ನೆನಪುಗಳ ಮಾತು ಮಧುರ!
ಈ ಮೊದಲು ಇದು ನೆನಪೆ ಆಗ್ತಿರಲಿಲ್ಲಾ, ಆದರೀಗ ಯಾಕೋ ಗೊತ್ತಿಲ್ಲಾ,ಇತ್ತೀಚೆಗೆ ಬರೀ ಅವಳದೇ ಧ್ಯಾನ..
ನಂಗೆ ಇನ್ನೂ ನಿನ್ನೆ ಮೊನ್ನೆ ನಡೆದ ಹಾಗೆ ಸ್ಪಷ್ಟವಾಗಿ ನೆನೆಪಿದೆ,ಬಹುಶಃ ನಾವಾಗ ೫ ನೇ ವರ್ಗದಲ್ಲಿರಬೇಕು. ಒಂದು ದಿನದ ಪ್ರವಾಸಕ್ಕೆ ಅಂತ ಹೊಗಿದ್ದ ನೆನಪು.ಬದಾಮಿ ಹತ್ತಿರದ ’ಮಹಾಕೂಟ’ ಕ್ಷೇತ್ರದ ಚಿಕ್ಕಹೊಂಡದಲ್ಲಿ ಕಾಲುಗಳನ್ನು ಚಾಚಿ ಮೇಲೆದ್ದು ಬಂದವಳ ಕಾಲುಗಳೆಲ್ಲಾ ಹಳದಿ ಹಳದಿ,ಬರೀ ಶ್ವೇತವಸ್ತ್ರಧಾರಿಣಿಯಾಗಿದ್ದ ( ಬಿಳಿ Uniform )ಅವಳ ಕಾಲಗೆಜ್ಜೆಯಿಂದ ಹಿಡಿದು ಅವಳ ಕಣ್ಣ ಬೆರಗು ಇನ್ನೂ ಹಸಿರಾಗಿ ನಿಂತಿದೆ. ಅವಳ ಸಂಭ್ರಮ ಮುಗಿಯಲೆ ಇಲ್ಲಾ! ಕಡಿಮೆ ಅಂದ್ರೂ ಐದಾರೂ ಬಾರಿಯಾದರು ಹೊಂಡಕ್ಕಿಳಿದು ಅರಿಶಿಣ ಬಣ್ಣದ ತನ್ನ ಪಾದಗಳನ್ನು ತೊರಿಸಿ ತೊರಿಸಿ ಸಂಭ್ರಮಿಸಿದ್ದಳಾಕೆ.ಯಾಕೊ ಗೊತ್ತಿಲ್ಲಾ!ಇದನ್ನು ಹೇಳದಿರಲಾಗಲಿಲ್ಲ.
ಈಗ ನನ್ನೊಂದಿಗಿರಿರುವದು ಅವಳ ಕಂಗಳ ಬೆರಗು, ಬೆಳ್ಳಿ ಕಾಲಗೆಜ್ಜೆ,ಅರಿಶಿಣ ಬಣ್ಣದ ಅವಳ ಮುದ್ದು ಪಾದಗಳ ಸ್ಪುಟವಾದ, ಅಳಿಸಲಾಗದ ಮಧುರ ನೆನಪುಗಳು ಮಾತ್ರ.ಬದುಕೇ ನಿನಗೆ ಎನೆಲ್ಲಾ ಲಂಚ ಕೊಟ್ಟರೆ ಮರಳಿ ಅವಳನ್ನು ಮತ್ತು ಅವಳೊಂದಿಗೆ ಕಳೆದ ದಿನಗಳನ್ನು ಮತ್ತು ಚಿಕ್ಕದಕ್ಕು ಆಶ್ಚರ್ಯ ಪಡಿತ್ತಿದ್ದ ಅವಳ ಮಗು ಮನಸ್ಸನ್ನು, ಅವಳ ಕಂಗಳ ಬೆರಗನ್ನು ಮರಳಿಸುವೆ?
3 comments:
ನೆನಪುಗಳ ಮಾತು ಮಧುರ
ಈ ನಿಮ್ಮ ನೆನಪುಗಳ ಮಾತು ಮಧುರದ ಹಾಗೆ ಅದರೊಳಗೆ ಅಡಗಿರುವ ಈ ನಿಮ್ಮ ಮನಸ್ಸಿನ ಮಾತುಗಳು ಕೂಡ ಮಧುರವಾಗಿದೆ.
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಅವರ ಬಾಲ್ಯವು ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ. ಅದು ಈ ನಿಮ್ಮ ನೆನಪುಗಳ ಮಾತು ಮಧುರದಲ್ಲಿ ಅಡಕವಾದ ನಿಮ್ಮ ಬಾಲ್ಯದ ನೆನಪುಗಳು ಗೊತ್ತಿಲ್ಲದೆ ನನ್ನ ಬಾಲ್ಯದ ನೆನಪನ್ನು ಮರುಕಳಿಸುವಂತೆ ಮಾಡಿದೆ.
ಬಾಲ್ಯದ ದಿನದಲ್ಲಿ ನಮ್ಮ ಮನಸ್ಸು ಯಾವ ಗೊಂದಲ, ಚಿಂತೆ, ಚಂಚಲತೆಗೆ ಒಳಪಡದ ಆಕಾಶದಲ್ಲಿ ಸ್ವಚ್ಹಂದವಾಗಿ ತಿಳಿ ಮೋಡಗಳ ನಡುವೆ ಯಾವ ಅಡೆ-ತಡೆ ಇಲ್ಲದೆ ಹಾರಾಡುತ್ತಿರುತ್ತದೆ. ಆಗೇನಿದ್ದರೂ ಆಟ-ಪಾಠ, ಗೆಳೆಯ-ಗೆಳೆತಿಯರೂ, ಜಗಳ ಅಷ್ಟೇ.
ಈಗಿನ ಕಾಲದ ಕೆಲವು ಹುಡುಗ/ಹುಡುಗಿಯರಿಗೆ ಸ್ನೇಹ ಮತ್ತು ಪ್ರೀತಿಗೆ ವ್ಯತ್ಯಾಸವೇ ತಿಳಿಯದು.
ಕೆಲವೇ ನಿಮಿಷದಲ್ಲಿ ಸ್ನೇಹವೂ, ಕೆಲವೇ ನಿಮಿಷದಲ್ಲಿ ಪ್ರೀತಿಯು ಕೂಡ ಹುಟ್ಟುತ್ತದೆ, ಆಮೇಲೆ ಕೆಲವು ಘಂಟೆಗಳಲ್ಲಿ ಆ ಪ್ರೀತಿಯ ಕೂಡ ಮುರಿದುಬೀಳುತ್ತದೆ. ಈಗ ನಿಜವಾದ ಪ್ರೀತಿ ಎನ್ನುವುದ ಭೂತಕನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ. ಈಗೇನಿದ್ದರೂ ಜಸ್ಟ್ ಅಫೆಕ್ಷನ್ ಜೊತೆಗೆ ಟೈಂಪಾಸ್ ಕೂಡ.
ಅಂತಹ ಪ್ರೀತಿಯ ನಡುವೆ ನಿಮ್ಮ ಬಾಲ್ಯ ಗೆಳತಿಯ ಆಟ-ಪಾಠ, ಮಾತು, ಆಕೆಯ ಮುಗ್ಢತೆಯ ವರ್ಣನೆಯು ನನ್ನ ಮನಸ್ಸಿಗೆ ಮುಧವನ್ನುಂಟು ಮಾಡಿದೆ. ನಿಮ್ಮ ಬಾಲ್ಯದ ಗೆಳತಿ ಈಗ ನಿಮ್ಮ ಪ್ರೀತಿಯ ಹುಡುಗಿಯಾಗಿದ್ದಾಳೆ. ಯಾವ ಕಲ್ಮಶವಿರದ, ಸ್ವಾರ್ಥವಿರದ ನಿಸ್ವಾರ್ಥ ಪ್ರೀತಿ ನಿಮ್ಮದಾಗಿದೆ. ನಿಮ್ಮ ಪ್ರೀತಿಗೆ ನನ್ನ ಅಭಿನಂದನೆ. ನಿಮ್ಮ ಪ್ರೀತಿ ನಿಮಗೆ ಸಿಗಲಿ.
ಕೀರ್ತಿ ಎಸ್.ಎನ್.
ಶಿವಮೊಗ್ಗ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಆಗಾಗ ಬಂದು ಹೋಗುತ್ತಿರಿ..
ನನ್ನ ಬಾಲ್ಯದ ದಿನಗಳನ್ನು ನೆನಪಿಸಿದ್ದಕ್ಕೆ ತುಂಬಾ ತುಂಬಾ Thanks.
ನಮ್ಮನ್ನು ನಾವೇ ಕಾಣದೆ ಇರೋ ಹಾಗಿರೋ life ನ busy schedule ನಲ್ಲಿ ಬಾಲ್ಯದ ಮಧುರ ಭಾವನೆಗಳನ್ನು ನೆನಪಿಸಿಕೊಳ್ಳೋಕೆ ಸಹಾಯ ಮಾಡಿದ ನಿನ್ನ ಲೇಖನ ಇಷ್ಟ ಆಯ್ತು.
ಆ ಭಾವನೆಗಾಳೆಷ್ಟು ಮಧುರ ಅಲ್ವಾ?
ಹುಡುಗಿಯರ ಬಗ್ಗೆ ಈಗ ಇರೋ ಸೆಳೆತ, ಯಾರನ್ನೋ ಭೇಟಿಯಾಗಬೇಕೆಂಬ ಹಂಬಲ, ಇದೆಲ್ಲದರ ನಡುವೆ ಕಾರಣ ಇಲ್ಲದೆ ಹುಟ್ಟುತ್ತಿದ್ದ ಬಾಲ್ಯದ ಮಧುರ ಭಾವನೆಗಳನ್ನು ಮರಳಿ ಪಡೆಯಲು ಸಾಧ್ಯವೇ?
ನಿನ್ನ ಈ ಬರಹ ಓದಿದ ಮೇಲೆ ಅವಳ(?) ಬಗ್ಗೆ ನಾನು ಒಂದು article ಬರೆಯೊಕ್ಕೆ ಪ್ರಯತ್ನ ಪಟ್ಟೆ , ಆದರೆ ಅದೇಕೋ ಅವಳಿಗೆ ತೋರಿಸದೇ ಆ ಬರಹ ಅಪೂರ್ಣ ಅಂತ ಅನ್ನಿಸ್ತಾ ಇದೆ.
ನೋಡೋಣ ಮುಂದೆ ಏನಾಗುತ್ತೆ ಅಂತ.
Thanks for the Nice message.
Post a Comment