ರಾಯರ ಮಠದ ಹುಡುಗಿಗೆ....
ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ ಅಂದ್ರೆ ಇಷ್ಟ ಎಂದು?. ನಿನ್ನ ನೋಡಿದ ತಕ್ಷಣ " ತಥ್ ಇವತ್ತೆ ಈ ಮಾಸಲು ಟೀ ಶರ್ಟು ಹಾಕ್ಕೋಂಡು ಮಠಕ್ಕೆ ಬರಬೆಕಿತ್ತಾ ನಾನು " ಎಂದು ಸಾವಿರ ಸರ್ತಿ ಹಳಿದುಕೊಂಡಿದ್ದಿನಿ.
ಸತ್ಯವಾಗ್ಲೂ ಹೆಳ್ತಿನಿ, ನಂಗೆ ಬುದ್ಧಿ ಬಂದಾಗಿನಿಂದ ದೇವಸ್ಥಾನಕ್ಕೆ, ಮಠಕ್ಕೆ ಅಂತ ಹೋದವನೇ ಅಲ್ಲಾ!.ಆಕಸ್ಮಾತ್ ಹೊದ್ರು ದೇವರಿಗೆ ಕೈ ಮುಗಿದದ್ದು ನೆನಪಿಲ್ಲಾ. ನಮ್ಮ ಮನೋಜ್ ಹೇಳಿಯೇ ಹೇಳ್ತಿದ್ದ " ರೀ ಗುರುವಾರ ರಾಘವೇಂದ್ರನ ಮಠಕ್ಕೆ ಹೋಗಬೇಕ್ರಿ, ಏನ್ ಹೇಳ್ಲಿ ನಿಮ್ಗ, ಕಂಡಾಪಟಿ ಮಸ್ತ್ ಹುಡುಗ್ಯಾರು ಬಂದಿರ್ತಾರ" ಅಂತ ಅತ್ಯಂತ ಉಮ್ಮೆದಿಯಿಂದ ಹೇಳಿದ್ದ.I swear ಇವತ್ತಿನವರೆಗೂ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೋಗಿರಲಿಲ್ಲಾ. ಇವತ್ತೂ ಸಹ ಅವನು ಒತ್ತಾಯ ಮಾಡಿದ ಅಂತ ಬಂದೆನೆ ಹೊರ್ತು, ಬರಲೇಬೇಕು ಅಂತಲ್ಲಾ.ಆದ್ರೆ ಈಗಲೆ ಹೇಳಿಬಿಡ್ತಿನಿ ಇನ್ನೂ ಮುಂದಿನ ಪ್ರತಿ ಗುರುವಾರಗಳಲ್ಲಿ ಮಠಕ್ಕೆ ನನ್ನ ಕಡ್ಡಾಯ ಹಾಜರಾತಿ ಇರುತ್ತೆ, ಅದು ಕೇವಲ ನಿನಗಾಗಿ, ನಿನ್ನ ಬರುವಿಕೆಗಾಗಿ..
ನೀನು ನನ್ನ ಕಿರುಗಣ್ಣಿನಲ್ಲೆ ನೋಡಿದ್ಯಾ?, ಗೊತ್ತಿಲ್ಲಾ! ಆದ್ರೆ ನೋಡಿದೆ ಅಂತ ಸುಳ್ಳೆ ಅಂದ್ಕೊಂಡು ಖುಶಿ ಪಡೊದ್ರಲ್ಲೂ ಇಷ್ಟು ಸುಖವಿರುತ್ತಾ?. ಏನು ಮಜಾ ಅಂತೀನಿ ಒಂದು ಮೂಲೆಯಲ್ಲಿ ನಿರ್ಭಾವುಕನಾಗಿ ಕೂತಿದ್ದ ನಾನು ಪ್ಯಾಲಿಯಂತೆ ನಿನ್ನ ಹಿಂದೆ ಸುತ್ತಿದ್ದೆ ಸುತ್ತಿದ್ದು.ನಿಂಗೆ ಮುಜುಗುರವಾಯ್ತಾ ಚಿನ್ನು?. ನೀನಿಟ್ಟ ಹೆಜ್ಜೆಯ ಮೇಲೆ ನಾನು ಸಹ ಜಾಗರೂಕತೆಯಿಂದ ಪಾದವೂರಿ ಪ್ರದಕ್ಷಿಣೆ ಹಾಕದೆ ಹೋದರೆ ಈ ಜನ್ಮದಲ್ಲೇನೊ ಕಳೆದುಕೊಂಡುಬಿಡ್ತಿನಿ ಅಂತ ಅನಿಸತೊಡಗಿತ್ತು ಕಣೆ. ಆ ಶಾಸ್ತ್ರಿಗಳು ಕೊಟ್ಟ ಮಂತ್ರದ ಅಕ್ಷತೆಕಾಳನ್ನು ತಲೆ ಮೇಲೆ ಹಾಕ್ಕೊಬೇಕು ಅನ್ನೊದು ತಿಳಿಯದ ಶುದ್ದಾತಿಶುಧ್ದ ಬೆಪ್ಪು ಕಣೆ ನಾನು. ನಿನ್ನ ತಲೆಯಿಂದ ಜಾರಿಬಿದ್ದ ಅ ಅಕ್ಷತೆ ಕಾಳುಗಳನ್ನು ಎಷ್ಟು ಕಷ್ಟ ಪಟ್ಟು ಹೆಕ್ಕಿಕೊಂಡೆನೋ ಗೊತ್ತಿಲ್ಲಾ!
ನೀನಿದ್ದಷ್ಟು ಹೊತ್ತು ನಂಗೆನೋ ಒಂಥರಾ ಸಮಾಧಾನ, ಮನತೃಪ್ತಿ. ಈ ಹಿಂದೆ ಎಷ್ಟು ಭಾರಿ ಬಂದರೂ ಸಿಗದ ಮನಶಾಂತಿ ಆ ಕ್ಷಣಕ್ಕೆ ಆಗತೊಡಗಿತು ಚಿನ್ನು. ನೀ ಮಠದಿಂದ ಹೊರಬಂದು ಹೊರಗಿದ್ದ ತುಳಸಿಗೆ ಹಣೆಯೊತ್ತಿ ನಮಿಸಿದಾಗ ನಾನೂ ತುಳಸಿ ವಿವಾಹದ ದಿನದಂದೆ ಹುಟ್ಟಿದ್ದು ಅಂತ ಕೂಗಿ ಕೂಗಿ ಹೇಳಬೇಕಿನಿಸ್ತು.ಇನ್ನೊಮ್ಮೆ ತಿರುಗಿದವಳೆ ಕಣ್ಮುಚ್ಚಿ ನಮಿಸಿ, ನಿನ್ನ ಪಿಂಕ್ ಪಿಂಕು ಕೈನಿಯ ಕಡೆಗೆ ಬರಿಪಾದದಲ್ಲಿ ಹೆಜ್ಜೆಯನ್ನುಡುತ್ತಿದ್ದರೆ ನನಗಿಲ್ಲಿ
ಯವುದೋ ಶಕ್ತಿ ನನ್ನಿಂದ ದೂರವಾದ ಭಾವ, ಎನೋ ಕಳೆದುಹೋಗುತ್ತಿರುವ ಅನುಭವ..
ರಾಯರ ಮಠದ ಹುಡುಗಿಯೇ ನಿನಗಾಗಿ,ಇನ್ನು ಮುಂದೆ ಬರುವ ಪ್ರತಿ ಗುರುವಾರ ಕಾಯುತ್ತೇನೆ, ಭಾರವಾದ ಎದೆಯಲ್ಲಿ,ಖಾಲಿ ಮನದಲ್ಲಿ. ನೀ ಮತ್ತೆ ಬಂದೆ ಬರುತ್ತಿಯಾ ಎಂಬ ತುಂಬು ನೀರಿಕ್ಷೆಯಲ್ಲಿ! ನೀ ಬರ್ತಿಯಾ ಅಲ್ವಾ?
18 comments:
avaligagi kaayo hagidre kaayri nale avala frnd bandlu antha ivala bittu avalanna kayoke hogbedri
samanya hudugaru madodu ide alva
Hudugaru devastanakke hogode line hodiyoke antha confirm aythu santosh ravare
Namaskara Patilre...... Janru Devasthanakke hogodhu mannasige shanthi sigli antha ;> neevu ashanthi hutiskondiro hagidhe...............
santosh adenri
nivu ondu sala nodidodane avalige chinnu antha hesaritiralri
hale hesaru hosa huduginendri
ye bido maraya en Sincere idi ninu akki kalalu lova........
ರೀ ಸಂತೋಷ
ಗುರುವಾರ ರಾಯರ ಮಠದ ಹುಡ್ದಿ ಸಿಗ್ತಾಳೆ ಶನಿವಾರ ಹನುಮಪ್ಪನ ಗುಡಿಗೆ ಹೋಗಿ ಹೂವಿನಂತ ಹುಡ್ಗೀರು ಸಿಗ್ತಾರೆ ಏನಂತಿರಾ.....?
office bitbittu pujari aagbidi........... yak ri nimma office nalli hudgirge barana......
wip ist tatta?????
@ ಪಲ್ಲವಿ,
.ನಾವು ಈ ವಿಶಯದಲ್ಲಿ ಯದ್ವಾ ತದ್ವಾ ಸಿನ್ಸಿಯರ್ ಕಣ್ರಿ . ಎನೇ ಆದ್ರು ಹುಡುಗ್ರ ಸೈಕಾಲೊಜಿ ತುಂಬ ಚೆನ್ನಾಗಿ ತಿಳ್ಕೊಂಡಿದಿರ ಬಿಡಿ.
@ ಶ್ರೇಯಾ,
ಸ್ವಕಾರ್ಯ, ಸ್ವಾಮಿಕಾರ್ಯ ಎರಡೂ ಆಗುತ್ತಲ್ಲ ಅದ್ಕೆ..:-)
@ ಹಿತೈಷಿಗಳೆ,
ಎನೂ ಮಾಡೊದು ಪಾಪಿ ಸಮುದ್ರಕ್ಕೆ ಹೋದ್ರು ಮೊಳಕಾಲವರೆಗೆ ನೀರು ಅಂದಂಗೆ ನಾವು ಇಲ್ಲಿ ಬಂದ್ರು ಹಳೆಕತೆನೆ ಮುಂದುವರಿತಾ ಇದೆ, ನಮ್ಮ ಮೇಲೆ ದೇವರಿಗೆ ಯಾವಾಗ ಕನಿಕರ ಬರುತ್ತೋ ಗೊತ್ತಿಲ್ಲಾ :-(
@ ಅಭಿ& shrat,anonymous.
ಹಂ ಎನು ಮಾಡೊದು ಹೇಳಿ ಎಲ್ಲಾ ನಾವು ಪಡ್ಕೊಂಡು ಬಂದಿದ್ದು.ನನ್ನ ಬ್ಲಾಗಿಗೆ ಸ್ವಾಗತ, ಆಗಾಗ ಇಣುಕುತ್ತಿರಿ..
ಸಿಕ್ಕಿದ್ಲಾ ರಾಯರ ಮಠದ ಹುಡುಗಿ ಮತ್ತೆ ? ;)
ಚೆನ್ನಾಗಿದೆ ಬರಹ.
guru.... full hi baradi....
ಮನಸ್ವಿನಿಯವರೆ,
ಪ್ರತಿಕ್ರಿಯೆಗೆ ದನ್ಯವಾದಗಳು..ಇಷ್ಟು ಬೇಗ ಸಿಕ್ರೆ ಕಾಯುವಿಕೆಗಿನ ಮಜಾನೆ ಹೋಗಿಬಿಡುತ್ತೆ.ಸಿಗ್ತಾಳೆ ಬಿಡಿ, ಅದೆಲ್ಲಿ ಹೊಗ್ತಾಳೆ?
ಗೆಳೆಯ ರಾಜಶೇಖರ್ ,
Mr.Microsoft ಅಲಿಯಾಸ್ ಐನಸ್ಟೀನ್ ಗೆ ನನ್ನ ಬ್ಲಾಗಿಗೆ ಸ್ವಾಗತ :-)
ಏನೊಪ್ಪ.... ಈ ಹುಡುಗ್ರೆ ಅರ್ಥ ಆಗೋಲ್ಲ ದೇವಸ್ಥಾನಕ್ ಬಂದ್ರೂ ತಮ್ಮ ಕಪಿ ಬುದ್ಧಿ ಬಿಡೋಲ್ವಲ್ಲ....
ಯಾಕೆ ಸಫೆ ಜಾಗ ಅಂತಿರ್ಬೇಕು ಹೊರಗಾದ್ರೆ ಚಪ್ಪಲಿಸೇವೆ ಆಗುತ್ತಲ್ಲ....
..............ಮಲ್ನಾಡ್ ಹುಡ್ಗಿ
ಮಲ್ನಾಡ ಹುಡುಗಿ,
ತಮ್ಮ ಪ್ರತಿಕ್ರಿಯೆಗೆ ತುಂಬು ಮನದ ಸ್ವಾಗತ. ಈ ಬರಹದಲ್ಲಿ ತಾವು ಆಕ್ಷೇಪಿಸುವಂತಹ ಯಾವ ವಿಚಾರಗಳಿದ್ದವೋ ಗೊತ್ತಿಲ್ಲ, ತಮಗೆ ಹೊಸ ಹೊಳಪನ್ನು ತೋರಿದ ಆ ಸಾಲುಗಳನ್ನು ಅಥವಾ ಆ ವಿಚಾರಗಳನ್ನು "Quote" ಮಾಡಿದ್ದರೆ ನಮ್ಮಂತಹ ಕಪಿಮುಂಡೇವಕ್ಕೆ ತಿದ್ದಿಕೊಳ್ಳಲು ಮಹಾದುಪಕಾರವಾಗುತ್ತಿತ್ತು.ಅಷ್ಟಕ್ಕೂ "ಚಪ್ಪಲಿ ಸೇವೆ" ಇತ್ಯಾದಿ ಪೂಜ್ಯನೀಯ ಪದಗಳನ್ನು ಪ್ರಯೋಗಿಸಿದ್ದಕ್ಕೆ ತುಂಬಾ ಥ್ಯಾಂಕ್ಸ.ಆಗಾಗ ಬಂದು ಹೊಸ ಹೊಸ ಪದಗಳನ್ನೂ,ಆಲೋಚನ ಭಾವಗಳನ್ನು ನೆನಪಿಸಿಕೊಟ್ಟು ಹೋಗುತ್ತಿರಿ.
"ಕಾಮಾಲೆ ಕಣ್ಣೊರಿಗೆ ಕಾಣೋದೆಲ್ಲಾ ಹಳದಿಯಂತೆ" ಎನೂ ಮಾಡೋಕಾಗುತ್ತೆ!..
Namaskara Annorge, mast bardi le magna, Keep it up.
rajaraddi ಯವರೆ
ನನ್ನ ಬ್ಲಾಗಿಗೆ ಸುಸ್ವಾಗತ.ಮೊದಲ ಬೇಟಿಯಲ್ಲಿಯೇ "ಮಗನ" ಅನ್ನುವ ಆತ್ಮಿಯತೆ ತೋರಿದ್ದಕ್ಕೆ ಥ್ಯಾಂಕ್ಸ.. ಮತ್ತ ಹೋಕ್ಕೊತ ಬರ್ಕೊತ ಇರ್ರಿ.. :-)
ಪಾಟೀಲಾ, ಒಂದಂತೂ ನಿಂಗ ಹೇಳ್‌ಬೇಕಂದ್ರ ನೀನು ನಮ್ಮ ಸೂ..... ಮಗನ (ಉತ್ತರ ಕರ್ನಾಟಕ) ಭಾಷೆನ್ಣ ಛೋಲೋ ದುಡಿಸಿಕೊಳ್ತಿ.
ನಿಂಗ ಅದರ ಮ್ಯಾಲೆ ಇರೋ ಹಿಡಿತ ಭಾಳ ಇಷ್ಟಾ ಆಗ್‌ತೈಟಿ.
ಮತ್ತ ಹುಡುಗಿಯರ ವಿಷಯಕ್ಕ ಬಂದ್ರ, ನಿನ್ನಲ್ಲಿರೋ ವಿಶಾಲ ಮನೋಭಾವ ಮತ್ತು ಎಲ್ಲಾ ಹುಡುಗರಲ್ಲಿ ಇರೋ ಸೂಪ್ತ ಭಾವನೆಗಳನ್ನ ಮುಚ್ಚು ಮರಿ ಇಲ್ಡ ಹೇಳಿ, Thanks
ಟೋಟಲ್ ಆಗಿ ಹೇಳ್‌ಬೇಕ0ದ್ರ ನಮ್ಮೇಲ್ಳ್ರಾರ ಮನದ ಕೈಗನ್ನಡಿ.
ಉತ್ತಮ ಪ್ರಯತ್ನ, please carry it on.
ಸಂಗಮೇಶ
ನೀ ಹೆಂಗ ಅಂತಿ ಹಂಗ ಮಾಡುನೂ .ತಾವೂ ಗುಡಿ ಮಠ ಅಂತ ಭಾಳ ಸುತ್ತಾಡ್ತಿರ ಅಂತ ಗೊತ್ತಾತು ಬಿಡು. ಆದ್ರು ಸ್ವಲ್ಪ ಜ್ವಾಕಿ ಮಾರಾಯ! ಬೆಂಗಳೂರೂ ಹುಡುಗ್ಯಾರು ಭಾರಿ ಬೆರೆಕಿ ಇರ್ತಾರು.ಮತ್ತ ಒಂದು ಹೋಗಿ ಒಂಬತ್ತು ಆಗಬಾರದು ನೋಡು ಅದಕ್ಕ ಹೇಳ್ತಿನಿ.
Post a Comment