Tuesday, May 27, 2008

ಲಂಕೇಶ್, ಮೂರ್ತಿಗಳು ಮತ್ತು ನನ್ನ ಹೊಸ ತೆವಲುಗಳು.

ಲಂಕೇಶ್, ಅನಂತಮೂರ್ತಿಗಳನ್ನು ಓದಿ ನಾನು ತೀರಾ ಈ ಮಟ್ಟಿಗೆ ಹಡಬೆದ್ದು ಹೋಗುತ್ತೇನೆ ಅಂತಾ ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲಾ.ಅವರ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಬರುವ ಯಾವುದಾದರೂ ಸ್ತ್ರೀ, ಪುರುಷ ಪಾತ್ರಗಳು ಅತಿ ಉದಾತ್ತ ಅನಿಸತೊದಗಿದರೆ; ಮನಸ್ಸು ಆಗ್ಲೆ ಕಥೆಯ ಮುಂದಿನ ತಿರುವುಗಳನ್ನು ಊಹಿಸತೊಡಗಿ, ಆ ಪಾತ್ರಗಳು ಯಾರ ಜೊತೆಯಲ್ಲಿ,ಯಾವ ಹೊತ್ತಿನಲ್ಲಿ "ಅದನ್ನು" ಮಾಡುತ್ತವೋ ಅಂತಾ ಲೆಕ್ಕ ಹಾಕುತ್ತಲೇ ಪುಟ ತಿರುವುತ್ತೇನೆ. ಅಚಾನಕ್ ಆಗಿ ಹಾಗೆನಾದರೂ ನಡೆಯದಿದ್ದರೆ " ಥೂ ಬೋ...ಮಕ್ಳು ಮೋಸ ಮಾಡಿದ್ರು" ಅನ್ನೊ ನಿರಾಶಾ ಭಾವದಲ್ಲಿ ಕಥೆಗಾರನನ್ನು ಬೈಯುತ್ತ ಪುಟ ತಿರುವಿತ್ತೇನೆ. ನಮ್ಮ ನಸೀಬು ನೆಟ್ಟಗಿದ್ದು "ಆ ಥರ"ದ ಘಟನೆಗಳು ನಡೆದರೆ ಆ ಭಾಗವನ್ನು ಇನ್ನೊಮ್ಮೆ ಎನಾದರೂ ಸಿಕ್ಕಿತು ಎಂಬಂತೆ ಓದಿ ಧನ್ಯನಾಗುತ್ತೇನೆ. ಅದ್ಯಾಕೋ ಗೊತ್ತಿಲ್ಲ್ಲ ಮೂರ್ತಿಗಳಿಗೆ ಉದಾತ್ತ ಪಾತ್ರಗಳಿಂದ "ಅದನ್ನು" ಮಾಡಿಸಿ ಆ ಉದಾತ್ತ ಪಾತ್ರಗಳ ವ್ಯಕ್ತಿತ್ವವನ್ನು ಭೂಮಿಗಿಳಿಸುವದರಲ್ಲಿ ಎನೋ ಖುಶಿ.

ಇದು ಸಾಯ್ಲಿ, ಇನ್ನೂ ಹುಡುಗ, ವಯಸ್ಸು ಅಂತಾ ಎನೋನೋ ಸಮಾಧಾನ ಮಾಡ್ಕೊಬಹುದು. ಆದ್ರೆ ಮೂರ್ತಿಗಳ "ಭಾರತೀಪುರ" ಓದಿದ್ದೆ ಓದಿದ್ದು ಮನಸ್ಸು ’ದೇವರು’ ಎಂಬ ಅಮೂರ್ತ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದೆ. ಅತ್ಲಾಗೆ ದೇವರನ್ನು ದಿಕ್ಕರಿಸುವ ಆತ್ಮ ಸ್ಥೈರ್ಯವೂ ಇಲ್ಲದೆ, ದೇವರಲ್ಲಿ ಪೂರ್ಣ ಶ್ರದ್ದೆಯಿಡಲೂ ಆಗದೇ ಎಡಬಿಡಂಗಿ ಆಗ್ತಾ ಇದ್ದೀನಿ ಅನ್ನೊ ಭಯ. ಸಂಕಷ್ಟಿಯ ದಿನ ಗೊತ್ತಗದೇ ಆಮ್ಲೇಟ್ ತಿಂದಿದ್ದಕ್ಕೆ ನನ್ನ ಲ್ಯಾಬ ಎಕ್ಸಾಮ್ ಫೇಲ್ ಆಯ್ತು ಅಂತ ನಂಬುವ ನಂಗೆ "ದೇವರು" ಅನ್ನುವ ಮ್ಯಾಜಿಕನ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಇವೆಲ್ಲದುರ ಮದ್ಯೆ ಪೂಜೆಗೂ, ಸ್ನಾನಕ್ಕೂ ಹತ್ತಿರದ ಲಿಂಕಿರುವದರಿಂದ ಎರಡನ್ನೂ ತ್ಯಜಿಸಿ ನಾಸ್ತಿಕನಾದ ಫಿನಿಕ್ಸು ನಂದೆಲ್ಲಿಡಲಿ ಅನ್ನುವಂತೆ " ನಿಂದು ಭಕ್ತಿ ಅಲ್ಲವೇ ಅಲ್ಲ. ನಿಂದು ಅಸ್ತಿತ್ವದ ಭಯ, ಭಯವೇ ಧರ್ಮದ ಮೂಲ" ಅಂತೆಲ್ಲಾ ಕಂಡೋರ ಡೈಲಾಗು ಕದ್ದು ಹೇಳಿ ನನ್ನನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿದ್ದಾನೆ.

"ರೂಡಿಯೇ ನಂಬಿಕೆಗೆ ಮೂಲ, ಆ ನಂಬಿಕೆಯ ಬೇರನ್ನು ಕತ್ತರಿಸಿದರೆ ದೇವರು ಇಲ್ಲಾ, ಧರ್ಮವೂ ಇಲ್ಲ್ಲ" ಇತ್ಯಾದಿ ಇತ್ಯಾದಿ ಸಾಲುಗಳು ನನ್ನ ರೂಡಿಗಳನ್ನು, ನಂಬಿಕೆಗಳನ್ನು ಪ್ರಶ್ನಿಸಿಕೊಳ್ಲುವಂತೆ ಮಾಡಿ " ಅರೇ ಹೌದಲ್ಲವೇ!" ಎಂಬ ಖುಶಿಯೋಂದಿಗೆ " ಛೇ ಛೇ ದೇವರ ವಿಷ್ಯದಲ್ಲಿ ಹಾಗೆಲ್ಲಾ ಯೋಚಿಸಬಹುದಾ?" ಎಂಬ ಪಾಪ ಪ್ರಜ್ಣೆಯ ಜೊತೆಗೆ, ಈ ರೀತಿ ಎಲ್ಲಾ ಯೋಚಿಸಿದ್ದಕ್ಕೆ ಮತ್ತೆ ದೇವರಿಗೆ ಸಿಟ್ಟು ಬಂದು ಅಪ್ರೈಸಲ್ ಟೈಮಲ್ಲಿ ಕಿರಿಕ್ಕು ಮಾಡಿದರೆ ಹೇಗೆ? ಅನ್ನುವ ಭಯವೂ ಸೇರಿ ನನ್ನ ಮಾನಸಿಕ ನೆಮ್ಮದಿಯನ್ನೆ ಕಳೆದುಕೊಂಡಿದ್ದೇನೆ.

ಮೇಲಿನ ಎಲ್ಲಾ ಸಕಾರಣಗಳಿಗಾಗಿ ನಾನು ಸದ್ಯಕ್ಕೆ ಮೂರ್ತಿಗಳ ಮತ್ತು ಲಂಕೇಶರ ಸಹವಾಸವೇ ಸಾಕು ಎನ್ನಿಸಿ "ಪ್ರಗತಿ ಪರ" ಸಾಹಿತ್ಯ ಕೃಷಿಗೆ ತಾತ್ಕಾಲಿಕ ವಿರಾಮ ನೀಡಿದ್ದೇನೆ. ಮತ್ತೆ ನನ್ನ ಪಾರಂಪರಿಕ ಶ್ರದ್ದೆಯನ್ನು ಮರುಸ್ಥಾಪಿಸಲು ಮತ್ತೆ ಭೈರಪ್ಪನವರ ಮೊರೆ ಹೊಕ್ಕಿದ್ದೇವೆ ಎಂದು ಹೇಳಲು ಭಾರಿ ಖುಷಿ ಮತ್ತು ನನ್ನ ಈ ತಿಕ್ಕಲುತನಕ್ಕೆ ನಾಚಿಕೆಯೂ ಆಗುತ್ತಿದೆ..

11 comments:

Anonymous said...

Registration- Seminar on the occasion of kannadasaahithya.com

8th year Celebration


Dear Santosh,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same

venue after the seminar.

For further details and registration click on below link.



href="http://saadhaara.com/events/index/english">http://saadhaar

a.com/events/index/english




href="http://saadhaara.com/events/index/kannada">http://saadha

ara.com/events/index/kannada




Please do come and forward the same to your like minded

friends

-kannadasaahithya.com balaga

Anonymous said...

Registration- Seminar on the occasion of kannadasaahithya.com

8th year Celebration


Dear Santosh,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same

venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded

friends

-kannadasaahithya.com balaga

ಸಿಂಧು sindhu said...

ಪಾಟೀಲ್ರೆ,

ಭಾಳ ದಿನಾ ಆಗಿತ್ರಿ ಇತ್ತಾ ಕಡೆ ಬಂದು. ನಿಮ್ ಬ್ಲಾಗಿಗೆ ವರ್ಷ ತುಂಬಿದ ಶುಭಾಶಯಗಳನ್ನು ತಡವಾಗಿ ಹೇಳ್ತಿದೀನಿ.

ಈ ಹೊಸ ಲೇಖನ ಚೆನ್ನಾಗಿ ಬಂದಿದೆ. ನಿಮ್ಮ ತೀಕ್ಷ್ಣ ವಿಡಂಬನೆ ಇಷ್ಟವಾಯಿತು. ಪ್ರಗತಿಪರರು ಪಾರಂಪರಿಕರಿಗಿಂತ ಸ್ವಲ್ಪ ಜಾಸ್ತೀನೇ ಪೂರ್ವಾಗ್ರಹಗಳು ಇಟ್ಕೊಂಡಿರುತ್ತಾರೆ ಅಂತ ನನ್ನ ಅನಿಸಿಕೆ. ಏನೇ ಇರಲಿ ನೀವು ನಂಬಕ್ಕಾಗದೆ ಇರುವ ದೇವರು ನಿಮ್ಮ ಭಯವನ್ನ ಹೋಗಲಾಡಿಸಿ ಇಬ್ಬಂದಿತನ ನೀಗಲಿ.

ನಿಮಗೆ ಸಾಹಿತ್ಯ ತುಂಬ ಇಷ್ಟವೆಂದಾದರೆ ಯಾಕೆ ಪುತಿನ, ಮಾಸ್ತಿ, ಗೊರೂರು ಇವರೆನ್ನೆಲ್ಲ ಓದಬಾರದು. ಇವರು ಕಟ್ಟಿಕೊಡುವ ಕತೆಗಳು ಸಹೃದಯತೆಯದು. ಯಾವ ನವ್ಯ ಮತ್ತು ಪರಂಪರೆಯ ಗೊಡವೆಯಿಲ್ಲದವು.

ಪ್ರೀತಿಯಿಂದ
ಸಿಂಧು

Kannada Sahithya said...

Dear Santhosh,

On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

ಸ್ವಗತ.... said...

ಲಬ್ ಲಬ್ ಹೊಯ್ಕೊಬೇಕಾಪಾ ಇನ್ನ ...ಅಲ್ಲ ಆ ಮೂರ್ತಿ ಬರದಿದ್ದ ನೀ ಯಾಕ್ ಒದಾಕ್ ಹೊದ್ಯೂ ಮಾರಾಯಾ....

ಕೆಳಿಲ್ಲೇ...ಸುಮ್ನ ಅರಾಮ್ ಆಗಿ ಮಾಗಜೀನ್ ಓದ್ಕೊಂತ ಕುಂದರ...ಇವೆಲ್ಲ ಸುಮ್ನ ತಲಿ ತಿನ್ನು ಬುಕ್ಸು. ಒಂದ್ ಒಂದ್ ಸಲೇ ನಂಗ ಎನ್ ಅನ್ನಿಸ್ತೆತಿ ಅಂದ್ರ, ಅವರಿಗೂ ಏನೂ ತಿಳದಿರುದಿಲ್ಲ...ಆದರೂ ಸುಮ್ನ ಎಲ್ಲ ಗೊತ್ತಿದ್ದಾರ್ ಗತೆ ಬರದಿರ್ತಾರ ಅನ್ನಿಸ್ತೆತಿ. ಅವನ್ನ ಓದಿ ನಾವು ತಲಿ ಕೆದಸ್ಕೊಳ್ಳುದು ಸುಮ್ನ... ಅಲ್ಲ ಸುಮ್ನಒಂದ್ ವಿಚರಪಾ...ಅಸ್ಟ...

ಮತ್ತ ನೀ ಎಲ್ಲೆರ ಸಿರಿಯಸ್ ಆಗಿ ಮತ್ತ. ವಟ್ಟ ಬರಿಯುದ್ ಮಾತ್ರ ಬಿದಬ್ಯಾದಪಾ.

Anonymous said...

ಭಯಬೇಡ. ಅಪ್ರೈಸಲ್ ಟೈಮಲ್ಲಿ ನೀವು ನಿಮ್ಮನ್ನ ಹೆಂಗೆ ಮಾರ್ಕೆಟ್ ಮಾಡ್ಕೊಳ್ತಿರೋ ಅದ್ರ ಮ್ಯಾಲಿದೆ. ಚೆನ್ನಾಗಿ ಬಾರ್ಗೇನ್ ಮಾಡ್ದೆ ಹೋದ್ರೆ ದೇವ್ರ ಮೇಲೇ ಗೂಬೆ ಕೂರ್ಸ್‌ಬೇಕು ಅಷ್ಟೆ.

ಸಂತೋಷಕುಮಾರ said...

ಸಿಂಧೂರವರೆ,
ಇನ್ನೂ ಪುತಿನ, ಗೊರೂರು ಇತ್ಯಾದಿಯವರ ಸಹವಾಸಕ್ಕೆ ಹೋಗಿಲ್ಲ. ಇನ್ನು ಮುಂದೆ ನೋಡಬೇಕು.ತುಂಬಾ ಅಳೆದು ಸುರಿದು ಪುಸ್ತಕ ಆರಿಸಿದರೂ ಒಮ್ಮೊಮ್ಮೆ ಎಡವಟ್ಟಾಗುತ್ತದೆ. ನನ್ನ ಉದ್ದೇಶ ಎಡಪಂಥಿಯಯರನ್ನು ವ್ಯಂಗವಾಗಿ ನೋಡುವುದಾಗಿರಲಿಲ್ಲ. ತಮ್ಮ ಪೂರ್ವಾಗ್ರಹಪೀಡಿತ ನಿಲುವುಗಳನ್ನು ಓದುಗರ ಮೇಲೆ ಹೆರುವುದಕ್ಕೆ ನನ್ನ ಆಕ್ಷೇಪವಿದೆ. ಇದೇ ಕಾರಣಕ್ಕೆ ನಂಗೆ ನನ್ನ ಭೈರಪ್ಪನವರ ಆವರಣವಾಗಲಿ, ತಬ್ಬಲಿ ನೀನಾದೆ ಮಗನೆ ಆಗಲಿ ಇಷ್ಟವಾಗಿಲ್ಲ. ಇನ್ನೂ ಶಿವರಾಮ ಕಾರಂತರ ಕಾದಂಬರಿಗಳ ನಿರೂಪಣೆ ಮತ್ತು ಅವುಗಳ ಓಘ ನಂಗೆ ಸರಿಬರುವುದಿಲ್ಲ. ಸಿಗುವ ಅಲ್ಪ ಸಮಯದಲ್ಲಿ ಬರೀ ಮನರಂಜನೆಗಾಗಿಯೋ ಅಥವಾ ಕಾಲ ಕಳೆಯಲು ಮನಸ್ಸು ಒಪ್ಪುವುದಿಲ್ಲ. ಎನಾದರೂ ನೀರಿಕ್ಷೆ ಇದ್ದೇ ಇರುತ್ತವೆ, ಬರೀ ಕುತುಹಲಕ್ಕಾಗಿ ಕಾದಂಬರಿಗಳಲ್ಲಿ ತಿರುವುಗಳನ್ನು, ಹೊಸ ಪಾತ್ರಗಳನ್ನು ಹುಟ್ಟಿಸುತ್ತಾ ಹೋಗುವ ಕಾದಂಬರಿಗಳು ರೇಜಿಗೆ ಮೂಡಿಸುತ್ತವೆ. ಇದೇ ಕಾರಣಕ್ಕೆ ಬೆಳಗೆರೆ ಮತ್ತು ಯಂಡಮೂರಿಯರು ಸಹ ಒಮ್ಮೊಮ್ಮೆ ಬೇಸರ ತರಿಸುತ್ತಾರೆ.ಚೂರಾದರೂ ಜೀವನಾನುಭವ ಅಥವಾ ಹೊಸತನವಿರದ ಬರಹಗಳನ್ನು ಓದಲು ಕಷ್ಟ ಅನಿಸುತ್ತೆ.ಯಾವುದಾದರೂ ಪುಸ್ತಕ ನೀವು ಸೂಚಿಸಿದರೇ ಒಂದು ಕೈ ನೋಡಿಯೇ ಬಿಡುವಾ.. ಪ್ರತಿಕ್ರಿಯೆಗೆ ಧನ್ಯವಾದಗಳು ಅಂತಾ ಪ್ರತ್ಯೇಕವಾಗಿ ಹೇಳಬೇಕಿಲ್ಲಾ ಅನ್ಕೋತೀನಿ.. :)ಆಗಾಗ ಬರುತ್ತೀರಿ.

ಸ್ವಗತ,

ಸಿರಿಯಸ್ ಆಗಬೇಕು ಅಂದರು ಆಗಲಾಗುವುದಿಲ್ಲ.ಆದ್ರೆ ನೀವು ಹೊಯ್ಕೊಂಡಿದ್ದು ಯಾಕೆ ಅಂತಾ ತಿಳಿಲಿಲ್ಲಾ.:)
ವೈಯಕ್ತಿಕವಾಗಿ ಮೂರ್ತಿಗಳ ನಿಲುವುಗಲಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಅವರೊಬ್ಬ ಒಳ್ಳೆಯ ಕಾದಂಬರಿಕಾರರು ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಅವರ ಭಾರತೀಪುರ, ಸಂಸ್ಕಾರ ಕಾದಂಬರಿಯಾಗಿ ತುಂಬಾ ಇಶ್ಟ, ಅದರೆ ಅದರಲ್ಲಿ ಅವರು ಪ್ರತಿಪಾದಿಸಲು ಹೊರಟ ನಿಲುವುಗಳಲ್ಲ.
ಸಾದ್ಯವಾಗಲೆಲ್ಲಾ ಬರೆಯುತ್ತಾ ಇರುತ್ತೇನೆ. ನೀವು ಸಹ ರೋಣ ತಾಲೂಕೆಂದು ತಿಳಿದು ಖುಶಿಯಾಯಿತು. ಒಮ್ಮೆ ಮದುವೆಗೆ ನಿಮ್ಮೂರ ಮೇಲೆ ಹಾದು ಹೋಗುವಾಗ ಎನೋ ಕಿರಿಕ್ಕು ಆಗಿ ನಮ್ಮೂರವರನ್ನೂ ಚೆನ್ನಾಗಿ ರುಬ್ಬಿ ಕಳಿಸಿದ್ದರು ಮುಶೀಗೇರಿಯವರು. ರೋಣ ತಾಲೂಕಿನಲ್ಲಿ ಪುಂಡಾಟಗಳಿಗೆ ಪ್ರಸಿದ್ದವಾದ ಅಬ್ಬೀಗೇರಿ ಮಹಜನತೆಗೆ ತಮ್ಮೂರ ಭಾಂದವರು ಯೋಗ್ಯ ಉಪಚಾರ ಮಾಡಿಯೇ ಕಳಿಸಿದ್ದರು. ಪುಣ್ಯಕ್ಕೆ ನಾನು ಆ ನಿಬ್ಬಣದ ಜೊತೆಗೆ ಹೋಗಿರಲಿಲ್ಲ. :)

ಶಾನಿಯವರೇ,

ಸಾಫ್ಟವೇರಿನವರಿಗೆ ಈಗ ದುರ್ದೇಶೆ, ಎನೂ ಬಡ್ಕೋಂಡ್ರು ಫಲ ಶೂನ್ಯ. ನೋಡಬೇಕು ನಮ್ಮ ಯೋಗ್ಯತೆಗೆ ಏನು ದಯಮಾಡಿಸುತ್ತಾರೋ ಎಂದು. ಆದರೂ ಮ್ಯಾನೆಜರಗಳ ಅಪ್ರೈಸಲ್ ಡಿಸ್ಕಶನ್ ಅಂತ ಜಗಳ ಕಾಯಲು ಭಲೇ ಖುಶಿಯಾಗುತ್ತೆ.

ಕನ್ನಡ ಸಾಹಿತ್ಯ ಮತ್ತು ಮೋಹನ್
ತಿಂಗಳಿಂದ ಚೆನ್ನೈಯಲ್ಲಿರುವದರಿಂದ ಬರಲಾಗಲಿಲ್ಲ. ಇನ್ನೊಮ್ಮೆ ಯಾವಗಲಾದರೂ ಖಂಡಿತ ಸಿಗುವ. ನಿಮ್ಮ ಆಹ್ವಾನಕ್ಕೆ ಅಭಾರಿ, ಭವಿಷ್ಯದಲ್ಲಿ ಯಾವ ಕೂಟಗಳಿಗೂ ಆಹ್ವಾನ ಬರುವುದಿಲ್ಲಾ( ಅಘೋಷಿತ ಬಹಿಷ್ಕಾರ) ಅನ್ಕೋಂಡಿದ್ದೆ. :). ಕಾರ್ಯಕ್ರಮದ ವರದಿಗಳಿಗೆ ಕೂತುಹಲದಿಂದ ಕಾಯುತ್ತಿರುತ್ತೇನೆ :).ಶುಭ ಹಾರೈಕೆಗಳು..

sunaath said...

ಸಂತೋಷಕುಮಾರ,
ಅನಂತಮೂರ್ತಿ,ಲಂಕೇಶ, ಭೈರಪ್ಪ ಇವರ್ಯಾರೂ ಪ್ರಯೋಜನ ಇಲ್ಲ.
ಎನ್. ನರಸಿಂಹಯ್ಯ ಬೆಸ್ಟ ನೋಡ್ರಿ.

MD said...

ಪಾಟೀಲ್ರ, ಯಾಕ ಇನ್ನೂ ಗಾಡಿ ಮುಂದ ಬಿಟ್ಟಿಲ್ಲಲ್ಲಾ.. ಬುಧ್ಧಿಜೀವಿಗಳಾಗಿಬಿಟ್ರೇನು ಮತ್ತsss. ತಲೀನ ಕಿಲೀನ್ ಮಾಡಿಸ್ರಿ. ಜಲ್ದಿ ಏನರ ಹೊಸಾದು ಹಾಕ್ರಿ

Anonymous said...

Sir,
hosa postings maadeilvalla
nimma barahagalige kaaytaidini

Sangamesh said...

ಪಾಟೀಲಾ, ನನಗ ಒಂದು ವಿಚಾರ ಭಾಳ ದಿನದಿಂದ ತಲಿ ತಿನ್ನಾಕತ್ತೈತಿ, ಕನ್ನಡದಲ್ಲಿ ಎಂತೆಂಥವರಗೋ ಜ್ಞಾನಪೀಠ ಬಂದಿರ್ಬೇಕಾದ್ರೆ ಇನ್ನೂ ಭೈರಪ್ಪನವರಿಗೆ ಯಾಕೆ ಬಂದಿಲ್ಲ ಅಂತ. ಅವ್ರಿಗೆ ಜ್ಞಾನಪೀಠ ಬಂದ್ರ ಅದು ಕನ್ನಡ ಸಾಹಿತ್ಯ ಲೋಕಕ್ಕೊಂದು ಹೆಮ್ಮೆ.