Wednesday, April 18, 2007

ಒಂಚೂರು ನನ್ನ ಬಗ್ಗೆ,



ನಾನು ಸಂತೋಷಕುಮಾರ ಪಾಟೀಲ ಅಂತ, ಬರೀ ಪಾಟೀಲ ಅಂದ್ರೂ ಸಾಕು. Engineering ಪದವಿ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಯಿತು.ಕಲಿತದ್ದು(?) ಬಿ.ಎಂ.ಎಸ್ ತಾಂತ್ರಿಕ ವಿದ್ಯಾಲಯದಲ್ಲಿ.ಚಿಕ್ಕವನಿದ್ದಾಗ "ಭಾಳಾ ಶಾಣ್ಯಾ" ಎಂಬ ಆರೋಪಗಳಿದ್ದವು,ಅದರೆ ಈಗಂತೂ ಆರೋಪಮುಕ್ತ. ಹೊಟ್ಟೆಪಾಡಿಗಾಗಿ Software Engineer ಎಂಬ ಸುಂದರ ಹೆಸರಿನ ಚಾಕರಿಕೆ ಮಾಡಿಕೊಂಡಿದ್ದೀನಿ.ಬದುಕಲ್ಲಿ ದೊಡ್ಡ ಮಹತ್ವಾಕಾಂಕ್ಷೆಗಳಿಲ್ಲಾ, ಹೊಸ ಸಾದ್ಯತೆಗಳನ್ನು ಅನ್ವೇಷಿಸುವದು ಮತ್ತು ಹೊಸ riskಗಳನ್ನು chase ಮಾಡುವದು ನನ್ನ passion.
ನಾನು ತುಂಬಾ ಅಹಂಕಾರಿ ಎಂಬುದು ನನ್ನ ಬಗೆಗಿನ ಕಂಪ್ಲೈಂಟ, ಮತ್ತು ನಾನು ತುಂಬ ಸ್ವಾಭಿಮಾನಿ ಎಂಬುದು ನನ್ನ ಬಗೆಗಿನ ಕಾಂಪ್ಲಿಮೆಂಟು(ತುಂಬಾ confusing ಅಲ್ವಾ). ಓದುವದನ್ನು ಹೊರತುಪಡಿಸಿ ಬೇರೆ ಯಾವುದೇ ಹವ್ಯಾಸಗಳಿಲ್ಲ. ಭೈರಪ್ಪಾ ಅಂದ್ರೆ ಪಂಚಪ್ರಾಣ, ಬೆಳಗೆರೆಯ ಶೈಲಿ ಇಷ್ಟ. ಜಯಂತರು ಚಿಕ್ಕ ಸಂಗತಿಗಳನ್ನೂ ದಾಖಲಿಸುವ ಪರಿ ಇಷ್ಟ. ತೇಜಸ್ವೀಯವರ ಇಡೀ ಜಗತ್ತನ್ನು ಬೆರಗುಗಣ್ಣೀನಿಂದ ನೋಡುವ ಮಗು ಮನಸ್ಸು ಇಷ್ಟ,ಇಷ್ಟ.
ಕೊನೆಯದಾಗಿ, ಬರವಣಿಗೆ ಎಂಬುದು ನನ್ನ passion ಎಂಬುದು ನಿಜವಾದರೂ, ಅದು identityಗಾಗಿ ಮತ್ತು ಒಂದು ಚಿಕ್ಕ ಇಮೇಜಗಾಗಿನ ನನ್ನ ಅನಿವಾರ್ಯ ಚಡಪಡಿಕೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.ಸಾಫ್ಟವೇರ ಶರಧಿಯಲ್ಲಿ ಕಳೆದುಹೋಗುತ್ತಿರುವ ನನ್ನತನವನ್ನು ಹುಡುಕುವ ಅರಣ್ಯರೋಧನ,ಬರೀ Human Resource ಆಗೀ ಉಳಿಯಲು ಒಲ್ಲದ ಮನಸ್ಸು ಹೂಡುತ್ತಿರುವ ಹಟದ ಫಲವೇ ಈ ಬ್ಲಾಗು..
ಹಲ್ಲು ಉಜ್ಜಿದ್ದು,ಚಡ್ಡಿ ಹಾಕ್ಕೊಂಡಿದ್ದು,ಗೆಳೆಯರೊಂದಿಗೆ ಮಾತಾಡಿದ್ದು,ನಕ್ಕಿದ್ದು,ಅತ್ತಿದ್ದು,ಇತ್ಯಾದಿ ವೈಯಕ್ತಿಕ ವಿವರಗಳನ್ನು ಬರೆದು ಕಿರಿಕಿರಿ ಮಾಡುವದಿಲ್ಲಾ ಅಂತ promise ಮಾಡುತ್ತೆನೆ.ನಾ ಬರೆದಿದ್ದು ನಿಮಗೆ ಇಷ್ಟವಾದರೆ, ನಾಲ್ಕು ಸಾಲುಗಳನ್ನು ಕುಟ್ಟಿ ಉತ್ತರಿಸುವ ಮೂಲಕ ಬೆನ್ನು ತಟ್ಟಿ, ಕಷ್ಟ ಎನಿಸಿದರೆ ನನ್ನ ಕಿವಿ ಹಿಂಡಿ (ಹುಡುಗಿಯರಾದರೆ ಕೆನ್ನೆ ಗಿಂಡಿ :-)) ಗದರಿಸುವ ಅತ್ಮಿಯತೆಯಂತೂ ನಿಮಗಿದೆ.
ಆಗಾಗ ಬಂದು ಹೋಗುತ್ತಿರಿ....
ಇತಿ ನಿಮ್ಮ ಚಿರವಿರಹಿ,
ಸಂತೋಷಕುಮಾರ ಪಾಟೀಲ

5 comments:

Anonymous said...

Santosh adenu hudugiyarige kenne gindi anta hakidiralla yake hudugiyarige kivi hindoke barolva................

archana said...

chandada blogu..
keep it up..
Cheers,
Archana

ಸಂತೋಷಕುಮಾರ said...

ಧನ್ಯವಾದಗಳು ಅರ್ಚನಾ. ನಿಮ್ಮೊಲವು ಸದಾ ಹೀಗೆ ಇರಲಿ.. ಆಗಾಗ ಬಂದು ಹೋಗುತ್ತೀರಿ..

ಬಿಸಿಲ ಹನಿ said...

ನಿಮ್ಮ ಬಗೆಗಿನ ಪರಿಚಯ ಚನ್ನಾಗಿದೆ. ಅಂದ ಹಾಗೆ B.M.S.ಕಾಲೇಜಿನಲ್ಲಿ ಯಾವ ವರ್ಷ ಓದಿದ್ದು? ನಾನಲ್ಲಿ ನಾಲ್ಕು ವರ್ಷ ಇಂಗ್ಲೀಷ ವಿಭಾಗದಲ್ಲಿ guest lecturer ಆಗಿ ಕೆಲಸ ಮಾಡಿದ್ದೇನೆ. Perhaps,like your friends, you too may not have attended my class, since it was not a compulsory subject. ಬರೆಯುತ್ತಿರಿ.

Anonymous said...

Good blog, please try to bring some of the tourist places nearby your place, even i do belongs to Ron taluk.