Wednesday, May 23, 2007

ಲವ್ ಪ್ರವರ



ನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ "ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.
ಪೀಠಿಕೇಯಾಗಿ" ನಿಮ್ಮ 'True love' ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ ಹೊತ್ತಿನಲ್ಲಿ 'Love' ವಿಷಯ ಆರಂಭಿಸಿದನೋ ನನ್ನ ಹಿಂದಿನ ಭೀಕರ ಅನುಭವಗಳಿಂದ ಇವತ್ತು ರಾತ್ರಿ ಜಾಗರಣೆ ಅಂತ ಖಾತ್ರಿಯಾಯ್ತು.ಪ್ರತ್ಯುತ್ತರವಾಗಿ ನಾನು "Work out ಆಗ್ಲಿಲ್ಲಾ "ಎಂದು ಚುಟುಕಾಗಿ ಹೇಳಿ ಇನ್ನು ನನ್ನ ಮಲಗಲು ಬಿಡು ಅಂತ ಸೂಕ್ಷ್ಮವಾಗಿ ಅರುಹಿದೆ.ಊಹುಂ! ಕೈಗೆ ಸಿಕ್ಕಿದ ಬಲಿಯನ್ನು ಹಂಗೆ ಬಿಟ್ಟಾನಯೇ ಧೀರ
,ಅದುವರೆಗೂ Love ಬಗ್ಗೆ ಮಾಡಿದ ತನ್ನೆಲ್ಲಾ ಕರಾಳ ಸಂಶೋಧನೆಗಳನ್ನು ಒಂದೋದಾಗಿ ಹೋರಗೆಡವತೋಡಗಿದ.ಆ ಬ್ರಹ್ಮಾಂಡ ಸಿದ್ದಾಂತಗಳನ್ನು ಸೋದಾಹರಣವಾಗಿ ವಿವರಿಸಿ, ಮದ್ಯೆ ತಿವಿದು ನನ್ನ ಎಚ್ಹರಿಸಿ ಇದುವರೆಗಿನ ತನ್ನೆಲ್ಲಾ ಹಳೆಯ ಸೇಡುಗಳನ್ನು ತೀರೀಸಿಕೊಂಡಾ.ಮಹಾಭಾರತದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ, ನನಗೆ "ಲವ್ವೋಪದೇಶ" ಮಾಡಿದ.
" ನೋಡ್ರಿ ಸಂತೋಷರಾ. ನಿಮ್ದು ಸಾಮಾನ್ಯ ಲವ್ ಅಲ್ಲಾ , ಅದು ’ಟ್ರೂ ಲವ್’,ಹಂಗೆಲ್ಲಾ ಮದ್ಯಕ್ಕೆ ನಿಲ್ಲಿಸಬಾರದು, ಪ್ರಯತ್ನ ಪಡೂತ್ತಾ ಇರಬೇಕು" ಅಂದ ಲವ್ ಗುರು.ಅದ್ಕೆ ನಾನು "ಅಲ್ವೋ! ಲವ್ ನಲ್ಲೂ ಆರ್ಡಿನರಿ ಲವ್ ಮತ್ತು ಟ್ರೂ ಲವ ಇರ್ತಾವೇನೋ? ಹ್ಹ ಹ್ಹ ಹ.." ಎಂದು ನನ್ನ ಪಾಂಡಿತ್ಯ ತೋರಲೆತ್ನಿಸಿದೆ.
’ಹುಲುಮಾನವ’ ಎಂಬಂತೆ ನನ್ನೆಡೆಗೆ ನೋಡಿ ಟ್ರೂ ಲವ್ , ಆರ್ಡಿನರಿ ಲವ್ ,ಮತ್ತು ಪ್ಯೂರ ಲವ್ ಬಗ್ಗೆ ತನ್ನ ಪುರಾಣವನ್ನು ಆರಂಭಿಸಿ, ಹುಡುಗಿಯರಲ್ಲೂ ಸಹ ಪ್ರಕಾರಗಳುಂಟು ಅಂತಾ ಸಾರಿ ನನ್ನ ತಬ್ಬಿಬ್ಬು ಮಾಡಿದ.ಅವನ ಬಾಯಿಂದ ಹೊರಬಂದ ಅನುಭವದ ಮಾಣಿಕ್ಯಗಳಿವು ನೋಡಿ.
"ಅಲ್ರಿ ಟ್ರೂ ಲವ್ ಅಂದ್ರೆ ಡೀಪ್ ಆಗಿ ,ಸಿನ್ಸಿಯರ್ ಆಗಿ ಲವ್ ಮಾಡೊದು, ಆರ್ಡಿನರಿ ಲವ್ ಅಂದ್ರ ಸುಮ್ನ ಲೈನ್ ಹೊಡೆಯೋದು,ಪ್ಯೂರ್ ಲವ್ ಅಂದ್ರೆ
ಪೂರ್ತಿ ಪ್ಯೂರ್, ಇವನಿಲ್ಲಿ,ಅವಳಲ್ಲಿ. ಆದರೂ ಫುಲ್ ಲವ್.ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಸ್ಟೈಲು.ನೋಡ್ರಿ ಹುಡುಗಿಯರಲ್ಲೂ ವೆರೈಟಿ ಇರ್ತಾವು, ಮೊದಲನೆಯದಾಗಿ ನಿಜವಾಗ್ಲೂ ಚಂದ ಇರ್ತಾರ ಮತ್ತು ಫುಲ್ ಡೀಸೇಂಟ್ ಇರ್ತಾರ, ಹಿಂತವರು ಟ್ರೂ ಲವ್ ಮಾಡೊಕೆ ಯೋಗ್ಯ. ಇವರು ಲೈನು ಕೊಡೋದಿರಲಿ, ತಿರುಗಿ ಸಹ ನೋಡಲ್ಲ.ಆದ್ರೂ ಪ್ರಯತ್ನ ಬಿಡಬಾರದು.ಮೊದಲನೆ ಸಲ ಪ್ರಪೋಸ್ ಮಾಡಿದ್ರೆ ಖಂಡಿತ ’ನೋ’ ಅಂತಾರೆ,ಕೆಲವು ಸಲ ನಸೀಬು ಗಾಂಡು ಇದ್ರ ಮಂಗಳಾರುತಿನೂ ತೆಗಿತಾರ, ಅದಕ್ಕೆಲ್ಲಾ ನೀವು ತಲಿ ಕೆಡಿಸ್ಕೊಬಾರದು, ಅಲ್ಲದೆ " ನನ್ನ ಎನಂತ ಅನ್ಕೊಂಡೀರಿ? ನಾನು ಅಂತಾ ಹುಡುಗಿ ಅಲ್ಲಾ" ಅಂತೆಲ್ಲಾ ಡೈಲಾಗ್ ಹೊಡಿತಾರೆ, ಅದಕ್ಕೆಲ್ಲಾ ನಾವು ಕ್ಯಾರೆ ಅನ್ನಬಾರದು ಮತ್ತು ಪ್ರಯತ್ನ ನಿಲ್ಲಿಸಬಾರದು.ಯಾರೇನೆ ಅಂದ್ರು ಕೇರ್ ಮಾಡದೆ ಇರೊದು ಭಾಳ ಮುಖ್ಯ.’ಹುಚ್ಚ’ ಪಿಚ್ಚರ್ ನೋಡಿರಲ್ರಿ ಅ ಟೈಪು ಅಂದ ನಮ್ ಲವ್ ಗುರು.ಮತ್ತೆ ಮುಂದುವರೆಸಿ ಹೇಳಿದ " ಎರಡನೆ ವೆರೈಟಿ ಹುಡುಗಿಯರು ದೇವರಾಣೆಗೂ ಚಂದ ಇರೋದಿಲ್ಲಾ,ಅದ್ರೆ ನಾವು ಅವರನ್ನು ಚಂದ ಅದೀರಿ ಅಂತ ನಂಬಿಸಬೇಕು. ಇಂತವರು ಲೈನ್ ಹೊಡಿಯೋಕೆ ಪರಫೆಕ್ಟ ನೋಡ್ರಿ.ಇವರನ್ನು ಬೀಳಿಸೊಕೆ ಸ್ವಲ್ಪ ಟೈಮು ಮತ್ತು ಇನವೆಸ್ಟಮೆಂಟ್ ಬೇಕು. ಭಾಳ ಏನು ಬ್ಯಾಡ್ರಿ, ಸುಮ್ನ ಅವರ ಹಿಂದ ಬೀಳಬೆಕು, ನೋಡಿ ಸ್ಮೈಲ್ ಕೊಡಬೇಕು, ಸುಮ್ ಸುಮ್ನ ಮತಾಡಿಸಬೇಕು,ನಿಮ್ಮ ಡ್ರೆಸ್ಸು ಸುಪರ್ ಅಂತ ಪುಸಲಾಯಿಸಬೇಕು ಇತ್ಯಾದಿ ಇತ್ಯಾದಿ.ಹಾಂ! ಆಮೇಲೆ ಸ್ವಲ್ಪ ಹುಡುಗಿ ದಾರಿಗೆ ಬಂದಿದಾಳೆ ಅಂದಮೇಲೆ ಮೊದಲು ಕಾಫಿಗೆ, ನಂತರ ಪಿಚ್ಚರಿಗೆ,ಲಾಲಭಾಗಿಗೆ ಕರಿಬೇಕು .ಒಂದು ವೇಳೆ ನೀವು ಲವ್ವು ಗಿವ್ವು ಅಂತೇನಾದ್ರು ಪ್ರಪೋಸ್ ಮಾಡಿದ್ರೆ ನಿಮ್ಮ್ ಖೇಲ್ ಖತಂ.ಅದೊಂತರ ಮುಚ್ಯುವಲ್ ಅಂಡರ್ ಸ್ಟಾಂಡಿಂಗ್.ಈ ವೆರೈಟಿ ಹುಡುಗಿಯರು ಭಾರಿ ಚಾಲೂ ಇರ್ತಾರ, ನೀವು ನೋಡಿ ಖರ್ಚು ಮಾಡಬೇಕು ಮತ್ತು ಎಷ್ಟು ಸಾದ್ಯನೊ ಅಷ್ಟು "ದುಡುಕೊಂಡು"ಬಿಡಬೇಕು.ಇದಕ್ಕ ಹಂಗ ಸುಮ್ನ ಲವ್ (?) ಅಂತರ ಕರೀರಿ ಅಥವಾ ಡವ್ ಅಂತರ ಕರೀರಿ. ಕೊನೆಯ ವೆರೈಟಿ ಬಗ್ಗೆ ಹೇಳುದಾ ಬ್ಯಾಡ, ಯಾಕಂದ್ರ " ನೋ ಯುಸ್", ಬರೀ ಸ್ಚ್ರಾಪ್ ಫಿಗರ್ ಗಳು, ನಿಮಗ ಅಷ್ಟ ’ಬರಗಾಲ’ ಅಂದ್ರ ಇವನ್ನೂ ಟ್ರೈ ಮಾಡಿ ನಿಮ್ಮ ಕರ್ಮ" ಅಂತೆಲ್ಲಾ ರಾತ್ರಿ ಮೂರರವರೆಗೂ ಸಾದ್ಯಂತ ಶೊಷಿಸಿ " ಇನ್ನು ಹೊತ್ತಾತು ಮಲಗ್ರಿ, ನಾಳೆ ಮುಂದ ಹೇಳ್ತಿನಿ", ಅಂತೆಳಿ ’ನಿನಗಿದೆ ಗ್ರಹಚಾರ ನಾಳೆ” ಎಂಬಂತೆ ನೋಡಿ, ಎದ್ದು ಉಚ್ಚೆ ಹೋಯ್ದು ಮಲಗೇ ಬಿಟ್ಟ.
ನಾಳೆ ಎನು ಕಾದಿದೆಯೊ ಅಂತ ಹಾಸಿಗೆಯಲ್ಲಿ ಉರುಳಾಡಿದ್ದೆ ಬಂತು ನಿದ್ದೆಯಂತೂ ದೇವರಾಣೆಗೂ ಬರಲಿಲ್ಲಾ..

14 comments:

ಮೃಗನಯನೀ said...

nakku nakku saakaytu...yenri kharma kanda..hudugru hegella yochistre anta gottaytu ..dhanyavaadagalu

ಸಂತೋಷಕುಮಾರ said...

ಧನ್ಯವಾದಗಳು.. ನಿಮ್ಮ ಖುಶಿನೇ ನಮ್ ಖುಶಿ..

Anonymous said...

nimma frnd manoje ge experience chennage irbeku love madi illa andre hudugiyara bagge istondu tike madtirlilla.

Shreya...

Anonymous said...

patilre nim frnd helida prakara 3 ritiya love irothe andru adralli hudugiyaru kuda 3 ritiyavare I mean (3 members)

adre e 3 riti nu love bagge heluvavaru jothege e 3 riti love experience iroru obbare agidaralri
istralle artha agilve nimge

E HUDUGARE ISTE
Sigolla love madolla anda kudle hudugi mele apavada horisibidtare

ವಿ.ರಾ.ಹೆ. said...

ಹ್ಹ ಹ್ಹ , ಪಾಟೀಲ್ರೆ ಚಂದ್ ಬರದ್ದೀರಿ.

ನಮ್ ಹುಡುಗರ್ ಲೋಕದ ಸೀಕ್ರೆಟ್ಸ್ ನೆಲ್ಲಾ ಲೀಕ್ ಮಾಡಾಕತ್ತೀರಲ್ರೀಈಈಈಈ !

Anonymous said...

anyway thanks patilre

nim hudugara secrete bittu kotidakke

ಸಂತೋಷಕುಮಾರ said...

ಶ್ರೇಯಾ ಮತ್ತು ಪಲ್ಲವಿ ನಿಮ್ಮ ಆಕ್ಷೇಪಣೆಗಳನ್ನು ಮನೋಜ್ ಪರೀಶಿಲಿಸುತ್ತಾ ಇದ್ದಾನೆ,He will get back to you soon :-). ಪಲ್ಲವಿಯವರೇ ಇಷ್ಟು ಬೇಗ " ಹುಡುಗ್ರೆ ಇಷ್ಟು" ಅಂತ ನಿರ್ಧಾರಕ್ಕೆ ಬಂದು ಬಿಡಬೇಡಿ.
ವಿಕಾಸ್ ನಿಮ್ಮ ಮೆಚ್ಚುಗೆಗೆ ಅಭಾರಿ.ಸಾಧ್ಯವಾದಷ್ಟು ನಮ್ಮ ಹುಡುಗ್ರ ಲೋಕದ ಗುಟ್ಟುಗಳನ್ನು ಕಾಯ್ದುಕೊಳ್ತಿನಿ.. :-)

Shiv said...

ಸಂತೋಷ್,

ಎನ್ರೀ ಇದು ಹೀಗೆ ಕೊಯ್ಯಿತ್ತಾನೆಯೇ ನಿಮ್ಮ ರೂಮ್‍ಮೇಟ್ :)
ಅದರೂ ಸಕತ್ ಲವ್ ಜ್ಞಾನಹೊಂದಿರೋ ತರ ಕಾಣಿಸ್ತಾನೆ !

ಯಾಕೋ ಒಂದು ಸಣ್ಣ ಅನುಮಾನ..ತಮ್ಮ ಅನುಭವಗಳೆಲ್ಲವನ್ನೂ ಮನೋಜ್ ಹೇಳಿದ್ದು ಅಂತಾ ಎನಾದರೂ....

:))

ಸಂತೋಷಕುಮಾರ said...

ಇಲ್ಲಿ ಯಾರು ಹೇಳಿದ್ರು ಅನ್ನೊದು ಅಪ್ರಸ್ತುತ.ನಮ್ಮ ವಿಚಾರಗಳನ್ನು ಒಂದು ಪಾತ್ರದ ಮೂಲಕ ಹೇಳುವದು ಹೊಸದೆನು ಅಲ್ಲಾ, ಅಲ್ವಾ?

ashwini said...
This comment has been removed by the author.
ashwini said...

Patilre hudgurge lifenalli enjoy madokke, mazza madokke, time pass madokke ordinary love beku swalpa next stagege hogona antha pure love beku kadeka settle agona antha true love beku.... paapa kanri hudgiru nimma sevene madowagha, neemag hengbekko hang iirowagha, neevu iitaraha helodhu tapalwa???? hudugiru nimprakara 1 among 3 category serthare hagidre hudugoru all 3 category serthara????

ಸಂತೋಷಕುಮಾರ said...

ತೀರಾ ಪರ್ಸನಲ್ ಆಗಿ ತಗೋಬೇಡಿ ಪ್ಲೀಸ್!!!!
ಅಷ್ಟಕ್ಕು 'We will get, for what we deserve for'.. ಹುಡುಗ್ರೆ ಆಗಿರಲಿ, ಹುಡುಗಿಯರೆ ಆಗಿರಲಿ ನಮ್ ಯೋಗ್ಯತೆಗೆ ತಕ್ಕವರನ್ನೆ ಪಡಿತೀವಿ.ನಾನೆನೂ ಎಲ್ಲಾ ಹುಡುಗಿಯರು "ಆ ಥರ" :-) ಅಂತೆನು ಹೇಳಿಲ್ಲಾ,ಹುಡುಗ್ರಲ್ಲು ಒಳ್ಳೆಯವರು ಕೆಟ್ಟವರು ಇದ್ದ ಹಾಗೆ, ಹುಡುಗಿಯರಲ್ಲೂ ಇರ್ತಾರೆ ಅಂತ ಹೇಳಿದೆ ಅಷ್ಟೆ!

ashwini said...

Personal enu illa patilre adhu neeja anni we get wot we deserve

ashwini said...

chennagidhe kanri indepth analysis :-)