ಹೀಗೊಂದು ಕವನ!
ಇದು ನಾನೂ ಸಹ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಬೇಕೆಂಬ ಚಪಲಕ್ಕೆ ಬಿದ್ದು ಬರೆದು,ಬರೆದದ್ದನ್ನೆ ’ಕವನ’ಎಂದುಕೊಂಡು ನಾನೇ ಬೆನ್ನು ಚಪ್ಪರಿಸಿಕೊಂಡದ್ದು.ಬ್ಲಾಗಿಗೆ ಭೇಟಿ ನೀಡಿದ ಕರ್ಮಕ್ಕಾಗಿ ಇದನ್ನೂ ಓದುವ ಅನಿವಾರ್ಯ ಕರ್ಮ ನಿಮಗೆ.ನಿಮಗಾಗಬಹುದಾದ ಬೌದ್ದಿಕ ಶೋಷಣೆಗೆ ನಾನು ಹೊಣೆಯಲ್ಲ! :-)
*******************************************************************
ನನ್ನ ಕವನವೆಂದರೆ,
ಸತ್ತ ಶವದ ಹಣೆಯ ಮೇಲಿನ ಸಿಂಧೂರದಂತೆ|
ಘೋರ ಸಮಾಧಿಯ ಮೇಲೆ ನೆಟ್ಟ ತುಳಸಿಯಂತೆ|
ಘಟಸರ್ಪದ ಹೆಡೆಯ ಮೇಲಣ ಮುಕುಟದ ಮಣಿಯಂತೆ|
ವಸುಂಧರೆಯ ಒಡಲಲಿ ಕುದಿವ ಲಾವರಸದಂತೆ|
ಅಘೋರ ಕತ್ತಲಲಿ ಒಡಮೂಡಿದ ಕೊಲ್ಮೀಂಚಿನಂತೆ|
ರುಧ್ರರುಧಿರ ಸ್ನಾನಗೈದ ಉಗ್ರದುರ್ಗಿಯ ಖಡ್ಗದಂತೆ|
ಶೀತಲ ಹಿಮಾಲಯದ ತುದಿಯಲಿ ಸಿಡಿವ ಜ್ವಾಲಾಮುಖಿಯಂತೆ|
ಹಾದಿ ತಪ್ಪಿದ ಸೂಳೆಯ ಕೊರಳ ದೇದಿಪ್ಯಮಾನ ಮಾಂಗಲ್ಯದಂತೆ|
ನನ್ನ ಕವನವೆಂದರೆ,
ತಾಯಹಾಲ ಕುಡಿವ ಹಸೂಗೂಸಿನಂತಲ್ಲಾ,
ಅದು ಹಾಲಾಹಲವನೇ ಕುಡಿದು ಜಯಿಸಿದ ವಿಷಕಂಠನಂತೆ|
*******************************************************************
ಪೂರ್ತಿ ಕವನ(?)ಓದಿದ್ದರೆ Congrats..ನಿಮ್ಮ ತಾಳ್ಮೆಗೆ ಜಯವಿರಲಿ.
4 comments:
Artha aglilla sir.......
ಇರಲಿ ಬಿಡಿ,ಅರ್ಥ ಆಗದಿರೊದೆ ವಾಸಿ.ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳುವಂತದ್ದೆನಿಲ್ಲ ಅದರಿಲ್ಲಿ..ಅಗಾಗ ಇಣುಕುತ್ತಿರಿ..
ನ೦ಗಿಷ್ಟ ಆಯ್ತು
Bhayankar!!!
Post a Comment