Thursday, April 3, 2008

ದೇವರಾಣೆಗೂ ಇದು ಸತ್ಯ!

ನಿಮಗೆಲ್ಲಾ ದೇವರ ಒಡವೆಗಳು ಕಳವಾಗುವ ಸುದ್ದಿ ಹೊಸದಾಗಿರಲಿಕ್ಕಿಲ್ಲ, ಆದ್ರೆ ಮೂಲ ವಿಗ್ರಹವನ್ನೇ ಕದ್ದುಕೊಂಡು ಹೋಗಿದ್ದನ್ನು ಕೇಳಿದ್ದೀರಾ? ಅದು ಯಾವುದೇ ಆಭರಣಗಳನ್ನು ಮುಟ್ಟದೇ!. ಹಿಂತಹ ಒಂದು ಕಳ್ಳತನ ನಮ್ಮೂರ ಪ್ರಸಿದ್ದ ಕಂಠಿ ಬಸವಣ್ಣನ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಹಿಂದೆ ನಡಿದಿತ್ತು, ಆಗ ಪೂಜಾರಪ್ಪನನ್ನು ’ಎನೀದು ಹಕೀಕತ್ತು? ದೇವರನ್ನೇ ಊರು ಬಿಡಿಸಿಬಿಟ್ರಲ್ಲ್ಲಾ" ಎಂದು ದೇಶಾವರಿಯಾಗಿ ಕೇಳಿದ್ರೆ ಆ ಯಪ್ಪಾ " ಬಸವಣ್ಣನಿಗೆ ನಮ್ಮೂರು ಬೇಜಾರಾಗಿತ್ತಂತೂ, ಹೀಗಾಗಿ ಆ ಕಳ್ಳನ ಕನಸಿನಲ್ಲಿ ಹೋಗಿ ನನ್ನನ ಈ ಊರು ಬಿಟ್ಟು ಕರ್ಕೋಂಡು ಹೋಗು ಅಂತಾ ಬಸವಣ್ಣ ಕೇಳಿದ್ನಂತೆ;ದೇವರೆ ಬಂದು ಹೇಳೀದ ಮೇಲೆ ಆ ಕಳ್ಳ ನಮ್ಮ ಬಸವಣ್ಣನ ಎತ್ಕೊಂಡು ಹೋಗಿದ್ದಾನೆ"ಅಂತಾ ಕಥೆ ಕಟ್ಟಿ ಎಲ್ಲಾ ಭಕ್ತಾದಿಗಳಿಗೂ ಹೇಳತೊಡಗಿದರು. ನಮ್ಮೂರ ಹಿರಿಯರು ದೇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟರು, ಪ್ರತಿಫಲ ಮಾತ್ರ ಶೂನ್ಯವಾಯಿತು..

ನಮ್ಮ ಮನೆತನದಲ್ಲಂತೂ ಒಂಥರಾ ದಿಗಿಲು;ಊರ ದೇವರೇ ಊರು ಬಿಟ್ರೆ ಹ್ಯಾಗೆ ಅನ್ನೊದರ ಜೊತೆಗೆ ಇನ್ನೊಂದು ಕಾರಣವೂ ಇದೆ. ಈ ಕಂಠಿ ಬಸವಣ್ಣ ಅಬ್ಬಿಗೇರಿಗೆ ಹೇಗೆ ಬಂದ ಅನ್ನೊದಕ್ಕೆ ನಮ್ಮ ಮನೆಯ ಹಳೆ ತಲೆಗಳು ಒಂದು ಕಥೆಯನ್ನೇ ಹೇಳುತ್ತವೆ. ಅದೆನಪ್ಪಾ ಅಂದ್ರೆ ನಮ್ಮ ಮನೆತನದ ಮೂಲಪುರುಷ ಹೊಲದಿಂದ ಮನೆಗೆ ಬರುವಾಗ ಒಂದು ಜಾಗದಲ್ಲಿ ಚಕ್ಕಡಿ ಮುಂದೆ ಹೋಗಲೇ ಇಲ್ಲವಂತ್, ಅಲ್ಲೇ ನಿಂತು ಬಿಟ್ಟಿತಂತೆ. ಏನಿದು ವಿಚಿತ್ರ ?ಎಂದು ಆ ಮಾರಾಯ ನೋಡಿದ್ರೆ ಚಕ್ಕಡಿಯಲ್ಲಿ ಬಸವಣ್ಣನನ್ನು ಹೋಲುವ ಕಲ್ಲಿತ್ತಂತೆ, ಯುರೇಕಾ ಅಂದುಕೊಂದು ಅಲ್ಲೆ ಪಕ್ಕದಲ್ಲಿಯ ಕಂಠಿಯಲ್ಲಿ ಅದನ್ನು ಎಸೆದು ಮನೆಗೆ ಬಂದು ಮಲಗಿದರೆ, ರಾತ್ರಿ ಕನಸಿನಲ್ಲಿ ದೇವರು ಬಂದು " ನಾನು ನಿನ್ನ ಚಕ್ಕಡಿಯಲ್ಲಿ ಬಂದರೆ ನೀನು ನನ್ನ ಕಂಠಿಯಲ್ಲಿ ಎಸೆಯುತ್ತೀಯಾ?" ಎಂದು ಆವಾಜ್ ಹಾಕಿದ್ನಂತೆ. ಮರುದಿನ ಬಂದು ಆ ಕಂಠಿ ಹುಡುಕಿ ಅಲ್ಲಿಯೇ ಗುಡಿ ಕಟ್ಟಿಸಿದರಂತೆ. ಹೀಗಾಗಿ ಕಂಠಿ ಬಸವಣ್ಣ ನಮ್ಮವನೆಂದೂ ನಮ್ಮ ಮನೆಯಲ್ಲಿ ಹಕ್ಕು ಸಾಧಿಸುತ್ತಾರೆ.[ಕಾಕತಾಳಿಯವೆಂಬಂತೆ ಅದೇ ದಾರಿಯಲ್ಲಿ ನಮ್ಮ ಹೊಲವಿದೆ.ಅಲ್ಲದೇ ಶ್ರಾವಣದ ಮೊದಲ ಪೂಜೆ ಸಲ್ಲುವದೂ ಗೌಡರ ಮನೆಯಿಂದಲೇ,ತೇರಿನ ಕಳಸ, ಹಗ್ಗ ಬರುವುದು ಗೌಡರ ಮನೆಯಿಂದಲೇ ಮತ್ತು ನನ್ನ ತಾಯಿಯ ತವರುಮನೆಯ ಮನೆದೆವ್ರು ಸಹ ಈ ಕಂಠಿ ಬಸವಣ್ನನೇ ಮತ್ತು ಬಸವಣ್ಣನಿಗೆ ತೇರು ಮಾಡಿಸಿದ್ದು ಅವರೇ].ಇಷ್ಟೆಲ್ಲಾ ಇರಬೇಕಾದ್ರೆ ಚಿಂತೆ ಆಗದೇ ಇರುತ್ಯೆ?. ಕೊನೆಗೂ ಹಲವಾರು ದಿನ ಹುಡುಕಾಡಿ ಎಲ್ಲಿಂದಲೋ ಅದೇ ವಿಗ್ರಹವನ್ನು ಹೋಲುವ ವಿಗ್ರಹವನ್ನು ತಂದು ಗುಡಿಯಲ್ಲಿ " ಇದೇ ನಮ್ಮ ಬಸವಣ್ಣ" ಅಂತ ಸಮಾಧಾನ ಮಾಡ್ಕೋಂಡ್ರು. ಅದ್ರೂ ಎಲ್ಲರ ಮನದಲ್ಲಿ ಇದು ನಿಜವಾದ ಬಸವಣ್ಣಾನಾ ಅಂಥಾ ಡೌಟ್ ಇವತ್ತೀಗೂ ಇದ್ದೇ ಇದೆ..

ಅದ್ರೆ ಮೇನ್ ಪಾಯಿಂಟ ಇದಲ್ಲ್ಲಾ. ಪ್ರತಿ ಯುಗಾದಿಗೆ ನಮ್ಮ ಬಸವಣ್ಣನ ಗುಡಿಯಲ್ಲಿ ಒಂದು ಪವಾಡ(?) ನಡೆಯುತ್ತೆ. ಯುಗಾದಿಯ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೆ ಗುಡಿಯ ಮುಂದಿನ ಬಯಲಿನಲ್ಲ, ಕಲ್ಲು ಸಂಧಿಗಳಲ್ಲಿ ವಿವಿಧ ಧಾನ್ಯಗಳ ಸಸಿಗಳು ಏಕಾ ಎಕಿ ಉದ್ಬವವಾಗಿಬಿಟ್ಟುರುತ್ತವೆ. ಯಾವ ಧಾನ್ಯದ ಸಸಿ ಯಥೇಚ್ಚವಾಗಿ ಬೆಳೆಯುತ್ತೋ ಮುಂದಿನ ವರ್ಷ ಆ ಬೆಳೆ ಚೆನ್ನಾಗಿ ಬರುತ್ತಂತೆ.ಆದರೆ ಸೂರ್ಯನ ಬಿಸಿಲು ಬಿದ್ದ ಕೂಡಲೇ ಅವೆಲ್ಲಾ ಕರಗಿ ಬಿಡುತ್ತವಂತೆ;ಹೀಗಾಗಿ ನಚ್ಚ ನಸುಕಿನಲ್ಲೇ ನಮ್ಮೂರ ಜನತೆ ಗುಡಿ ಬಯಲಿನಲ್ಲಿ ಬ್ಯಾಟರಿ ಹಿಡಿದು, ಲಾಟೀನು ಹಿಡಿದು ಸಂಧು ಗೊಂದುಗಳಲ್ಲಿ ಸಸಿಯನ್ನು ಹುಡುಕುತ್ತಿರುತ್ತಾರೆ ಮತ್ತು ಕಷ್ಟ ಪಟ್ಟು ಸಸಿಯನ್ನು ಗುರುತಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಚಿಕ್ಕವನಾಗಿದ್ದಾಗ ನಾನೂ ಈ ಹುಡುಕಾಟದ ಸಕ್ರಿಯ ಸದಸ್ಯನಾಗಿದ್ದೆ. ಮತ್ತು ಸಿಕ್ಕ ಸಸಿಯನ್ನು ಮನೆಗೆ ತಂದು ದೊಡ್ದ ಗಿಡ ಮಾಡುವ ಭರದಲ್ಲಿ ಹಿತ್ತಲಿನಲ್ಲಿ ನೆಟ್ಟರೆ ಬಿಸಿಲು ಬಿದ್ದ ಮೇಲೆ ಬಂದು ನೋಡಿದ್ರೆ ಸಸಿ ಮಂಗಮಾಯ. ವಿಚಿತ್ರ ಎಂದರೆ ಬಸವಣ್ಣನನ್ನು ಕದ್ದ ವರ್ಷವೂ , ಅಂದ್ರೆ ಗುಡಿಯಲ್ಲಿ ಬಸವಣ್ಣ ಇಲ್ಲದಾಗ್ಲೂ ಸಸಿ ಹುಟ್ಟಿದ್ದುವು ಮತ್ತು ಒರಿಜನಲ್ ಬಸವಣ್ಣ ಇಲ್ಲದಿದ್ರೂ ಹುಟ್ಟುತ್ತಿವೆ. ಹೀಗಾಗಿ ಈ ಸಸಿಯ ಮರ್ಮ ನನಗೂ ತಿಳೀತಿಲ್ಲಾ. [ತಿಳಿದವರು ಹೇಳಿದರೆ ಮಹದುಪಕಾರವಾಗುತ್ತೇ]

ವೈಜ್ನಾನಿಕ ಕಾರಣಗಳೇನೆ ಇರಲಿ, ನಾನಂತೂ ಯುಗಾದಿಗೆ ಹೊರಟ್ಟಿದ್ದೇನೆ ಮತ್ತು ಅವತ್ತು ಸಸಿ ಹುಡುಕುವ ಕಾರ್ಯಕ್ರಮವೂ ಇದೆ. ಈ ತರದ ನಂಬಿಕೆಗಳಲ್ಲಿ, ಆಚರಣೆಗಳಲ್ಲಿ ಎನೋ ಒಂದು ಖುಷಿ.

ಮುಂಚಿತವಾಗಿಯೇ ಸರ್ವರಿಗೂ ಯುಗಾದಿಯ ಶುಭಾಶಯಗಳು

13 comments:

ಡಿ ಆರ್ ಮಧುಸೂದನ್ said...

ಯುಗಾದಿಯ ಶುಭಾಶಯಗಳೊಂದಿಗೆ,

ಗುರುಗಳೆ, ನಿಮ್ಮೂರಿನ ಕತೆ ಕೇಳಿದ ಮೇಲೆ ನಾನೂ ಒಂದು ಸಲ ಬಂದು ನೋಡಬೇಕು ಅನ್ನಿಸುತ್ತಿದೆ.
ಈ ತರವು ಮೂಢ ನಂಬಿಕೆ ಆದ್ರೂ ಕೇಳೋಕೆ ನೋಡೋಕೆ ಮಾಡೋಕೆ ತುಂಬಾ ಚೆನ್ನಾಗಿರುತ್ತೆ.
ಕುತೂಹಲದ ಸಂಗತಿ ಹೇಳಿದ್ದಕ್ಕೆ ಧನ್ಯವಾದ.

MD said...

"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.

ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.

ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.

I apologize for spamming, but no other way to inform :-(

sp said...

Happy Ugadi to you Santosh.

ENJOY!

ಸಂತೋಷಕುಮಾರ said...

ಮಧು
ಮೊದ್ಲೆ ಹೇಳಿದ್ರೆ ಇಬ್ರೂ ಹೊಗಬಹುದಿತ್ತೇನೋ.:)

ಎಮ್, ಡಿ
"ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ"
ಖಂಡಿತ !!

ಎಸ್ ಪಿ
ಧನ್ಯವಾದಗಳು ಸಾರ್..

Anonymous said...

ಕುತೂಹಲಕಾರಿಯಾದ ಲೇಖನ.
ಚೆನ್ನಾಗಿದೆ.
- ಚೇತನಾ

Anonymous said...

ನಮಸ್ಕಾರ ಸಂತೋಷರಿಗೆ,

ಯುಗಾದಿಯ ಶುಭಾಶಯಗಳು, ಊರಿಗೆ ಹೋಗಿ ಜಾತ್ರಿ ಮಾಡ್ಕೊಂದು ಬಂದ್ರಿಲ್ಲೊ.

ನನಗ ಹಬ್ಬಕ್ಕ ಊರಿಗೆ ಹೋಗಾಕ ಆಗಲಿಲ್ಲ, ನಿಮ್ಮ ಬ್ಲಾಗ ಓದಿ ಊರ ನೆನಪು ಬಾಳ ಆಗಿತ್ತು.

ಲೇಟಾಗಿ ಪ್ರತಿಕ್ರಿಯೆ ನಿಡಿದ್ದಕ್ಕ ಕ್ಷಮಾ ಮಾಡ್ರಿ, ಎನು ಮಾಡುದು ಆಫಿಸ್ನಾಗ ಬ್ಲಾಗರ್ ಬ್ಲಾಕ್ ಮಾಡ್ಯಾರ್.

ಊರಾಗಿನ ಸುದ್ದಿ ಇನ್ನು ಹೆಚಹೆಚ್ಚಿಗೆ ಬರಿರಿ, ಉರಾಗ ಇದ್ದಂಗ ಆಕೈತಿ.

ಶರಣರಿ..

ಶೆಟ್ಟರು
http://somekanasu.wordpress.com/

NilGiri said...

ಸಸಿ ಸಿಕ್ಕಿತಾ..;-)

ಅರೇಹಳ್ಳಿ ರವಿ said...

ಸಂತೋಷ್,
ನಮ್ಮೂರಲ್ಲೂ ಹನುಮಂತನ ಪಂಚಲೋಹದ ವಿಗ್ರಹ ಕಳುವಾಗಿತ್ತು. ಬಡ ಬ್ರಹ್ಮಚಾರಿಯಲ್ವಾ-ಅವನ ಮೈಮೇಲೇನಿರುತ್ತೆ? ಮೂಲವಿಗ್ರಹದಲ್ಲಿದ್ದ ಒಂದು ಬೆಳ್ಳಿಯ ಎದೆಕವಚ ತೆಗೆದುಕೊಂಡು ಹೋಗಿದ್ದರು.ಆದರೆ ಕಳುವಾದ ಪಂಚಲೋಹದ ಉತ್ಸವ ಮೂರ್ತಿ ಮೂರೇ ದಿನಕ್ಕೆ ಊರ ಹತ್ತಿರದ ಸೇತುವೆ ಕೆಳಗೆ ಸಿಕ್ಕಿತ್ತು. ಹುನುಮಂತ ತುಂಬಾ ಭಾರವಾಗಿ ಬೆಳೆದು, ಕಳ್ಳರು ಅದನ್ನು ಬಿಟ್ಟು ಹೋದರು ಅಂತ ಜನ ಈಗಲೂ ಕಥೆ ಹೇಳ್ತಾರೆ...!
ರವೀ...
ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...

MD said...

Hi Santosh,
Please have a look over my blog.

Raju said...

Hey dude, your blog is too good, I used your blog to do a Unicode testing......

Supreeth.K.S said...

ಆ ಸಸಿಗಳ ವಿಷಯವನ್ನ ಎಂಜಾಯ್ ಮಾಡ್ತೀನಿ ಅಂದ್ರಲ್ಲಾ, ಅದೇ ಖುಷಿಯ ವಿಚಾರ. ಚಿಕ್ಕಂದಿನಲ್ಲಿ ಮುಗ್ಧವಾಗಿ ಮಾಡುತ್ತಿದ್ದ ಅದೆಷ್ಟೋ ಕೆಲಸಗಳನ್ನು ದೊಡ್ಡವರಾದ ಮೇಲೆ ಒಂದೋ ಮೂಢ ನಂಬಿಕೆಯಾಗಿ ಮುಂದುವರೆಸಬೇಕು ಇಲ್ಲವೇ ವೈಚಾರಿಕತೆ ಹೆಸರಲ್ಲಿ ಬಿಟ್ಟುಬಿಡಬೇಕು ಎಂಬುದು ನಮ್ಮ ನಡುವಿನ ದುರಂತ.

........
ಸಮಯವಾದಾಗ ಭೇಟಿ ಕೊಡಿ: http://uniquesupri.wordpress.com/

ಸಂತೋಷಕುಮಾರ said...

@ಚೇತನಾ,
ಧನ್ಯವಾದಗಳು,

@ಶೆಟ್ಟರೆ,
ನಾವೂ ಇತ್ತೀಚೆಗೆ ಸ್ವಲ್ಪ ಬ್ಯುಸಿ.. ತಿಳಿದದ್ದು ಬರೀತ್ತೆನ್ರಿ. ಊರಿನ ಸುದ್ದಿ ಬರಿಯಾಕ ನಂಗೂ ಖುಷಿ..

@ನೀಲಗಿರಿ,
ಇಲ್ಲಾರೀ.. ಬೆಳಗ್ಗೆ ಹೋಗೋಕೆ ಅಗ್ಲಿಲ್ಲಾ..

@ರವಿ,
ಕಥೆ ಕಟ್ಟೋದ್ರಲ್ಲಿ ನಮ್ಮೋರು ನಿಸ್ಸಿಮರು.. ಅವನ್ನೇಲ್ಲಾ ದಾಖಲಿಸಿದರೆ ಸಾಹಿತ್ಯ ಅಕಾಡೆಮಿಗಳಿಗೆ ಪ್ರಶಸ್ತಿ ನಿರ್ದರಿಸೊಕೆ ಕಷ್ಟ ಆಗಿರೋದು.. :)

@ರಾಜು,
ಪುಣ್ಯಾತ್ಮ ನಿನ್ನ ಸಂಶೋಧನೆಗಳಿಗೆ ನನ್ನ ಬ್ಲಾಗ್ ಬಲಿಯಾಗದಿರಲಿ ಮಹಾರಾಯ. ಬಡಪಾಯಿಗಳು ಎನೋ ಗೀಚ್ತಾ ಇದ್ದೀವಿ..

@ಸುಪ್ರೀತ್,
ಬೇರು ಬಿಟ್ಟು ಬದುಕೋಕೆ ಆಗುತ್ತಾ? ಸರಿನೋ ತಪ್ಪೋ ಖುಷಿ ಕೊಡೊ ಎಲ್ಲಾ ಆಚರಣೆಗಳು ನನಗೆ ಇಶ್ಟ.ಆಗಾಗ ಬರುತ್ತೀರಿ..

....Here I Am said...

santosh,

nice articles. i really enjoyed the subject of the articles. keep writing good articles.