Sunday, September 30, 2007

ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ.....



ಈ Week end ಯಾವ ಥೇಟರಿಗೆ ಲಗ್ಗೆ ಹಾಕಬೇಕೆಂದು ತಲೆ ಕೆರೆದುಕೊಳ್ಳುತ್ತಿರುವಾಗಲೇ ನಮ್ಮ ಮನೋಜ ಈ ವಾರ ನಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸ್ತಾರೆ ಎಂಬ ರೋಚಕ ವಿಚಾರವನ್ನು ಹೇಳಿದ.ನಿಮಗೆ ಇನ್ನೊಂದು ಮಾತು,ನಾನು ಹೊಸದಾಗಿ ಬಂದಾಗ ಈ ಬೆಂಗಳೂರಿಗರು ಹಿಂತಾ ಪ್ಯಾಲಿ ನನ್ ಮಕ್ಳು ಅಂತ ಖಂಡಿತ ಗೊತ್ತಿರಲಿಲ್ಲಾ, ನಮ್ ಕಡೆ ಗಣೇಶ ಚೌತಿ ಅಂದ್ರೆ ಎನು ಭಯ-ಭಕ್ತಿ, ಸಡಗರ, ಎಷ್ಟೊಂದು ಆಚರಣೆಗಳು ಅಂತೀರಾ? ಅದನ್ನು ಮಾಡಬಾರದು,ಇದನ್ನೂ ಮಾಡಬಾರದು, ಚಂದ್ರನ್ನ ನೋಡಬಾರದು ಅಂತೆಲ್ಲಾ ನೂರಾರು ಕಟ್ಟುಪಾಡುಗಳು, ಈ ಮುಂಡೆವಕ್ಕೆ ಒಂದಾದ್ರೂ ಬೇಡ್ವೆ? ಅದೂ ಹಾಳಾಗ್ಲಿ ಗುರುವೇ?, ಚೌತಿ ಮುಗಿದ್ರು ಈ ನನ್ ಮಕ್ಳ ಹಬ್ಬ ಮುಗಿದಿರುವದಿಲ್ಲಾ, ತಿಂಗಳು ಪೂರ್ತಿ ಡಂಕ ನಕ ಡಂಕ.. ತಮ್ಮ ಟೈಮ್ ನೋಡ್ಕೊಂಡು , ಆರ್ಕೆಸ್ಟ್ರಾ ಟೈಂ ನೊಡ್ಕೊಂಡು ಗಣೇಶನ್ನ ಕೂರಿಸೋ ನನ್ನ್ ಮಕ್ಳು ಇವರು. ಇದನ್ನು ಕುರಿತು ಸಿಕ್ಕಿದ್ದೆ ಚಾನ್ಸು ಅಂತ ಗಂಟಲು ಸರಿ ಮಾಡಿಕೊಂಡು ಭಾಷಣ ಬಿಗಿಯುತ್ತಿರುವಾಗ
ನಮ್ಮ ಮನೋಜನ ಸಹನೆ ಮೀರಿ "ಅಯ್ಯೊ ಹಾಳಾಗ್ಲಿ! ಯಾವಾಗ ಮಾಡಿದ್ರೆ ನಮಗೇನು? ನೀವು ಮಾತ್ರ ಫ್ರೈಡೆ ಸಂಜೆ ಬೇಗ ಬಂದು ಬಿಡಿ, ಇಬ್ರೂ ಪ್ರೊಗ್ರಾಮ್ ನೊಡೊಣಾ" ಅಂತ ಅಪ್ಪಣೆ ಮಾಡಿದ ನಮ್ಮ ಸುರ್ಯವಂಶಿ. ಆ ಮಹಾತ್ಮನ ಹುನ್ನಾರ ಬಲ್ಲವರಾರು?

"ಫ್ರೈಡೆ ಮದ್ಯಾಹ್ನ ಗಣೇಶನ್ನ ತರ್ತಾರೆ, ಸಾಯಂಕಾಲ ನಗೆಹಬ್ಬ, ಶನಿವಾರ ಮಧಾಹ್ನ ಮಕ್ಕಳಿಂದ ಮನರಂಜನೆ, ಸಂಜೆ ಆರ್ಕೆಸ್ಟ್ರಾ, ಭಾನುವಾರ ಗೇಮ್ಸ್ ಇರ್ತಾವೇ" ಅಂತ ಟೈಂ ಟೇಬಲ್ಲು ಸಹಾ ಹೇಳಿ ’ಇನ್ನೆನು ನಿಂದು ಮುಚ್ಕೊಂಡು ಬಾ’ ಎಂಬಂತೆ ಗುರಾಯಿಸಿ ಪೆಂಡಾಲು ಹಾಕುತ್ತಿದ್ದವರ ಜೊತೆ ಹರಟೆಗಿಳಿದ ನಮ್ಮ ಮನೋಜ್.

ಅವನಾಜ್ಞೆ ಉಲ್ಲಂಘಿಸಿದರೆ ರಾತ್ರಿ ನಿದ್ದೆ ಮಾಡಲು ಬಿಟ್ಟಾನೆಯೇ ಅಂತ ಹೆದರಿ ಶುಕ್ರವಾರ ಬೇಗ ಆಫೀಸ್ ಬಿಟ್ಟೆ. ಆಗ್ಲೆ ನಗೆಹಬ್ಬ(?) ಶುರುವಾಗಿಯೇಬಿಟ್ಟಿತ್ತು. ಯಾವ ಕೋನದಿಂದ ನೋಡಿದರೂ ಹುಡುಗಿಯರೇ ಕಾಣುವಂತಾ ಜಾಗದಲ್ಲಿ ನಮ್ಮ ಮನೋಜ ಖುರ್ಚಿ ಕಾಯ್ದಿರಿಸಿದ್ದ. ಅವನೆಡೆಗೆ ಕೃತಜ್ಞತೆಯಿಂದ ನೋಡಿ ಖುರ್ಚಿಯಲ್ಲಿ ಆಸೀನನಾದೆ. ವೇದಿಕೆ ಮೇಲೆ ನೊಡ್ತಿನೀ ಅದೇ ರಿಚರ್ಡೂ, ಅದೆ ಮೈಸುರು ಆನಂದು, ಪ್ರಾಣೇಶು.. ನಂಗಂತೂ ಸಿಕ್ಕಾಪಟ್ಟೆ ನಿರಾಶೆಯಾಯಿತು.

" ಅಲ್ವೋ ಮನೋಜ್, ಅಣ್ಣಮ್ಮನ ಉತ್ಸವಕ್ಕೂ ಇವರದೆ ಪ್ರೊಗ್ರಾಮ್ ಇತ್ತಲ್ಲವೋ? ಮತ್ತೆ ಎನೂ ಕೇಳ್ತಿಯಾ? ಹಾಡಿದ್ದಾಡೊ ಕಿಸಭಾಯಿ ದಾಸ ಎಂಬಂತೆ" ಎಂದು ಅಲವತ್ತು ಕೊಂಡೆ.

"ಅವರ ಮಾತು ಯಾವ ಬೋ.. ಮಗ ನಿಂಗೆ ಕೇಳು ಅಂದ" ಅಂತ ನಂಗೆ ಕೇಳುವಂತೆ ಗೊಣಗಿ ಆದ್ರೂ ಮಳ್ಳನಂತೆ ಮುಖದ ಮೇಲೆ ನಗು ತಂದುಕೊಂಡು " ಹ್ಹಿ ಹ್ಹಿ ಹ್ಹಿ ಅದರ ಜೊತೆ ಬೇರೆ Entertainment ಇರುತ್ತಪ್ಪಾ, ಸರಿಯಾಗಿ ಗಮನಿಸಿ" ಎಂದವನೆ Entertainment ಹುಡುಕತೊಡಗಿದ.

ಕಸದಲ್ಲಿ ರಸ ತೆಗೆಯುವ ಅವನ ಯುಕ್ತಿಗೆ ಮನದಲ್ಲೆ "ಎಲಾ ಬಡ್ಡಿಮಗನೆ" ಅನ್ಕೊಂಡು ಗಣೇಶನ ಮೂರ್ತಿ ಕಡೆ ನೊಡ್ತೀನಿ ಕೃಷ್ಣಾವತಾರಿ ಗಣೇಶ ರಾಧೆಯ ಮೇಲೆ ಕೈ ಹಾಕಿ ಕುಳಿತ್ತಿದಾನೆ. ನಂಗ್ಯಾಕೋ ಕಸಿವಿಸಿ ಅನ್ನಿಸಿ ದುಃಖ ತೋಡಿಕೊಳ್ಳಲು " ಮನು ಗಣೇಶನ ಮೂರ್ತಿ ನೊಡಿದ್ಯಾ?" ಅಂದೆ.

ಅವನಿಗೆ ಸಿಟ್ಟು ಬಂದಿರಬೇಕು ಈ ಮಗನಿಗೆ ನಾ ನೋಡು ಅಂತಿರೋದೆ ಬೇರೆ ಈ ಮಗ ನೋಡ್ತಿರೋದೆ ಬೇರೆ ಅಂತಾ, ಆದ್ರು ಭಯ ಬಕ್ತಿಯಿಂದ
" ಸಂತೋಷರ, ನಿಮ್ಮ R&D ಇಲ್ಲಿ ಬೇಡ. ಹೊರಗೆ ಹೋದಲ್ಲಾದರೂ ನಿಮ್ಮ ಹುಳುಕು ಹುಡುಕುವ ಬುದ್ಧಿ ಬಿಟ್ಟು Enjoy ಮಾಡೊದನ್ನು ಕಲಿಯಿರಿ" ಅಂತ ಉಪದೇಶ ಕಮ್ ವಾರ್ನಿಂಗ್ ಕೊಟ್ಟ.

" ಅಲ್ವೋ ಹೇಳಿ ಕೇಳಿ ಗಣೇಶ ಶುದ್ಧ ಬ್ರಹ್ಮಾಚಾರಿ, ರಾಧೆ ಪಕ್ಕ ಕುರಿಸೋದು ಅಭಾಸ ಅಗಲ್ವೇನೋ" ಅಂತ ಅವನ ಸಮರ್ಥನೆ ಬಯಸಿದೆ.

"ಹ್ಹಿ ಹ್ಹಿ ಹ್ಹಿ ಹೀಗೆ ಎಷ್ಟು ದಿನ ಅಂತ ಇದ್ದಾನು, ಅವನೂ Enjoy ಮಾಡ್ಲಿ ಬಿಡ್ರಿ. ನಿಮ್ಮ ಪಕ್ಕ ಯಾರಿಲ್ಲಾ ಅಂತ ಉರಿನಾ? ನೀವು ಸುಮ್ನ ಪ್ರೊಗ್ರಾಂ ನೊಡ್ರಿ" ಅಂತ ಉಡಾಫೆಯಿಂದ ಮಾತಾಡಿ ತನ್ನ ಚಟುವಟಿಕೆ ಮುಂದುವರೆಸಿದ.

ಸರಿ ಪ್ರೋಗ್ರಾಂ ಆದ್ರು ನೋಡಿದ್ರಾಯ್ತು ಅಂತ ನೋಡಿದ್ರೆ ರಿಚರ್ಡರ ಅವೇ ಹಳೆ ಪ್ರಸಂಗಗಳು, ಕೆಟ್ಟ ಜೋಕುಗಳು, ಮೈಸುರು ಆನಂದರ ಕಾಮೆಂಟರಿ,ಮೈಕುಣಿತ, ಪ್ರಾಣೇಶರ ಸೂಳೆಮಗ ಜೋಕುಗಳು. " ಥೂ ಸೂಳೆಮಕ್ಳಾ" ಅಂಥ ಮನಸ್ಸಲ್ಲೆ ಉಗಿದುಕೊಂಡೆ.ನಗಿಸಲು ಅವರು ಪಡುತ್ತಿದ್ದ ಕಷ್ಟ ಕಂಡು ಪಾಪ ಅನಿಸಿತು. ರೀಚರ್ಡ್ ಬೇರೆ ಹೊದ ಕಡೆಯವರನ್ನೆಲ್ಲಾ ಹೊಗಳುವ ಹೊಗಳುಭಟ್ಟತನ ಆರಂಭಿಸಿದ್ದ. ಪದೆ ಪದೆ ಸಂಕೋಚ ಪಡದೆ "ಬಾಯ್ತುಂಬ ನಗಿ ಬಾಯ್ತುಂಬ ನಗಿ" ಅಂತ ದೀನನಾಗಿ ಗೋಗರೆಯುತ್ತಿದ್ದ ಕಂಡು , ಬಾಯಿ ಬಿಟ್ಟೂ ಬೇರೆ ಅಂಗದಿಂದಲೂ ನಗಬಹುದಾ ಅನಿಸಿತು.ವೇದಿಕೆ ತುಂಬ ಅವರ ಲಘು ವರ್ತನೆ ಮತ್ತು ಹೇಳುವ ಪಿಜೇಗಳನ್ನು ಕೇಳಿ ಇನ್ನೂ ಸಹಿಸಲಾಗದು ಅಂದುಕೊಂಡು ಮನೋಜನ ಅವತ್ತಿನ ಖೋಟಾ ಮುಗಿಸಿ " ನಾಳೆ ಪೂರ್ತಿ ಕುರೋಣ" ಅಂತ ಪ್ರಮಾಣ ಮಾಡಿ ಮರಳಿ ರೂಮಿಗೆ ಕರೆದುಕೊಂಡು ಬಂದೆ.

ಶನಿವಾರವೂ ಅದೇ ಕಥೆ ಮಕ್ಕಳಿಂದ ಮನರಂಜನೆ ಅಂತಾ ಹೋದ್ರೆ ಕತ್ತೆ ವಯಸ್ಸಿನ ಇಂಗ್ಲೀಷ ಮೀಡಿಯಂ "ಮಕ್ಕಳು" ಪ್ರಾರ್ಥನೆ ಅಂತ ಅರಚಲು ಆರಂಭಿಸಿದ್ದವು. ಎಲ್ಲಾ ಸಮಿತಿ ಸದಸ್ಯರ ಮಕ್ಕಳು ಹಾಡಿ, ಕುಣಿದು, ಹಿಗ್ಗಾ ಮುಗ್ಗಾ ಪ್ರತಿಭೆ ಪ್ರದರ್ಶಿಸಿದ ಮೇಲೆ ಸಾಕಪ್ಪೋ! ಅನಿಸಿತು. ಅದು ಮುಗಿಯುತ್ತಲೇ " ಝೇಂಕಾರ ಮೇಲೊಡೀಸ್ ಮೇಲೊಡೀಸ್ ಮೇಲೊಡೀಸ್" ಅಂತಾ ಮೂರ್ನಾಲ್ಕು ಸಾರಿ ಅರಚಿ, ಜೂನಿಯರ್ ಎಸ್.ಪಿ.ಬಿ , ಜೂನಿಯರ್ ಜಾನಕಿ ಅಂತ ಎಲ್ಲ ಜೂನಿಯರಗಳಿಂದ ಅವೇ ಮಾಮೂಲು ಅರ್ಕೆಸ್ಟ್ರಾ ಗೀತೆಗಳಾದ "ಜೊತೆಯಲಿ, ಜೊತೆ ಜೊತೆಯಲಿ" , " ಹೃದಯ ಸಮುದ್ರ ಕಡೆದು"," ತಂಗಾಳಿಯಲ್ಲಿ ನಾ ತೇಲಿ ಬಂದೆ", "ಕುಚಿಕು ಕುಚಿಕು " ಮತ್ತು " ಅನುಸುತಿದೆ" "ಕರಿಯ ಐ ಲವ್ ಯೂ " ಹಾಡಿ ಕೊನೆಗೆ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ!" ಅಂತ ಮಂಗಳಾರತಿಯನ್ನೂ ಹಾಡಿ ಅಣ್ಣಾವ್ರಿಗೆ ಜೈ! ಎಂದು ಕಾರ್ಯಕ್ರಮ ಮುಗಿಸುವಷ್ಟರಲ್ಲಿ ತಲೆ ಕೆಟ್ಟೂ ಕೆರ ಹಿಡಿದು ಹೋಗಿತ್ತು "ಪಕ್ಷಿ ವೀಕ್ಷಣೆ" ಯಲ್ಲಿ ತೊಡಗಿದ್ದ ನಮ್ಮ ಅಭಿನವ ಸಲೀಂ ಅಲಿಯ " ಕಾಳು ಹಾಕುವ" ಕಾರ್ಯಕ್ರಮ ಮುಗಿಸಿ ಕರೆತರುವಷ್ಟರಲ್ಲಿ ಗಣೇಶ ಎನು ನಿನ್ನ ಲೀಲೆ ಎಂದೆನಿಸತೊಡಗಿತ್ತು..

8 comments:

ಪಯಣಿಗ said...

ಪಾಟೀಲ ಭಾಳ ಛೋಲೋ ಬರದೀ

Anonymous said...

yenri yellu nimma gadagh bhaashaa kaanodillalla !!!

ಸಂತೋಷಕುಮಾರ said...

@ ಫಿನಿಕ್ಸು..
ಯಾರೋ ನಂಗೆ "ಟೈಟಲ್ ಬರಹಗಾರ" ಅಂತ ಕಾಲೆಳೆದ ಹಾಗಿತ್ತಪ್ಪಾ! :)

@ಅನಾಮಿಕ
ಹೆಸರು ಹೇಳಬಹುದಿತ್ತಲ್ವಾ?.ಏನೋ ಪಾ, ಸಂಭಾಷಣೆ ನಮ್ಮ ಭಾಷೆಯಲ್ಲಿಯೇ ಇರುತ್ತಪ್ಪ! ಪೂರ್ತಿ ಅಭಿವ್ಯಕ್ತಿ ನಮ್ಮ ಭಾಷೆಯಲ್ಲಿಯೇ ಅಂದ್ರೆ ಕಷ್ಟ. ಗ್ರಾಂಥಿಕ ಭಾಷೆಯಾಗಿ ಯಾರೂ ಉತ್ತರ ಕರ್ನಾಟಕದ ಭಾಷೆ ಬಳಸುವದಿಲ್ಲಾ ಎಂಬುದು ನನ್ನ ತಿಳುವಳಿಕೆ.. ನೋಡೊಣ, ಆದ್ರೂ ಪ್ರಯತ್ನಿಸುತ್ತೇನೆ..

Samarasa said...

chennagide kanri

ರಂಜನಾ ಹೆಗ್ಡೆ said...

ತುಂಬಾ ಚನ್ನಗಿ ಬರ್ದಿದ್ದಿರಾ ಕಣ್ರಿ.
ನಗು ಬಂತು ಓದಿ.
ಪಕ್ಷಿ ವೀಕ್ಷಣೆ, ಕಾಳುಹಾಕುವ ಕಾರ್ಯಕ್ರಮ ಇಂಥ ಪದಗಳು ಮುದ ನೀಡಿದವು.
ಮಸ್ತ್.

Anonymous said...

ಸಂತೋಷ್,
ಈ ಥರದೊಂದು ತರಲೆ ಬ್ಲಾಗಿಗೆ ಬಹಳ ದಿನದಿಂದ ಹುಡುಕಾಡ್ತಾ ಇದ್ದೆ. ಮುಗ್ಯಾಂಬೋ ಖುಶ್ ಹುವಾ!! ನಿಮ್ಮ ಅಬ್ಬಿಗೇರಿಯ ಬಗೆಗಿನ ಬರಹದ ಶೈಲಿಯಂತೂ ಬಹಳ 'classy' ಆಗಿದೆ. ಇನ್ನು ಮುಂದೆ ಮಾತುಕತೆ ಇದ್ದೇ ಇದೆ!!
- ಟೀನಾ

ಸಂತೋಷಕುಮಾರ said...

@ ಟೀನಾ,ರಂಜನಾ

ನನ್ನ ಬ್ಲಾಗಿಗೆ ಸುಸ್ವಾಗತ! ಉತ್ತರ ಕರ್ನಾಟಕದ ಶೈಲಿಯ ನನ್ನ ಬರವಣೆಗೆಯನ್ನು ಮತ್ತು ಶುಧ್ಧ ತರಲೆ ಧಾಟಿಯ ಬರಹಗಳನ್ನು ಒಪ್ಪುತಾರೋ ಇಲ್ವೋ ಎಂಬ ಭಯ ಇತ್ತು, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ,ಸಲಹೆ,ಅತಿ ಎನಿಸಿದರೆ ಒಂದು ಸಣ್ಣ ಗದರಿಕೆ ನನ್ನೊಂದಿಗಿರಲಿ.

Unknown said...

santosh,tumbaane chenaagi bardidiyaa.