Monday, February 25, 2008

"ಬಿಗ್" ಎಫ್.ಎಮ್ಮು ಮತ್ತು ಅವರ "ಬಿಗ್(?)" ಐಡಿರಿಯಾಗಳೂ...

ಬೆಂಗಳೂರಿನ ನಂ.1 ಚಾನೆಲ್ ಎಂದು ಗಂಟೆಗೊಮ್ಮೆ ಅರಚಿಕೊಂಡು, ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಸ್ವಯಂಘೋಷಿತ ನಂ೧ಗಳಿಗೆ ಕೆಳಗೆ ಹೇಳಿದಂತಹ ಕ್ರಿಯೇಟಿವ್ ವಿಷಯಗಳು "ಎಲ್ಲಿ" ಹೊಳೆಯುತ್ತವೆಯೋ ನಂಗಂತೂ ಗೊತ್ತಿಲ್ಲಾ.

ಕಾರಣ ಇಷ್ಟೇ! ಲಾರಿ ಮುಷ್ಕರದ ದಯೆಯಿಂದ ಲೇಟಾಗಿ ಹೋಗುವ ಬಾಗ್ಯಕ್ಕೆ ಖುಷಿ ಪಟ್ಟು ಬೆಳಗ್ಗೆ ಬೆಳಗ್ಗೆ ಎಫ್.ಎಮ್ಮು ತಿರುವಿದರೆ ’ಬಿಗ್ ಕಾಫಿ’ಯ ಹರ್ಷ ಚರ್ಚೆಗೆ ಆರಿಸಿಕೊಂಡ ವಿಷಯ " ನೀವು ಯಾರ ಜೊತೆ ’ಮಿಲನ’ ಬಯಸ್ತೀರಾ?" ಅಂತಾ!. ಈ ಹರ್ಷ ಎಂಬ ಆರ್,ಜೆಗೆ ಬೆಳಗ್ಗೆ ಬೆಳಗ್ಗೆ ಕಾಫಿ ಹೊತ್ತಿನಲ್ಲಿ ಇಂತಹ ವಿಷಯ ಯಾಕೆ ಹೊಳೆಯಿತೋ ನಾಕಾಣೆ. ಇಂತಹ ಸ್ವಾರಸ್ಯಕರ(?) ವಿಷಯಕ್ಕೆ ನಮ್ಮ ಬಿಗ್ ಕೇಳುಗ ಮಹಾಶಯರಂತೂ ಜೊಲ್ಲೊರಿಸಿಕೊಳ್ಳುತ್ತಾ ಕೊಟ್ಟ ಉತ್ತರಗಳಂತೂ ಇನ್ನೂ "ಕ್ರಿಯೆಟಿವ್" ಆಗಿದ್ದುವು. ಒಬ್ಬ ಪುಣ್ಯಾತ್ಮ ತನ್ನ ತನ್ನ ಮಾಜಿ ಪ್ರೇಯಸಿಯೋಂದಿಗೆ ಮಿಲನ ಬೇಕಾದರೆ, ಇನ್ನೊಬ್ಬ ರಸಿಕ ತನ್ನ ’ಅತ್ತೆ’ಯೊಂದಿಗೆ ಮಿಲನ ಬಯಸ್ತೀನಿ ಅಂತ ಮೇಸೆಜು ಕುಟ್ಟಿದ್ದ, ಅದನ್ನು ಓದಿದ ನಮ್ಮ ಹರ್ಷನಿಗೆ ಭಲೇ ಖುಷಿ. ಒಬ್ಬ
ಆಧುನಿಕ ನಾರಿಮಣಿಗೆ ತನ್ನ "ಲವ್ವರ್" ಜೊತೆ ’ಅದು’ ಬೇಕಂತೆ.. ಇವರ ಭಂಡ ದೈರ್ಯಕ್ಕೆ ಕಂಡು ನಂಗೆ ತುಂಬಾ ಆಶ್ಚರ್ಯ ಆಯ್ತು.. ಇವು ಕೆಲ ಸ್ಯಾಂಪಲ್ಲುಗಳಷ್ಟೆ, ಇನ್ನೂ ಕೇಳಿದರೆ ಕಿವಿ ಹೊಲಸಾದೀತು ಅಂತಾ ’ಹೆಚ್ಚಾಗಿ ಕನ್ನಡ ಹಾಡುಗಳ’ ಚಾನೆಲ್ಲಿಗೆ ವಲಸೆ ಹೋಗಬೇಕಾಯ್ತು..

ಮತ್ತೆ ಅದೆ ದಿನ ಸಂಜೆ, ಅದೇ ಬಿಗ್ ನಲ್ಲಿ " ನೋ ಟೆನ್ಸನ್" ನಲ್ಲಿ ದೀಪು ಯವುದೋ ಟೀಚರ್ರಿಗೆ ಕರೆ ಮಾಡಿ, ನಿಮ್ಮ ಸ್ಟೂಡೆಂಟ್ ಒಬ್ಬ ನಿಮ್ಮ ಜೊತೆ ಮಲ್ಪೆ ಟೂರಿಗೆ ಹೋಗಿ ಬಂದಾಗಿನಿಂದ ’ಲವ್’ ಮಾಡುತ್ತಿರುವನೆಂದೂ, ನಾನು ಆ ಹುಡುಗನ ಚಿಕ್ಕಪ್ಪನೆಂದೂ ಕೊಡಬಾರದ "ಟೆನ್ಸನ್" ಕೊಡತೊಡಗಿದ.ಪಾಪ ಆ ಟೀಚರ್ರು ಕಂಗಾಲು.

ಮಾದ್ಯಮಗಳು ಒಂದು ಸಮುದಾಯದ ಅಭಿಪ್ರಾಯ ರೂಪಿಸುತ್ತವೆ ಅಂತಾರೆ, ಆದ್ರೆ ಇವರು ರೂಪಿಸುತ್ತಿರುವ ಅಭಿಪ್ರಾಯಗಳಾದರೂ ಎಂತವು?. ತೀರಾ ಈ ಮಟ್ಟದ ಕೀಳು ವಿಚಾರಗಳನ್ನು ಚರ್ಚಿಸುವ ಅಥವಾ ಅಂತಹ ಅಡ್ಡ ಹಾದಿಯಿಂದ "ಟೆನ್ಸನ್" ಕೊಡುವ ದರ್ದಾದರೂ ಏನಿತ್ತು ಅಂತಾ!. ಕನಿಷ್ಟ ಮಟ್ಟದ ಸಾಮಾಜಿಕ ಜಾವಾಬ್ದಾರಿಗಳು ಇವರಿಗೆ ಬೇಡವೆ?. ಎನೇ ಆದರೂ ಸಬ್ಯತೆಯ ಎಲ್ಲೆ ದಾಟುವುದು ನಂಗ್ಯಾಕೋ ಸರಿ ಎನಿಸಲಿಲ್ಲಾ. ಅಷ್ಟಕ್ಕೂ ’ಆ’ ತರದ ವಿಷಯಗಳ ಮೂಲಕ ಇವರು ಸಾಧಿಸ ಹೊರಟಿರುವ ಕ್ರಾಂತಿಯಾದರೂ ಏನು?. ’ಬೇರೆ’ ಎನೋ ಉಪಯೋಗಿಸದೆ ತಲೆ ಉಪಯೋಗಿಸಿ ಯೋಚಿಸಿದರೆ ಚರ್ಚಿಸಲು ಸಾವಿರಾರು ಸಮಸ್ಯೆಗಳಿವೆ, ಸದಭಿರುಚಿಯ ವಿಷಯಗಳಿವೆ.ಎನೋ ಗೊತ್ತಿಲ್ಲಪ್ಪಾ! ಕ್ರಿಯೇಟಿವಿಟಿ ಸೊಂಟದ ಕೆಳಗೇಯೇ ಹುಟ್ಟಬೇಕಾ?

ದೀಪು, ದೇವರಾಣೆಗೂ ನಾವು " ಆ " ಟೈಪಲ್ಲಪ್ಪಾ!!!

14 comments:

Anonymous said...

really its nice yar. yallargu heltini santoshavra blog odi mast maja madi anta....:)

Unknown said...

nice topic ......... creative writting.... but please write really what you are feeling..(really what you feel ).. because you already well matured in writting..no need test your writting skills. so try to be a honest person on the topic.....................

ಸಂತೋಷಕುಮಾರ said...

@ಅನಾಮಿಕ
:-) ಧನ್ಯವಾದಗಳು..

@ಹೊನ್ನರಾಜ್
ನಂಗನಿಸಿದ್ದೆ ಪ್ರಾಮಾಣಿಕವಾಗಿ ಬರೆದಿದ್ದೀನಿ ಮಾರಾಯ. ಕೆಲ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿದರೆ ಕೆಲವರಿಗೆ ಮುಜುಗರ ಆಗಬಹುದಲ್ವಾ?. ಸ್ನಾನ ಎಲ್ರೂ ಮಾಡ್ತಾರೆ ಅಂತಾ ಪಬ್ಲಿಕ್ನಲ್ಲೇ ಅಂಗಿ ಚಡ್ಡಿ ಬಿಚ್ಚಿ ನಿಲ್ಲೋಕೆ ಆಗಲ್ಲಾ ಅಲ್ವಾ?. ಕೆಲ ರೀತಿ ನೀತಿಗಳನ್ನು ನಾವು ಅನುಸರಿಸಲೇಬೇಕು.. ಏನಂತೀಯಾ?

ನಿ. ರಚಿತ said...

ನಿಮ್ಮ ಬರಹ ನೇರ, ದಿಟ್ಟ , ನಿರಂತರ ವಾಗಿದೆ.:)..ಹೆಚ್ಚು ಮಂಡೆ ಬಿಸಿ ಮಾಡಿಕೊಳ್ಳಬೇಡಿ ಮಾರಾಯ್ರೆ. ಇದು ಎಫ್ ಎಂ ವಾಹಿನಿಯ ದಿನನಿತ್ಯದ ಕರ್ಮ. ನಾನು ಹೆಚ್ಚಾಗಿ ಕೇಳಿಲ್ಲವಾದರೂ, ಜನರ ಮನಸ್ಸನು ಕೆದಕುವ, ಕೆರಳಿಸುವ ಕಾರ್ಯಕ್ರಮ ನೀಡದಿದ್ದರೆ ಆರ್ ಜೆಗಳ ಕೆಲಸಕ್ಕೆ ಕುತ್ತು ಬರುವುದಂತೆ. ಬದಲಾವಣೆಗಾಗಿ ಕಾಯೋಣ.

Ashwini Kumar Bhat said...

Hay Satosh,
Neenu heLuttiruvudu nija. Madhyama gaLu ondu samudaya da abhipraya vannu bimbisabeke. atyanta kshullaka athava keLamattada vishayagaLige praamukhyateyannu koDutta hodare anthaha madhyama tanna bagegina gaurava vannu kaLedukoLLuvudaralli ashcharyavenilla! Nanage teera ashcharya vaguva vishaya andare antaha Radio kendra dalli iruva itara adhikarigaLoo inthaha vishaya vannu prasara paDisalu hege oppikonDaru embudu. Idu yaro kevala obbana tamasheya aTavagiddare oppabahudittu. Adare marane dina yava vishayada bagge matanaDuttare mbudannu gottidda 'hiriya' adhikarigaLu idakke hege oppidaru embudu. Adoo teera munjaneya vishayavagi!!

intaha keLamaTTada vichara gaLannu prasara maDuvalli avarige yava tharada "Creativity" kanDito naanoo kaaNe...

- Hakki :)

ಡಿ ಆರ್ ಮಧುಸೂದನ್ said...

nee helodhu khare maga.. naanu keliddini big eff emmu navaru elle meeri hogibidtaare ondhondhu sala..
nangu innu artha aaglilla namma ee deepu yaave typu antha!

Suneel Kulkarni said...

ಅತ್ಯುತ್ತಮ ..!
ಇದು ಚರ್ಚೆ ಮಾಡಲೇಬೇಕಾದ ವಿಚಾರ..
ಇನ್ನೊಂದು ವಾಹಿನಿಯಲ್ಲಿ ’ಸಮಾಧಾನ’ತರಹದ ಒಂದು ’ರಾತ್ರಿ’ ಕಾರ್ಯಕ್ರಮ ಬರುತ್ತೆ. ಏನೋ ಬೇಜರಾಗಿ ಹಳೆಯ ಹಾಡುಗಳನ್ನಾದರೂ ಕೇಳೋಣ ಎಂದುಕೊಂಡರೆ, ಅಲ್ಲಿ ಶುರುವಾಗಿರುತ್ತೆ ಅವರ ಗೋಳು..! ಅದರಿಂದ ಯಾರಿಗೆ ಪ್ರಯೋಜನವಾಗುತ್ತೋ ನಂಗೊತ್ತಿಲ್ಲಾ ..! ನನ್ನ ಹಾಡುಗಳು miss ಆಗ್ತಾ ಇದೆ ಅನ್ನೋದು ಈ ಹೊಟ್ಟೆಯುರಿಗೆ ಕಾರಣ..!
:)ಸುನೀಲ

ಸಂತೋಷಕುಮಾರ said...

ರಚಿತ,
"ಬದಲಾವಣೆಗಾಗಿ ಕಾಯೋಣ" ಎಂದು ಎಲ್ಲರೂ ಕಾಯುತ್ತಾ ಕುಳಿತರೆ ಅದು ತಾನಾಗೆ ಹೇಗೆ ಅಗುತ್ತೇರೀ? ನಿಮ್ಮ ಅಭಿಪ್ರಾಯ ತಿಲಿಸಿದ್ದಕ್ಕೆ ಧನ್ಯವಾದಗಳು.

ಹಕ್ಕಿ,
ನಂಗೂ ಅದೇ ಆಶ್ಚರ್ಯ ಆಗಿದ್ದು, ಇವರೋ ಸರಿ, ಟಿ ಆರ್ ಪಿಗಾಗಿ ಎನೋ ಮಾಡಿದ್ದಾರೆ ಅಂತಾ ಅನ್ನಬಹುದು, ಆದ್ರೆ ಅಧಿಕಾರೆ ವರ್ಗದವರು ಏನು ಮಣ್ಣು ತಿಂತಿದ್ರು ಅಂತಾ?

ಮಧು,
ಯಾವ ಟೈಪು ಅಂತಾ ನಿಂಗೆ ತಿಳಿದರೆ ನಮಗೂ ಸ್ವಲ್ಪ ಹೇಳಿ ಬಿಡಪ್ಪಾ..

ಸುನೀಲ್,
’ರಾತ್ರಿ’ ಕಾರ್ಯಕ್ರಮ ??? ಯಾವುದಪ್ಪಾ ಅದು?
ಸವಿ ಸವಿ ನೆನಪು ಅಂತಾ ಪ್ರದೀಪ್ ಎನ್ನುವ ಅಡ್ನಾಡಿ " ಮನಸ್ಸು ಬಿಚ್ಚಿ ಮಾತಾಡಿ" ಅಂತಾ ಗೋಗರೆದು ಕರೆ ಮಾಡಿದವರನ್ನು ಅಳಿಸಿ, ಅದರಿಂದಲೂ ಟಿ ಆರ್ ಪಿ ಏರಿಸುವಾ ಕಾರ್ಯಕ್ರಮವಾ?, ಹಾಂ! " ತಮಾಷೆ ಫ್ಯಾಕ್ಟರಿ" ಅಂತ ಪ್ರೋಗ್ರಾಂ ಒಂದರಲ್ಲಿ ಮಾ. ಆನಂದ ತನ್ನ ಜೋಕಿಗೆ ತಾನೆ ಬಿದ್ದು ಬಿದ್ದು ನಗುತ್ತಾ ಕಿರಿಕಿರಿ ಮಾಡುವದೂ ಇದೆ..
ಇನ್ನು ಎಸ್,ಎಫಂ ನಿರೂಪಕರ ಹೇಳುವುದೇ ಬೇಡಾ.. ಎಲ್ಲಾ ಅದ್ವಾನಮಯ..

veena said...

nanu ಮೊದಮೊದಲು ಪ್ರದೀಪ್, ದೀಪು, ಹರ್ಷರವರ ಕಾರ್ಯಕ್ರಮಗಳನ್ನು ಕೇಳುತ್ತಿದ್ದೆ.. ಮತ್ಯಾಕೋ ತೀರಾ ಅತೀಯಾಯಿತು ಅನಿಸಿತು.. ಮುಂದಿನ ದಿನಗಳಲ್ಲಿ ಇನ್ಯಾವ ಥರದ ಕಾರ್ಯಕ್ರಮಗಳು ಬರುತ್ತವೋ?

ಸದ್ಯಕ್ಕಂತೂ ಕಾಮನಬಿಲ್ಲಿನ ಮಧುರ ಹಾಡುಗಳನ್ನೇ ಕೇಳುವುದು..

Harsha Bhat said...

kaage harsodu kunni oDisodu ella mugitu. eega inthavugaLa saradi. maimEle bandavarante odaridare tammanna number 1 antare anno bhtame li iddange ide. Sadhyada bangalore FM gaLalli kelalu kushi koduvadu basanti hariprakash program matra.

ಸಂತೋಷಕುಮಾರ said...

vee ಮನಸ್ಸಿನ ಮಾತು,
ಕಾಮನಬಿಲ್ಲಿನ ನಿರೂಪಕರ ಬಗ್ಗೆ ಕೆಮ್ಮಂಗಿಲ್ಲಾ ಬಿಡಿ.ಮೊದಲ ಬಾರಿಗೆ ನನ್ನ ಬ್ಲಾಗಿನಲ್ಲಿ ಪ್ರತಿಕ್ರಿಯಿಸಿದ್ದೀರಾ ಅನಿಸುತ್ತೆ.. ಧನ್ಯವಾದಗಳು..

ಹರ್ಷ,

ಎನೋ ಪಾ ಹರಿಪ್ರಕಾಶ್ ಬಗ್ಗೆ ಗೊತ್ತಿಲ್ಲಾ, ಬಹುತೇಕ ನಾನು ಎಫ್,ಎಂ ಉಸಾಬರಿಗೆ ಹೋಗುವದಿಲ್ಲಾ, ಇರೀ ನಮ್ ಮನೋಜನ್ನ ಕೇಳಿ ನೋಡ್ತೀನಿ..

Unknown said...

ಸಂತೋಷ ನೀವು ಹೇಳಿದ ಮಾತು ಸರಿಯಾಗಿದೆ ನೋಡ್ರಿ.
"ದೀಪು, ದೇವರಾಣೆಗೂ ನಾವು " ಆ " ಟೈಪಲ್ಲಪ್ಪಾ!!!"
ಈ ಎಫ್.ಎಮ್.ರೇಡಿಯೋ ದಲ್ಲಿ ಬಂದ ಇನ್ನೊಂದು ಉದಾಹರಣೆ (ಸ್ಯಾಂಪಲ್) ಇಲ್ಲಿದೆ ನೋಡಿ:
"ನೀವು ನಿಮ್ಮ ಪಾರ್ಟನರ್ (ಬಾಳಸಂಗಾತಿಯೊಡನೆ) ಡೈವೋರ್ಸ್ (ವಿಚ್ಛೇದನೆ) ಬಯಸುತ್ತೀರಾ? ಯಾವ ಕ್ವಾಲಿಟಿ (ಗುಣಗಳು) ನಿಮಗೆ ಇಷ್ಟವಾಗೋಲ್ಲ ಅನ್ನೋದನ್ನ ಈಗ್ಲೆ ಫೈಟುಫೈತ್ರೀಫೋರಸಿಕ್ಸ್ ಗೆ ಎಸ್ಸೆಮ್ಮೆಸ್ಸ ಮಾಡಿ"
ಥೂ ಇವಳಜ್ಜಿ. ಇವರ ಕನ್ನಡ ಪ್ರೀತಿನೂ ಬೇಡ ಇವರ ಕನ್ನಡ ಪ್ರಸಾರಾನೂ ಬೇಡ.

Sushrutha Dodderi said...

ಪಾಟೀಲರಿಗೆ ನಮಸ್ಕಾರ. ಹೇಗಿದ್ದೀರಿ?

ನಿಮಗೂ ಗೊತ್ತಿರೋ ಹಾಗೆ ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಸಂತೋಷಕುಮಾರ said...

ಒಳ್ಳೆಯ ಯೋಚನೆ,ಖಂಡಿತ ಸಿಗೋಣ.. ಮುಂದಿನದು ಅಲ್ಲೇ ಮಾತಾಡೋಣ..