Wednesday, April 18, 2007

ಲಹರಿಯಲ್ಲಿದ್ದಾಗ ಬರೆದದ್ದು...




ಇವುಗಳಿಗೆ ಪ್ರೇಮಪತ್ರಗಳಂತಿರೊ,ಹುಚ್ಹು ಬರಹಗಳಂತಿರೋ ನಿಮಗೆ ಬಿಟ್ಟಿದ್ದು.. ಈ ಬರಹಗಳಂತೂ ನಂಗೆ ತುಂಬ ಖುಶಿ ಕೊಟ್ಟಿವೆ,ಆ ಕ್ಷಣದ ಮಟ್ಟಿಗೆ ಅನಿವಾರ್ಯವಾದ Relief ಕೊಟ್ಟಿವೆ,ಆ ಮಟ್ಟಿಗೆ ನಾನು ಈ ಬರಹಗಳಿಗೆ ಚಿರಋಣಿ. ನಾನು 'ಭಯಂಕರ' ಲಹರಿಯಲ್ಲಿದ್ದಾಗ ಉಕ್ಕಿದ ಭಾವನೆಗಳಿವು, ಅವುಗಳನ್ನು ಅಕ್ಷರರೂಪಕ್ಕೆ ತರಲು ಯತ್ನಿಸಿದ್ದೇನೆ. ಓದಿ ನೋಡಿ..
******************************************************************
ಏನೇ ಆಗಲಿ, ಅವಳಿಗೆ ಸರಿಸಾಟೀ ಅವಳೇ.ಅವಳಿಗೆ ಹೋಲಿಕೆಯೇ ಇಲ್ಲಾ.. ಅವಳದು ಸ್ನಿಗ್ದ ಸೌಂದರ್ಯ,ಮುಗ್ದ ಚೆಲುವು..
ನಿಮಗೊತ್ತಾ! ಅವಳದು ಅಚ್ಚ ಹಾಲುಬಿಳುಪಿನ ವರ್ಣ, ನಸುಗುಲಾಬಿ ಬಣ್ಣದ ನುಣುಪು ಕೆನ್ನೆ,ಸುಳೀಗಾಳಿಗೆ ಜೀಕುವ ಆಗಿನ ಬಾಬ್ ಕಟ್ ಮಾಡಿಸಿದ ಕೂದಲುಗಳು,ಚಿಲಿಪಿಲಿಗುಟ್ಟುವ ಪಿಸುಮಾತಿನಷ್ಟು ಹಗುರವಾದ ಮಾತುಗಳು, ಮೌನಝರಿಯಂತಹ ನಗು,ತುಸು ಮಾಡ್ ಎನ್ನಬಹುದಾದಂತಹ ಅವಳ ಹಿತಮಿತ ವರ್ತನೆ,ಅವಳ ಉಚ್ಚಾರ ಶೈಲಿ, ತಿಂಡಿಪೊತತನದ ಕೆಟ್ಟ ಗುಣ, ತುಸು ಜಾಸ್ತಿನೆ ಇದ್ದ ಬಿಂಕ, ಚಿಕ್ಕದಕ್ಕು ಕಣ್ಣೀನಲ್ಲಿ ಸುಜಲ ಧಾರೆ.ಯಾಕೊ ಗೊತ್ತಿಲ್ಲಾ ಅವಳು ಹುಚ್ಚು ಹಿಡಿಸಿಬಿಟ್ಟದ್ದಳು.
ಅವಳಲ್ಲಿ ಎನೋ ಒಂದು ಸೆಳೆತವಿತ್ತು,ಬರಸೆಳೆದುಕೊಳ್ಳುವ ಉತ್ಸುಕತೆಯಿತ್ತು(?),ನಮ್ಮ ಸಣ್ಣತನಗಳನ್ನು ಮೀರಿದ ಔದಾರ್ಯತೆಯಿತ್ತು, ಸಹೋದರಿಯಲ್ಲಿರಬಹುದಾಗಿದ್ದ ಅಂತರ್ಯವಿತ್ತು, ಮಾತೃ ಮಮತೆಯಿತ್ತು, ಕೆಟ್ಟ ಕೂತುಹಲವಿತ್ತು, ವಯೋಸಹಜ ತುಂಟತನಗಳಿದ್ದವು, ಎಲ್ಲವು ನನ್ನದಾಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು, ಮುಖ್ಯವಾಗಿ ಸೋಲನ್ನು ಗೌರವಿಸುವ ಹಿರಿತನವಿತ್ತು, ತುಸು ದುಬಾರಿಯಾದ ಹವ್ಯಾಸಗಳಿದ್ದವು. ನಂಗಿನ್ನೂ ನೆನಪಿದೆ ಅವಳು ಬರೀ ’ಪ್ರತಿಸ್ಪರ್ದಿ’ಯಾಗಿರಲಿಲ್ಲಾ, ಸಣ್ಣದಕ್ಕು ರಚ್ಚೆ ಹಿಡಿಯುವ ಮಗುವಾಗಿದ್ದಳು,ಸ್ಪರ್ಧೆಯ ಗುಟ್ಟು ಬಿಟ್ಟು ಕೊಡುವ ಪೆದ್ದಿಯಾಗಿದ್ದಳು.ನಮ್ಮುರಿನ ಶಿಷ್ಟಾಚಾರವನ್ನು ಮೀರಿ ನನ್ನನ್ನು ಮನೆಗೆ ಕರೆದೊಯ್ಯುವ ಆರೋಗ್ಯಕರ ಮನಸ್ಸಿನವಳಾಗಿದ್ದಳು. ಅವಳಲ್ಲಿನ ಕ್ಷುಲ್ಲಕತೆಯನ್ನು ಅವಳ ಔದಾರ್ಯ ಮೀರಿ ನಿಂತಿತ್ತು. ಅದಕ್ಕೆ ಅವಳು ನಂಗೆ ಇಷ್ಟ! ಅವಳು ಬರೀ ನೆನಪಲ್ಲಾ, ಅವಳು ನನ್ನ ಸ್ಪೂರ್ತಿ,ಪ್ರೇರಣಾ ಶಕ್ತಿ.
ನಂಗೆ ಅವಳು ಇಡಿ ಇಡಿಯಾಗಿ ಇಷ್ಟ!ಎಷ್ಟೆಂದರೆ ಈ ವಿಶ್ವದಷ್ಟು.. ಹೌದು, ನಾನವಳನ್ನು ಪ್ರೀತಿಸ್ತಿನಿ,ಮೋಹಿಸ್ತಿನಿ,ಧ್ಯಾನಿಸ್ತಿನಿ,ಆರಾಧಿಸ್ತಿನಿ.ಅವಳಿಲ್ಲದೆ ನಾನು ಇರೆನು,ನಂಗವಳು ಅನಿವಾರ್ಯ.
ನನ್ನ ಹುಂಬತನಗಳು,ಏಕಪಕ್ಷೀಯತೆ,ಸರ್ವಾಧಿಕಾರಿ ಧೋರಣೆ ಎಲ್ಲವನ್ನೂ ಮರೆಯುತ್ತೇನೆ.ಅವಳ ಸನ್ನಿಧಿಯಲ್ಲಿ ನಾನು ಧ್ಯಾನತಪ್ತ ಯೋಗಿಯಂತೆ! ಮೌನ ಋಷಿಯಂತೆ!
ಅವಳೆಂದೂ ಸಿಗಳು ಅಂತ ಗೊತ್ತಿದ್ದರೂ ಸಹ ಮತ್ತೆ ಮತ್ತೆ ಹುಡುಕುತ್ತೇನೆ, ಅವಳೀಗಾಗಿ ಅಲೆಯುತ್ತೇನೆ.ಮೊದಲೆ ನಿರಾಶೆ ಖಂಡಿತ ಅಂತ ಗೊತ್ತಿದ್ದರೂ ಸಿಗಲಿಲ್ಲವಲ್ಲಾ! ಅಂತಾ ಚಡಪಡಿಸುತ್ತೆನೆ, ಸುಮ್ಮನೆ ದುಃಖವನ್ನೆಳೆದುಕೊಂಡು ಕೊರಗುತ್ತೇನೆ.ಉಂಟಾಗುವ ಬಹುಶಃ ಯಶಸ್ಸೆ ಆಗಿರದ ’ಹುಸಿಯಶಸ್ಸಿಗೆ’ ಮನಸೊ ಇಚ್ಚೆ ನಲಿಯುತ್ತೆನೆ,ತಕ್ಷಣ ಮೌನವಾಗುತ್ತೆನೆ.ಮನಸ್ಸು ಮುದುಡಿಕೊಳ್ಳುತ್ತೆ,ಮೌನಮಾತಾಗುತ್ತೆ,ದಾರಿದೀಪವಾಗುತ್ತೆ.
ಇತಿ ಚಿರವಿರಹಿ,

4 comments:

Anonymous said...

Andre nivu hogtha iro dari Mungaru male film tara anni

adru niv hudugaru buddivantaru one way love madkondu karch kadime madkotira.

ಸಂತೋಷಕುಮಾರ said...

ಅಲ್ಲ್ರಿ ಖರ್ಚಿಗೂ, ಲವ್ ಗೂ ಯಾವ ಸಂಬಂಧ ಅಂತ ದೇವರಾಣೆಗೂ ಅರ್ಥ ಆಗ್ಲಿಲ್ಲಾ.
ಮುಂಗಾರು ಮಳೆಲಿ ಗಣೇಶನಿಗೆ ನಂದಿನಿ ಸಿಕ್ಕಿದ್ಲು, ಈ ನನ್ ಮಗಾ ತ್ಯಾಗ ಮಾಡಿದ. ಆ ಭಾಗ್ಯ ನಮ್ಮಂತ ಮುಂಡೆವಕ್ಕೆ ಎಲ್ಲಿ ಸಿಗುತ್ತೆ?..
ನಮ್ಮದೆನಿದ್ರು "ಯಾರೊ ಯಾರೊ ಗೀಚಿ ಹೋದ ಹಾಳು ಹಣೆಯ ಬರಹ" :-)

Sangamesh said...

ಪಾಟೀಲಾ, ಹದಿ ಹರೆಯದ ಯುವಕರ ಕಣ್ಣಿಗೆ ಒಬ್ಬ ಯುವತಿಯ ಬಗೆಗಿನ ಭಾವನೆಗಳ ಬೆಳಗು ತುಂಬಾ ಚೆನ್ನಾಗಿದೆ.

"ಅವಳೆಂದೂ ಸಿಗಳು ಅಂತ ಗೊತ್ತಿದ್ದರೂ ಸಹ ಮತ್ತೆ ಮತ್ತೆ ಹುಡುಕುತ್ತೇನೆ, ಅವಳೀಗಾಗಿ ಅಲೆಯುತ್ತೇನೆ.
ಮೊದಲೆ ನಿರಾಶೆ ಖಂಡಿತ ಅಂತ ಗೊತ್ತಿದ್ದರೂ ಸಿಗಲಿಲ್ಲವಲ್ಲಾ! ಅಂತಾ ಚಡಪಡಿಸುತ್ತೆನೆ, ಸುಮ್ಮನೆ ದುಃಖವನ್ನೆಳೆದುಕೊಂಡು ಕೊರಗುತ್ತೇನೆ.
ಉಂಟಾಗುವ ಬಹುಶಃ ಯಶಸ್ಸೆ ಆಗಿರದ ’ಹುಸಿಯಶಸ್ಸಿಗೆ’ ಮನಸೊ ಇಚ್ಚೆ ನಲಿಯುತ್ತೆನೆ,ತಕ್ಷಣ ಮೌನವಾಗುತ್ತೆನೆ.
ಮನಸ್ಸು ಮುದುಡಿಕೊಳ್ಳುತ್ತೆ,ಮೌನಮಾತಾಗುತ್ತೆ,ದಾರಿದೀಪವಾಗುತ್ತೆ. " - ಮಾತುಗಳು ತುಂಬಾ ಇಷ್ಟ ಆಯ್ತು. ನನ್ನಲ್ಲಿ ನಾನು ಗುರುತಿಸಿಗೊಂಡ ಮಾತುಗಳಿವು.

ಆದ್ರೆ ಅರ್ಥ ಆಗದಿರೋದು ಅಂದ್ರೆ ಯಾರು ಆ ಹುಡುಗಿ ನಿನ್ನನ್ನು ಅಷ್ಟೊಂದು ಡಿಸ್ಟರ್ಬ್ ಮಾಡಿದವ್ಲು?

ಸಂತೋಷಕುಮಾರ said...

ಸಂಗಮೇಶ್
ಆ ಸಾಲುಗಳು ನಿಜಕ್ಕೂ ನಂಗೂ ಹತ್ತಿರ. ಇಡಿ ಬರಹದ ಭಾವ ಆ ಸಾಲುಗಳಲ್ಲಿ ಘನಿಭವಿಸಿದೆ. ಅದನ್ನು ಗ್ರಹಿಸಿದ ನಿನ್ನ ಸೂಕ್ಷ್ಮ ಮನಸ್ಸಿಗೆ ನನ್ನ ಥಾಂಕ್ಸ..