ ಹೆಂಗ?
ಕನ್ನಡಾ ಬ್ಲಾಗ್ ಬರೀಲಾರದವನಿಗೆ ಸ್ಟೇಜ್ ಮ್ಯಾಲೆ ಕರಿಸಿ ಅನುಭವ ಹಂಚಿಕೋ ಅಂತಾ ಕೇಳ್ತಾರಾ ಪ್ರಣತಿಯವರು. ಅವಾಂ ಹೆ ಹೆ ಅಂತ ಹಲ್ಲು ಕಿಸಿದು ಹೊಕ್ಕನಾ.
ಬರೀ ತಮ್ಮ ದೋಸ್ತರಿಗೆ ಕರಿಸಿ ಚೀಟಿ ಎತ್ತೀವಂತ ಸುಳ್ಳು ಹೇಳೋದು, ಇಷ್ಟ ಸಾಕಾ ಇನ್ನೂ ಹೇಳಬೇಕಾ?
ನನ್ನ ಮಾತಿನಿಂದ ನಿಮಗೆ ಏನರ ಆತಾ? ಹೋಗ್ಲಿ ಬಿಡ್ರಿ.
ನೀವು ಬರೆಯೋ ಕಮೆಂಟುಗಳಿಗೇ ನಾನು ಲವ್ ಲೆಟ್ಟರ್ ಅಂದದ್ದು.
ಅಂತೂ ನೀವಾದ್ರೂ ಒಂದು ಲೆಟರ್ ಬರೆದ್ರಲ್ಲಾ.
ಪಾಟೀಲಾ ಥ್ಯಾಂಕ್ಸಪ್ಪೋ ನಿನ್ನ ಆರ್ಟಿಕಲ್ ಗೆ.
ನನಗೂ expect ಮಾಡಿದ್ದಕ್ಕಿಂತ ನಿರಾಶೆ ಆಯಿತು.ಸುಮಾರು ಜನ ಗೊತ್ತಿದ್ದರಿಂದ ಏಲ್ರುನ್ನೂ ಬಹಳ ದಿನಗಳ ನಂತರ meet ಆಗಿದ್ದು ಕುಷಿ ನೀಡಿತು..ಹೊಸ ಪರಿಚಯಗಳೇನು ಆಗಲಿಲ್ಲ.ಕಾರ್ಯಕ್ರಮದುದ್ದಕ್ಕೂ ನನ್ನ friendge ಚಿರವಿರಹಿನ ತೋರಿಸು ಅಂತ ಕೇಳ್ತಾ ಇದ್ದೆ..ಆದರೆ ಏಲ್ಲೂ ಕಾಣಲಿಲ್ಲಪ್ಪ...
ivara bagge mataada de iruvude lesu antha nanna anisike
summanagibidi devru idu endu mugiyada haadu onthara ------- kalla hoidadanga tiolitalla
ಪಾಟೀಲ್ರೆ,
ನೀವು ಬರೆದದ್ದು ಸರಿಯೋ ಅಥವಾ ತಪ್ಪೋ ಗೊತ್ತಿಲ್ಲ, ಆದ್ರೆ ನಿಮ್ಮ ಬರಹಾನ ಒದಿದವ್ರ ಸಂಖ್ಯೆ ಮಾತ್ರ ಜಾಸ್ತಿ ಆಗ್ತಾ ಇದೆ.
ಕೆಲವರು ತಮಗೆ ಗೊತ್ತಿಲದೆ ಏನೇನೊ ಬರಿತಾರೆ, ಇನ್ನು ಕೆಲವರು ಬೇರೆಯವರಿಗಾಗಿ ಬರಿತಾರೆ, ಇನ್ನು ಕೆಲವರದು ಹವ್ಯಾಸ. ನೀವು ಬರೆದ ಪದಗಳು ನನಗೇ ರವಿ ಬೆಳೆಗೆರೆ ಲೇಖನಗಳನ್ನ ನೆನಪಿಸಿದವು. ಇಲ್ಲೇ ಬರೆದ ಎಲ್ಲ ಪ್ರತಿಕ್ರಿಯೆಗಳು ಅವರವರ ಇಚ್ಚೆ. ನನ್ನ ಪ್ರಕಾರ ಎಲ್ಲರಲ್ಲೂ ಕ್ರಿಯಾಶೀಲತೆ ಅನ್ನೋದು ಇದ್ದೆ ಇರುತ್ತೆ, ಅದು ಕೆಲವರಿಗೆ ಸಕಾರತ್ಮಕಾಗಿ ಇನ್ನು ಕೆಲವರಿಗಿ ನಕರಾತ್ಮಕವಾಗಿ ಕಾಣಿಸುತ್ತೆ. ಆದ್ರೆ ಈ ಭೂಮಿ ದುಂಡಗಿದೆ ನೋಡಿ, ಹಾಗೆ ಎಲ್ಲ ಬರಹಗಳ ಗುರಿ ಕೂಡ ಒಂದೇ. ಅವರವರ ಪ್ರಯತ್ನ ಅವರವರ ಕ್ಯೆಯಲ್ಲಿ.
ಅಂದ ಹಾಗೆ ಮುಂದಿನ ಸಾರಿ ಕೂಟಕ್ಕೆ ಹೋಗುವಾಗ ನಮಗೂ ಕೂಗು ಹಾಕಿ, ನಾವು ಒಂದು ಬಾರಿ ನೋಡುವ :)
ಜೈ ಕನ್ನಡ
ನಿಮ್ಮವ
ರಮೇಶ ಬಾಬು
Post a Comment